ಹಿರಿಯರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಲಿ: ಡಾ.ಬಿ.ಕೆ.ಮೇಘಶ್ರೀ

KannadaprabhaNewsNetwork |  
Published : Oct 25, 2026, 01:30 AM IST
ಸಿಕೆಬಿ-1  ನಗರದ ಸರ್ಕಾರಿ ನೌಕರರ ಭವನದಲ್ಲಿ   ಸರ್ಕಾರಿ ನಿವೃತ್ತ ನೌಕರರ ಜಿಲ್ಲಾ ಸಂಘದ ವತಿಯಿಂದ ಆಯೋಜಿಸಿದ್ದ “ಮಾಹೆಗೊಮ್ಮೆ ಉಚಿತ ಆರೋಗ್ಯ ಸಲಹೆ” ಕಾರ್ಯಕ್ರಮದಲ್ಲಿ ಡಾ.ಬಿ.ಕೆ.ಮೇಘಶ್ರೀ ಮಾತನಾಡಿದರು | Kannada Prabha

ಸಾರಾಂಶ

ವ್ಯಾಯಾಮ, ವೈದ್ಯಕೀಯ ತಪಾಸಣೆ, ಸಾಕಷ್ಟು ನಿದ್ರೆ ಮತ್ತು ಮಾನಸಿಕ ನೆಮ್ಮದಿ ಇವುಗಳು ನೆಮ್ಮದಿಯ ಬದುಕಿಗೆ ಬಹು ಮುಖ್ಯ.

ಮಾಹೇಗೊಮ್ಮೆ ಉಚಿತ ಆರೋಗ್ಯ ಸಲಹೆ ಕಾರ್ಯಕ್ರಮದಲ್ಲಿ ವೈದ್ಯಾಧಿಕಾರಿ ಡಾ.ಬಿ.ಕೆ.ಮೇಘಶ್ರೀ ಸಲಹೆ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಇಳಿ ವಯಸ್ಸಿನಲ್ಲಿ ನಿಯಮಿತವಾಗಿ ಭೌತಿಕ ಆಹಾರ ಸೇವನೆ ಮಾಡುತ್ತಾ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸುವುದು ಅತ್ಯಗತ್ಯ ಎಂದು ಮಂಡಿಕಲ್‌ನ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಬಿ.ಕೆ.ಮೇಘಶ್ರೀ ಸಲಹೆ ನೀಡಿದರು.

ನಗರದ ಸರ್ಕಾರಿ ನೌಕರರ ಭವನದಲ್ಲಿ ಸರ್ಕಾರಿ ನಿವೃತ್ತ ನೌಕರರ ಜಿಲ್ಲಾ ಸಂಘದ ವತಿಯಿಂದ ಶನಿವಾರ ಆಯೋಜಿಸಿದ್ದ “ಮಾಹೇಗೊಮ್ಮೆ ಉಚಿತ ಆರೋಗ್ಯ ಸಲಹೆ” ಕಾರ್ಯಕ್ರಮದಲ್ಲಿ ಮಾತನಾಡಿ, ವ್ಯಾಯಾಮ, ವೈದ್ಯಕೀಯ ತಪಾಸಣೆ, ಸಾಕಷ್ಟು ನಿದ್ರೆ ಮತ್ತು ಮಾನಸಿಕ ನೆಮ್ಮದಿ ಇವುಗಳು ನೆಮ್ಮದಿಯ ಬದುಕಿಗೆ ಬಹು ಮುಖ್ಯ, ಸಾಂಪ್ರದಾಯಿಕ ಆಹಾರ ಯೋಗ ಮತ್ತು ಸಮಾಜದೊಂದಿಗೆ ಬೆರೆಯುವುದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ. ಇಳಿ ವಯಸ್ಸಿನಲ್ಲಿರುವ ತಾವು ಸುಲಭವಾಗಿ ಜೀರ್ಣವಾಗುವ ಕ್ಯಾಲ್ಸಿಯಂ ಪ್ರೋಟೀನ್ ಮತ್ತು ನಾರಿನಂಶ ಹೆಚ್ಚಿರುವ ಆಹಾರ ಸೇವಿಸುವುದರ ಜೊತೆಗೆ ಪ್ರತಿದಿನ ಲಘು ನಡಿಗೆಯೋಗ ಅಥವಾ ಪ್ರಾಣಾಯಾಮ ಮಾಡುವುದರಿಂದ ದೇಹ ಕ್ರಿಯಾಶೀಲವಾಗಿರುತ್ತದೆ ಎಂದರು.

ರಕ್ತದೊತ್ತಡ ಮಧುಮೇಹ ಮತ್ತು ಇತರ ಆರೋಗ್ಯ ಸಮಸ್ಯೆಗಳಿಗಾಗಿ ನಿಯಮಿತವಾಗಿ ಹತ್ತಿರದ ಆಸ್ಪತ್ರೆಗೆ ತೆರಳಿ ವೈದ್ಯರನ್ನು ಭೇಟಿ ಮಾಡಿ ಆರೋಗ್ಯದ ಸಮಸ್ಯೆ ನೀಗಿಸಿಕೊಳ್ಳಬಹುದಾಗಿದೆ. ಇದರ ಜೊತೆಗೆ . ಕುಟುಂಬ ಮತ್ತು ನೆರೆ ಹೊರೆಯವರೊಂದಿಗೆ ಉತ್ತಮ ಸಂಬಂಧ ಬೆಸೆದು, ಅವರೊಂದಿಗೆ ಸಮಯ ಕಳೆಯುವ ಹವ್ಯಾಸಗಳನ್ನು ಬೆಳೆಸಿಕೊಳ್ಳುವುದು ಮತ್ತು ಒತ್ತಡರಹಿತ ಜೀವನ ನಡೆಸುವುದರಿಂದ ಮಾನಸಿಕ ನೆಮ್ಮದಿ ಕಾಣಬಹುದಾಗಿದೆ ಎಂದರು.

ಸರ್ಕಾರಿ ನಿವೃತ್ತ ನೌಕರ ಸಂಘದ ಜಿಲ್ಲಾಧ್ಯಕ್ಷ ಡಾ.ಬಿ.ವಿ. ಕೃಷ್ಣ ಮಾತನಾಡಿ, ಕಳೆದ 5 ವರ್ಷಗಳಿಂದ ಸರ್ಕಾರಿ ಕೆಲಸದಿಂದ ವಯೋ ನಿವೃತ್ತಿಯಾದ ನಮ್ಮ ಸಂಘದ ಸದಸ್ಯರಿಗಾಗಿ ಸಾಕಷ್ಟು ಆರೋಗ್ಯ ಸಲಹಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರಲಾಗುತ್ತಿದ್ದು, ಇದರಲ್ಲಿ ಸಾಕಷ್ಟು ಮಂದಿ ವೈದ್ಯರು ಆರೋಗ್ಯದ ಸಲಹೆಗಳನ್ನು ನೀಡುತ್ತಾ ಬಂದಿದೆ. ಇದರಿಂದ ತಿಳಿ ವಯಸ್ಸಿನ ನಮಗೆಲ್ಲ ಸಾಕಷ್ಟು ಉಪಯುಕ್ತಕರವಾಗಿದೆ ಎಂದರು.

ಕಾರ್ಯದರ್ಶಿ ತಿರುಮಲಪ್ಪ ಮಾತನಾಡಿ, ಇಂದಿನ ಆಹಾರ ಪದ್ದತಿ, ಮಾನಸಿಕ ಒತ್ತಡ, ಜೀವನ ಶೈಲಿಗಳು ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದ್ದು, ಇದರಿಂದ ಮಧುಮೇಹ, ರಕ್ತದೊತ್ತಡದಂತಹ ಕಾಯಿಲೆಗಳಿಗೆ ಜನರು ಬಹುಬೇಗ ತುತ್ತಾಗುತ್ತಿದ್ದಾರೆ. ಆರೋಗ್ಯ ತಪಾಸಣೆಗೆ ಒಳಗಾದರೆ ವೈದ್ಯರು ಕಾಯಿಲೆ ಇದೆ ಎಂದು ಎಲ್ಲಿ ಹೇಳಿಬಿಡುತ್ತಾರೋ ಎಂಬ ಭಯದಿಂದಾಗಿ ಬಹಳಷ್ಟು ಜನರು ತಪಾಸಣೆಗೆ ಹಿಂದೇಟು ಹಾಕುತ್ತಿದ್ದಾರೆ.

ಹೀಗಾಗಿ ರೋಗ ಉಲ್ಭಣಿಸಿದ ನಂತರ ಪಡಿಪಾಟಲು ಪಡುವ ಪರಿಸ್ಥಿತಿ ಉಂಟಾಗುತ್ತಿದೆ. ಉಚಿತ ಆರೋಗ್ಯ ಸಲಹೆಯಿಂದ ಆರೋಗ್ಯ ಸಲಹೆಯಂತ ಉಚಿತ ಕಾರ್ಯಕ್ರಮದಲ್ಲಿ ಮುಕ್ತವಾಗಿ ಸಮಸ್ಯೆಗಳನ್ನ ಹೇಳಿಕೊಂಡು ನೀಗಿಸಿಕೊಳ್ಳುವಂತಾಗಿದೆ. ಇದು ಒಳ್ಳೆಯ ಬೆಳವಣಿಗೆ ಎಂದರು..

ಉಚಿತ ಆರೋಗ್ಯ ಸಲಹೆಯಲ್ಲಿ ಪಾಲ್ಗೊಂಡು ಎಲ್ಲರಿಗೂ ಆರೋಗ್ಯದ ಸಲಹೆ ನೀಡಿದ ಡಾ.ಬಿ.ಕೆ.ಮೇಘಶ್ರೀ ಅವರನ್ನು ಇದೆ ವೇಳೆ ಸಂಘದ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಶ್ರೀನಿವಾಸ ರೆಡ್ಡಿ, ದಸ್ತಗೀರ್, ಜಯರಾಮರೆಡ್ಡಿ, ಹೈದರಾಲಿಖಾನ್, ನಾರಾಯಣಸ್ವಾಮಿ ಸೇರಿದಂತೆ ಮತ್ತಿತರ ಸಂಘದ ಪದಾಧಿಕಾರಿಗಳು, ಸದಸ್ಯರು ಇದ್ದರು.

ಸಿಕೆಬಿ-1 ನಗರದ ಸರ್ಕಾರಿ ನೌಕರರ ಭವನದಲ್ಲಿ ಸರ್ಕಾರಿ ನಿವೃತ್ತ ನೌಕರರ ಜಿಲ್ಲಾ ಸಂಘದ ವತಿಯಿಂದ ಆಯೋಜಿಸಿದ್ದ “ಮಾಹೆಗೊಮ್ಮೆ ಉಚಿತ ಆರೋಗ್ಯ ಸಲಹೆ” ಕಾರ್ಯಕ್ರಮದಲ್ಲಿ ಡಾ.ಬಿ.ಕೆ.ಮೇಘಶ್ರೀ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಳೆಯ ಸಿಂಚನ ನಡುವೆಯೂ ಧಮ್ಮ ನಡಿಗೆ
ಶಿಕ್ಷಣದ ಮೂಲಕವೇ ಸಮುದಾಯ ಪರಿವರ್ತನೆ ಸಾಧ್ಯ