ಹಿರಿಯ ನಾಗರಿಕರು ಸಮಾಜಕ್ಕೆ ದಾರಿದೀಪ ಇದ್ದಂತೆ

KannadaprabhaNewsNetwork | Published : Oct 29, 2024 12:53 AM

ಸಾರಾಂಶ

ದೇಶದ ಎಲ್ಲ ನಾಗರೀಕರಿಗೆ ಕಾನೂನು ಅರಿವು ಮೂಡಿಸುವ ಸಲುವಾಗಿ ಕಾನೂನು ಸೇವಾ ಪ್ರಾಧಿಕಾರ ತಿಂಗಳಲ್ಲಿ ಹಲವು ಸಾರಿ ಕಾನೂನು ಅರಿವಿನ ಕಾರ್ಯಕ್ರಮ ಅಯೋಜನೆ ಮಾಡಲಾಗುವುದು, ಬಡ ಜನರಿಗೆ ಅಂಗವಿಕಲರಿಗೆ ಮಹಿಳೆಯರಿಗೆ ಉಚಿತ ಕಾನೂನು ಸೇವೆ ಸಹ ನೀಡಲಾಗುವುದು ಇದರ ಪ್ರಯೋಜನೆ ಪಡೆಯಿರಿ.

ಕನ್ನಡಪ್ರಭ ವಾರ್ತೆ ಗೌರಿಬಿದನೂರು

ಹಿರಿಯ ನಾಗರಿಕರು ಕುಟುಂಬ ಮತ್ತು ಸಮಾಜಕ್ಕೆ ದಾರಿದೀಪ ಇದ್ದಂತೆ. ಅವರನ್ನು ಗೌರವಿಸುವುದು ನಮ್ಮಲ್ಲರ ಅಧ್ಯೆ ಕರ್ತವ್ಯವಾಗಿದೆ ಎಂದು ಪ್ರಧಾನ ಸಿವಿಲ್ ನ್ಯಾಯದೀಶ ಪಿ.ಎಂ.ಸಚಿನ್ ತಿಳಿಸಿದರು.ನಗರದ ಹೊರವಲದಲ್ಲಿರುವ ತಾಲೂಕು ಕಚೇರಿ ಸಭಾಂಗಣದಲ್ಲಿ ಕಾನೂನು ಸೇವೆ ಸಮಿತಿ, ವಕೀಲ ಸಂಘ,ಶಿಕ್ಷಣ ಇಲಾಖೆ ಅರೋಗ್ಯ ಇಲಾಖೆ ಸಹಯೋಗದಲ್ಲಿ ಸಂಘಟಿತ ಕಾರ್ಮಿಕರು ಹೊರಗುತ್ತಿಗೆ ಮತ್ತು ಕಾರ್ಮಿಕರಿಗೆ ಒಂದು ದಿನ ಕಾರ್ಯಗಾರ ಮತ್ತು ಹಿರಿಯ ನಾಗರಿಕರ ದಿನಚರಣೆ ವನ್ನು ಉದ್ಟಾಟಿಸಿ ಮಾತನಾಡಿದರು.

ಉಚಿತ ಕಾನೂನು ಸೇವೆ

ದೇಶದ ಎಲ್ಲ ನಾಗರೀಕರಿಗೆ ಕಾನೂನು ಅರಿವು ಮೂಡಿಸುವ ಸಲುವಾಗಿ ಕಾನೂನು ಸೇವಾ ಪ್ರಾಧಿಕಾರ ತಿಂಗಳಲ್ಲಿ ಹಲವು ಸಾರಿ ಕಾನೂನು ಅರಿವಿನ ಕಾರ್ಯಕ್ರಮ ಅಯೋಜನೆ ಮಾಡಲಾಗುವುದು, ಬಡ ಜನರಿಗೆ ಅಂಗವಿಕಲರಿಗೆ ಮಹಿಳೆಯರಿಗೆ ಉಚಿತ ಕಾನೂನು ಸೇವೆ ಸಹ ನೀಡಲಾಗುವುದು ಇದರ ಪ್ರಯೋಜನೆ ಪಡೆಯಿರಿ ಪ್ರತಿ ನಾಗರೀಕರಿಗೆ ಸಾಮಾನ್ಯ ಕಾನೂನು ಅರಿವು ಅಗತ್ಯ ಈ ನಿಟ್ಟಿನಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಎಂದರು.

ಹಿರಿಯ ನಾಗರೀಕರು ಕುಟುಂಬದ ಕಣ್ಣು ಸಮಾಜದ ದಾರಿದೀಪ ಅವರನ್ನು ಗೌರವಿಸಿ ಅವರನ್ನು ನಿರ್ಲಕ್ಷ್ಯ ಅಕ್ಷಮ್ಯವಾಗಿದೆ,ಅವರಿಗೆ ಊಟ ವಸತಿ ಅರೋಗ್ಯದ ಕಡೆ ಮಕ್ಕಳು ಹೆಚ್ಚು ಕಾಳಜಿ ವಹಿಸಿ ಮತ್ತು ಅವರಿಗೆ ಸರ್ಕಾರಿದಿಂದ ಅನೇಕ ಯೋಜನೆಗಳು ಅನುಷ್ಥಾನಗೊಳಸಿದೆ ಎಂದರು.ಹಿರಿಯ ಬಗ್ಗೆ ಮಕ್ಕಳ ನಿರ್ಲಕ್ಷ್ಯ

ಹಿರಿಯ ವಕೀಲ ಕೆ.ಲಕ್ಷ್ಮೀನಾರಾಯಣ್ ಮಾತನಾಡಿ ಹಿರಿಯ ನಾಗರಿಕರು ಗ್ರಾಮಾಂತರ ಪ್ರದೇಶ ಅವರ ಪರಿಸ್ಥಿತಿ ದುಸ್ತರವಾಗಿದೆ ಮಕ್ಕಳು ಅವರನ್ನು ತೀವ್ರ ನಿರ್ಲಕ್ಷ್ಯ ವಹಿಸಿರುವುದನ್ನು ಕಾಣಬಹುದು. ಇತ್ತೀಚಿನ ದಿನಗಳಲ್ಲಿ ಅನಾಥ ಆಶ್ರಮಕ್ಕೆ ಕಳುಸುವುದು ಹೆಚ್ಚಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಮಹೇಶ್ ಪತ್ರಿ ,ಶಿಕ್ಷಣ ಇಲಾಖೆ ಶ್ರೀನಿವಾಸಮೂರ್ತಿ ಸರ್ಕಾರಿ ಅಭಿಯೋಜಕ ಪಯಾಜ್ ಪಟೀಲ್,ವಕೀಲ ಜಗದೀಶ್ ಕಾರ್ಯದರ್ಶಿ ದಯನಂದ್,ಕಾರ್ಖಾನೆಗಳ ಉಪನಿರ್ದೇಶಕ ಸೋಮಶೇಖರ್,ಕಾರ್ಮಿಕ ರಾಜ್ಯ ವಿಮಾ ಯೋಜನೆ ಅಧಿಕಾರಿ,ಪ್ರಭುಕುಮಾರ್ ಬಸವ ಪ್ರಭು, ಜಿಲ್ಲಾ ಕಾರ್ಮಿಕ ಇಲಾಖೆ ನಿರೀಕ್ಷಕಿ ಶಬನಾ ಅಜ್ಮಿ, ಕಾರ್ಮಿಕ ನಿರೀಕ್ಷಕ ಸತೀಶ್ ಮುಂತಾದವರು ಹಾಜರಿದ್ದರು.

Share this article