ಪ್ರತಿದಿನ ಭಜನೆ, ಸಾಂಸ್ಕೃತಿಕ ವೈಭವ, ಯಕ್ಷಗಾನ ಪ್ರಸಂಗಗಳ ಸರಣಿ ಪ್ರದರ್ಶನ
ಕನ್ನಡಪ್ರಭ ವಾರ್ತೆ ಮೂಲ್ಕಿಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನವರಾತ್ರೀ ಪೂಜಾ ಮಹೋತ್ಸವ 22ರಿಂದ ಅ.2ರ ವರೆಗೆ ಜರುಗಲಿದೆ. ಪ್ರತಿದಿನ ಬೆಳಗ್ಗೆ 9.30ರಿಂದ ಸಂಜೆ 4 ರ ತನಕ ವಿವಿಧ ತಂಡಗಳಿಂದ ಭಜನೆ, ಸಂಜೆ 4 ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಂಜೆ 7 ರಿಂದ ಸರಸ್ವತಿ ಸದನದಲ್ಲಿ ಯಕ್ಷಗಾನ ಬಯಲಾಟ ನಡೆಯಲಿದೆ.22ರಂದು ತುಳು ತಾಳಮದ್ದಲೆ ‘ಶನೇಶ್ವರ ಮಹಾತ್ಮಂ’, ಕವಿ: ಗಣೇಶ ಕೊಲಕಾಡಿ, ಯಕ್ಷಗಾನ-‘ಕೃಷ್ಣ ಸಂಧಾನ-ಕರ್ಣಭೇದನ’, 23 ರಂದು ಭರತನಾಟ್ಯ ವಿದುಷಿ ರಾಧಿಕಾ ಅಯ್ಯಂಗಾರ್ ನಾದನರ್ತನ ಸ್ಕೂಲ್ ಡ್ಯಾನ್ಸ್ ಮತ್ತು ಮ್ಯೂಸಿಕ್, ಬೆಂಗಳೂರು, ಕೊಳಲುವಾದನ ; ವಾಣಿ ಮಂಜುನಾಥ, ಬೆಂಗಳೂರು, ಯಕ್ಷಗಾನ : ಭೀಷ್ಮಪರ್ವ ನಡೆಯಲಿದೆ.24 ರಂದು ತೃತೀಯ ದಿನದ ಮೆರವಣಿಗೆ ಸಮಿತಿಯ 40ನೇ ವರ್ಷದ ವರ್ಷಾಚರಣೆ ಮತ್ತು ತೆಂಕು-ಬಡಗು ಯಕ್ಷಗಾನ ಕಲಾವಿದರಿಂದ ಯಕ್ಷಗಾನ ‘ದಾಕ್ಷಾಯಿಣಿ-ಶಶಿಪ್ರಭೆ’, 25ರಂದು ಭಕ್ತಿ ಸಂಗೀತ ಎಂ.ಎಸ್. ಗಿರಿಧರ ಮತ್ತು ವಸುಂದರ ಗಿರಿಧರ ಮಂಗಳೂರು, ಭರತನಾಟ್ಯ ಬಿಲ್ವ ಕಲಾಶಾಲೆ, ಕಿನ್ನಿಗೋಳಿ ಅವರಿಂದ, ಯಕ್ಷಗಾನ: ದ್ರೋಣಸೇನಾಧಿಪತ್ಯ-ಅಭಿಮನ್ಯು ಕಾಳಗ, 26ರಂದು ನೃತ್ಯ ನಾಟ್ಯಧಾರ ತಂಡ, ಗಿರಿನಗರ, ಬೆಂಗಳೂರು ಇವರಿಂದ ಭರತನಾಟ್ಯ, ವಿಭಾ ರಾಘವೇಂದ್ರ, ಬೆಂಗಳೂರು, ಯಕ್ಷಗಾನ ‘ಸೈಂಧವ ವಧೆ’ ನಡೆಯಲಿದೆ.ಲಲಿತಾ ಪಂಚಮಿ: 27ರಂದು ಲಲಿತಾಪಂಚಮೀ ಪ್ರಯುಕ್ತ ಶಾಸ್ತ್ರೀಯ/ಭಕ್ತಿಗಾಯನ : ಸ್ವಾತಿ ರೈ ಅಮೃತವರ್ಷಿಣಿ ಸಂಗೀತ ಅಕಾಡೆಮಿ ಮಂಗಳೂರು, ಶಾಸ್ತ್ರೀಯ ಸಂಗೀತ ಚಿರಶ್ರೀ ಯು. ಕಾವೂರು, ಯಕ್ಷಗಾನ ‘ಘಟೋತ್ಕಚ ಕಾಳಗ-ದ್ರೋಣಪರ್ವ’, 28 ರಂದು ಶಾಸ್ತ್ರೀಯ ಸಂಗೀತ ಹಾಗೂ ನೃತ್ಯಸೇವೆ, ಅಖಿಲ ಭಾರತೀಯ ಶಾಸ್ತ್ರೀಯ ಸಂಗೀತ ನೃತ್ಯ ಕಲಾವಿದರ ತಂಡ (ದ.ಕ. ಮತ್ತು ಉಡುಪಿ) ಅವರಿಂದ, ಬಡಗತಿಟ್ಟು ಯಕ್ಷಗಾನ ‘ದ್ರೌಪದಿ ಪ್ರತಾಪ’, ಯಕ್ಷಗಾನ ‘ಕರ್ಣಸೇನಾಧಿಪತ್ಯ - ಗಾಂಢೀವ ನಿಂದನೆ’ ನಡೆಯಲಿದೆ.29ರಂದು ಸಪ್ತಮೀ ಮೂಲಾನಕ್ಷತ್ರ, ಶಾರದಾಪೂಜೆ ,ಭರತನಾಟ್ಯ ವಿ. ಡಿ. ನಾಗವೇಣಿ ಲಲಿತ ನೃತ್ಯಕಲಾಮಂದಿರ ರಾಮನಗರ, ಬೆಂಗಳೂರು, ಭರತನಾಟ್ಯ; ನಾಟ್ಯ ವಿದುಷಿ ಸುನೀತಾ ಜಯಂತ ತಂಡದಿಂದ, ನಾಟ್ಯಾಲಯ ಉಳ್ಳಾಲ, ಯಕ್ಷಗಾನ: ‘ದುಶ್ಯಾಸನ ವಧೆ-ಕರ್ಣಪರ್ವ’, 30 ರಂದು ದುರ್ಗಾಷ್ಟಮೀ; ಭರತನಾಟ್ಯ ವಿ. ಶ್ರಾವ್ಯ ಕಿಶೋರ್, ನಾಟ್ಯಕಲಾಂಜಲಿ ನೃತ್ಯ ಅಕಾಡೆಮಿ, ಮುಚ್ಚೂರು, ಕರ್ನಾಟಕ ಸಂಗೀತ ಪ್ರಜ್ಞಾ ಅಡಿಗ, ಉಡುಪಿ, ಯಕ್ಷಗಾನ ‘ಶಲ್ಯಪರ್ವ’ ನಡೆಯಲಿದೆ.ಅ.1ರಂದು ಮಹಾನವಮೀ ಪ್ರಯುಕ್ತ ಆಯುಧಪೂಜೆ, ಭರತನಾಟ್ಯ ಅನಘಶ್ರೀ ನೃತ್ತ ನಿಕೇತನ, ಉಡುಪಿ, ಭರತನಾಟ್ಯ; ವಿ.ಭಾರತಿ ಸುರೇಶ್, ಶ್ರೀ ಶಾರದಾ ನಾಟ್ಯಾಲಯ, ಹೊಸಬೆಟ್ಟು, ಮಂಗಳೂರು,ಯಕ್ಷಗಾನ ‘ಗದಾಯುದ್ಧ’ ನಡೆಯಲಿದೆ.2ರಂದು ವಿಜಯದಶಮೀ ಹಾಗೂ ಮಧ್ವಜಯಂತೀ ಪ್ರಯುಕ್ತ ಕರ್ನಾಟಕ ಶಾಸ್ತ್ರೀಯ ಸಂಗೀತ; ಅದಿತಿ ಕೊಂಕೋಡಿ, ಅಕ್ಷಯನಗರ, ಬೆಂಗಳೂರು ಅವರಿಂದ ಜರಗಲಿದೆಯೆಂದು ದೇವಳದ ಪ್ರಕಟಣೆ ತಿಳಿಸಿದೆ.