ವಿದ್ಯಾರ್ಥಿ ಮಂತ್ರಿ ಮಂಡಲದಿಂದ ಕರ್ತವ್ಯ-ಜವಾಬ್ದಾರಿ ಪ್ರಜ್ಞೆ

KannadaprabhaNewsNetwork |  
Published : Jun 24, 2026, 02:00 AM IST
ಸಸ | Kannada Prabha

ಸಾರಾಂಶ

ಚಿಕ್ಕಮಗಳೂರುವಿದ್ಯಾರ್ಥಿಗಳು ಬಾಲ್ಯದಲ್ಲೇ ವಿದ್ಯಾರ್ಥಿ ಪರಿಷತ್ತಿನ ಮಂತ್ರಿ ಮಂಡಲದಲ್ಲಿ ಸೇರುವುದರಿಂದ ಕರ್ತವ್ಯ ಮತ್ತು ಜವಾಬ್ದಾರಿ ಪ್ರಜ್ಞೆ ಮೂಡುತ್ತದೆ ಎಂದು ಕಳಸಾಪುರ ಸರ್ಕಾರಿ ಪದವಿ ಪೂರ್ವಕಾಲೇಜಿನ ಪ್ರಾಚಾರ್ಯ ಎಚ್.ಎಂ.ನಾಗರಾಜರಾವ್‌ ಕಲ್ಕಟ್ಟೆ ಹೇಳಿದರು.

ವಿದ್ಯಾರ್ಥಿಪರಿಷತ್‌ನ ಪದಗ್ರಹಣದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ವಿದ್ಯಾರ್ಥಿಗಳು ಬಾಲ್ಯದಲ್ಲೇ ವಿದ್ಯಾರ್ಥಿ ಪರಿಷತ್ತಿನ ಮಂತ್ರಿ ಮಂಡಲದಲ್ಲಿ ಸೇರುವುದರಿಂದ ಕರ್ತವ್ಯ ಮತ್ತು ಜವಾಬ್ದಾರಿ ಪ್ರಜ್ಞೆ ಮೂಡುತ್ತದೆ ಎಂದು ಕಳಸಾಪುರ ಸರ್ಕಾರಿ ಪದವಿ ಪೂರ್ವಕಾಲೇಜಿನ ಪ್ರಾಚಾರ್ಯ ಎಚ್.ಎಂ.ನಾಗರಾಜರಾವ್‌ ಕಲ್ಕಟ್ಟೆ ಹೇಳಿದರು.ನಗರದ ಜ್ಯೋತಿನಗರದ ಸಂಜೀವಿನಿ ವಿದ್ಯಾಸಂಸ್ಥೆಯಲ್ಲಿ ಶನಿವಾರ ನಡೆದ ಶಾಲಾ ವಿದ್ಯಾರ್ಥಿಪರಿಷತ್‌ನ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿ ಪ್ರತಿಯೊಬ್ಬರಿಗೂ ಅಂತರ್ಗತ ನಾಯಕತ್ವದ ಶಕ್ತಿ ಇರುತ್ತದೆ. ಕರ್ತೃತ್ವ ಮತ್ತು ಕ್ರಿಯಾಶಕ್ತಿ ಎರಡೂ ಮೇಳೈಸಿದಾಗ ಸಮಾಜದಲ್ಲಿ ಸುಧಾರಣೆ ತರಲು ಸಾಧ್ಯ ಎಂದರು.

ಮನೆ, ಶಾಲೆ, ಊರು ಎಲ್ಲವೂ ನಮ್ಮನ್ನು ಪೋಷಿಸುತ್ತಿರುವಾಗ ಅವುಗಳಿಗೆ ಸಕಾರಾತ್ಮಕ ಪ್ರತಿ ಸ್ಪಂದನೆ ನೀಡಿ ಅಭಿವೃದ್ಧಿಗೆ ಸಹಕರಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಹೇಳಿದರು.

ವಿದ್ಯಾಸಂಸ್ಥೆ ಅಧ್ಯಕ್ಷೆ ಎಸ್.ಶಾಂತಕುಮಾರಿ ಮಾತನಾಡಿ, ಇದೀಗ ಮಂತ್ರಿ ಮಂಡಲಕ್ಕೆ ಆಯ್ಕೆಯಾಗಿದ ವಿದ್ಯಾರ್ಥಿಗಳಿಗೆ ವ್ಯವಸ್ಥೆ ಮುನ್ನಡೆಸುವ ಕುರಿತಾದ ಪರೀಕ್ಷೆಗಳು ಪ್ರಾರಂಭವಾಗಲಿದೆ. ತಾವು ವಹಿಸಿಕೊಂಡ ಜವಾಬ್ದಾರಿ ಸಮರ್ಪಕವಾಗಿ ನಿರ್ವಹಿಸುವ ಜೊತೆಗೆ ಸಂಸ್ಥೆ ಪ್ರಾಂಶುಪಾಲರು ಹಾಗೂ ಸಿಬ್ಬಂದಿಗೆ ಸಹಕಾರ ನೀಡಬೇಕು ಎಂದು ಸೂಚಿಸಿದರು.

ಈಗಾಗಲೇ ಸಂಸ್ಥೆ ಸಿಬ್ಬಂದಿ ನಮ್ಮ ಸಂಸ್ಥೆಯ ಪರಿಸರವನ್ನು ಶುಚಿತ್ವವಾಗಿಡುವಲ್ಲಿ ಯಶಸ್ವಿಯಾಗಿದ್ದು, ಈ ಪರಿಸ್ಥಿತಿ ಯಥಾವತ್ತಾಗಿ ಮುಂದುವರಿಯಬೇಕು ಎಂದರು.

ಸಂಸ್ಥೆ ಕಾರ್ಯದರ್ಶಿ ಎಂ.ಪಿ.ಉಡುಪ, ಉಪ ಕಾರ್ಯದರ್ಶಿ ಡಾ.ಡಿ.ಪಿ.ಮೋಹನ್, ಸಂಸ್ಥೆಯ ಪ್ರಾಂಶುಪಾಲರಾದ ಎಸ್.ಆರ್.ಹೇಮಾ, ಮುಖ್ಯಶಿಕ್ಷಕಿ ಎಂ.ಕುಮುದಾ ಆಡಳಿತ ಮಂಡಳಿ ಸದಸ್ಯಎಂ.ಎನ್.ರಂಗನಾಥನ್‌ ಉಪಸ್ಥಿತರಿದ್ದರು. ---ಬಾಕ್ಸ್‌---

ಪರಿಷತ್‌ಗೆಆಯ್ಕೆಯಾದ ವಿದ್ಯಾರ್ಥಿಗಳು:

ಎನ್.ಯುಕ್ತ (ಮುಖ್ಯಚುನಾವಣಾಆಯುಕ್ತೆ), ಬಿ.ಜಿ.ಗುಣಶ್ರೀ (ಚುನಾವಣಾಆಯುಕ್ತೆ), ಪೃಥ್ವಿರಾಜ್ (ಚುನಾವಣಾಆಯುಕ್ತ), ಆರ್.ಪ್ರಹಂತ್‌(ಅಧ್ಯಕ್ಷ), ಆರ್.ವರ್ಷಾ (ಪ್ರಧಾನ ಮಂತ್ರಿ), ಲಿಥಿ ಗೌಡ (ಸಾಂಸ್ಕೃತಿಕ ಮಂತ್ರಿ), ಮದನ್ (ಶಿಕ್ಷಣ ಮಂತ್ರಿ), ಕೆ.ಯಶಸ್ (ಶಿಸ್ತು ಖಾತೆ ಸಚಿವ), ಕೆ.ವಿ.ಮೋಹಿತ್ (ಕ್ರೀಡಾ ಸಚಿವ), ಕಾಜಲ್ (ಸಾಂಸ್ಕೃತಿಕ ಸಚಿವೆ), ಉಮಾ ಶಂಕರ್ (ಪರಿಸರಖಾತೆ ಸಚಿವ) ಹಾಗೂ ಜಿ.ಎಂ.ಅಭಯ್‌(ಆರೋಗ್ಯ ಸಚಿವ).

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆಂಧ್ರ ಜೋಳ ಕರ್ನಾಟಕದಲ್ಲಿ ಮಾರಾಟ ಮಾಡುವ ಜಾಲ ಪತ್ತೆ; ಪ್ರಕರಣ ದಾಖಲು
ರಾಸಾಯನಿಕ ಗೊಬ್ಬರ ತಗ್ಗಿಸಿ, ಸಾವಯವ ಕೃಷಿಗೆ ಆದ್ಯತೆ ನೀಡಿ