ಹಿರಿಯ ಪಾಡ್ದನಗಾರ್ತಿ ಗೋಪಿ ಪಾಣರಿಗೆ ಪಾಡ್ದನ ಪ್ರಶಸ್ತಿ ಪ್ರದಾನ

KannadaprabhaNewsNetwork | Published : Apr 16, 2024 1:01 AM

ಸಾರಾಂಶ

ದೆಂದೂರು ಕೊಲ್ಲು ಕೃಷ್ಣ ಶೆಟ್ಟಿ ಫೌಂಡೇಶನ್ ಮತ್ತು ಉಡುಪಿ ಜೈಂಟ್ ಗ್ರೂಪ್‌ ವತಿಯಿಂದ ಹಿರಿಯ ಪಾಡ್ದನಗಾರ್ತಿ ಗೋಪಿ ಪಾಣರ ಮೂಡುಬೆಟ್ಟು ಅವರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಕಾಪು

ತುಳುವರು ತುಳುನಾಡ ಮಣ್ಣನ್ನು ನಂಬಿ ಬದುಕಿದವರು. ದೈವವನ್ನು ಆವಾಹನೆ ಮಾಡಿಕೊಂಡು ನಮ್ಮ ಆಚರಣೆ, ನಂಬಿಕೆಯನ್ನು ಗಟ್ಟಿಗೊಳಿಸುವ ಪ್ರಯತ್ನವನ್ನು ಪಾಡ್ದನದ ಮೂಲಕ ಮಾಡಿಕೊಂಡವರು. ಪಾಡ್ದನ ಎಂದರೆ ಜನರಿಂದ ಜನರಿಗೆ ಹರಿದು ಬಂದ ಜಾನಪದ ಸೆಲೆ. ಇದು ತುಳು ಜನಜೀವನ ಅಭಿಪ್ರಾಯಪಟ್ಟರು.

ಅವರು ಇಲ್ಲಿನ ದೆಂದೂರು ಕೊಲ್ಲು ಕೃಷ್ಣ ಶೆಟ್ಟಿ ಫೌಂಡೇಶನ್ ಮತ್ತು ಉಡುಪಿ ಜೈಂಟ್ ಗ್ರೂಪ್‌ ವತಿಯಿಂದ ನಡೆದ ಹಿರಿಯ ಪಾಡ್ದನಗಾರ್ತಿ ಗೋಪಿ ಪಾಣರ ಮೂಡುಬೆಟ್ಟು ಅವರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕನ್ನಡ ಜಾನಪದ ಪರಿಷತ್ ಜಿಲ್ಲಾ ಪ್ರ.ಕಾರ್ಯದರ್ಶಿ ಪ್ರಕಾಶ್ ಸುವರ್ಣ ಕಟಪಾಡಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ನೂರಾರು ವರ್ಷಗಳ ಹಿಂದಿನ ಜನಪದ ತುಳು ಪಾಡ್ದನವನ್ನು ಇಂದಿನವರೆಗೆ ಕಾಪಾಡಿಕೊಂಡವರು ದೈವ ನರ್ತಕರು. ಆದರೆ ಅವುಗಳ ಸೂಕ್ತ ದಾಖಲೀಕರಣವಾಗದಿದ್ದರೆ ಮಂದಿನ ತಲೆಮಾರು ಮರೆತು ಹೋಗಬಹುದು ಎಂದರು.

ಈ ಸಂದರ್ಭದಲ್ಲಿ ಹಿರಿಯ ಪಾಡ್ದನಗಾರ್ತಿ ಗೋಪಿ ಪಾನರ ಮೂಡುಬೆಟ್ಟು ಕಟಪಾಡಿ ಅವರಿಗೆ ಪಾಡ್ದನ ಪ್ರಶಸ್ತಿ ಸಹಿತ 5 ಸಾವಿರ ರು. ನಗದಿನೊಂದಿಗೆ ಪತಿ ವಾಮಯ್ಯರ ಜೊತೆಗೂಡಿ ಗೌರವಿಸಲಾಯಿತು. ಈ ಸಂದರ್ಭ ಗೋಪಿ ಪಾಣಾರ ಅವರು ವರ್ತೆ ಪಂಜುರ್ಲಿ ದೈವದ ಪಾಡ್ದನ ಹಾಡಿದರು.

ಮುಖ್ಯ ಅತಿಥಿಗಳಾಗಿದ್ದ ಉದ್ಯಮಿ ದೆಂದೂರು ಸುಭಾಷ್‌ ಎಂ. ಸಾಲಿಯನ್, ಪ್ರಾಯೋಜಕರಾದ ಸಮಾಜಸೇವಕ ಚೇತನ್ ಕುಮಾರ್ ಶೆಟ್ಟಿ ಬ್ರಹ್ಮಾವರ‌, ಜೈಂಟ್ ಸಂಸ್ಥೆ ಅಧ್ಯಕ್ಷ ಯಶವಂತ್ ಆಗಮಿಸಿದ್ದರು. ಫೌಂಡೇಶನ್ ಗೌರವಾಧ್ಯಕ್ಷೆ ದೀಪಾ ಚೇತನ್ ಕುಮಾರ್ ಶೆಟ್ಟಿ, ಕಾರ್ಯದರ್ಶಿ ಗುಣವತಿ ಡಿ. ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಸಂಸ್ಥೆಯ ಅಧ್ಯಕ್ಷ ದಯಾನಂದ ಕೆ. ಶೆಟ್ಟಿ ದೆಂದೂರು ಸ್ವಾಗತಿಸಿ, ಪ್ರಸ್ತಾವನೆಗೈದರು. ಟ್ರಸ್ಟಿ ಇಶಾನಿ ಶೆಟ್ಟಿ ಸನ್ಮಾನ ಪತ್ರ ವಾಚಿಸಿದರು. ಉಪನ್ಯಾಸಕ ದಯಾನಂದ ಕಿದಿಯೂರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Share this article