ರೇಷ್ಮೆ ಬೆಳೆಗಾರರ ಪ್ರೋತ್ಸಾಹಧನ ಕೂಡಲೇ ಬಿಡುಗಡೆ ಆಗಲಿ

KannadaprabhaNewsNetwork |  
Published : Aug 15, 2026, 02:45 AM IST
14ಎಚ್ಎಸ್ಎನ್16: | Kannada Prabha

ಸಾರಾಂಶ

ಶ್ರವಣಬೆಳಗೊಳ ಹೋಬಳಿ ಆಲದ ಹಳ್ಳಿಯಲ್ಲಿ ಕೃಷಿಕ ಎಂಬ ರೇಷ್ಮೆ ತೋಟದಲ್ಲಿ ನನ್ನ ರೇಷ್ಮೆ ನನ್ನ ಹೆಮ್ಮೆ ಯೋಜನೆ ಅಡಿ ಆಯೋಜಿಸಿದ್ದಾರೆ. ರೇಷ್ಮೆ ಕೃಷಿ ಕ್ಷೇತ್ರೋತ್ಸವ ಹಾಗೂ ರೇಷ್ಮೆ ಬೆಳೆ ವಿಚಾರ ಸಂಕಿರಣ ಸಮಾರಂಭದಲ್ಲಿ ಮಾತನಾಡಿದರು ತಾಲೂಕಿನಲ್ಲಿ ೧೮೦೦ ಎಕರೆ ರೇಷ್ಮೆ ಕೃಷಿ ಇದ್ದು ಕಳೆದ ಎರಡು ವರ್ಷದಿಂದ ನೂರು ಎಕರೆ ವಿಸ್ತೀರ್ಣಗೊಂಡಿದೆ ಸಾವಿರ ಮಂದಿ ರೈತರು ರೇಷ್ಮೆ ಕೃಷಿಯಲ್ಲಿ ತಮ್ಮನ ತೊಡಗಿಸಿಕೊಂಡಿದ್ದು ಬಿತ್ತನೆ ತೆರಿಗೆ ಯೋಗ್ಯ ಪ್ರದೇಶವೆಂದು ಖ್ಯಾತಿ ಹೊಂದಿದೆ ಸರ್ಕಾರ ರೇಷ್ಮೆ ಕೃಷಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಮುಂದಾಗಬೇಕು ಎಂದರು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ತಾಲೂಕಿನಲ್ಲಿ ರೇಷ್ಮೆಕೃಷಿ ವಿಸ್ತರಣೆಯಾಗಿದ್ದು ಕಳೆದ ೧೪ ತಿಂಗಳಿಂದ ರಾಜ್ಯದ ರೇಷ್ಮೆ ಕೃಷಿಕರಿಗೆ ಸರಕಾರದಿಂದ ನೀಡಬೇಕಾದ ಪ್ರೋತ್ಸಾಹಧನ ₹ ೧೪ ಕೋಟಿ ಹಾಗೂ ಜಿಲ್ಲೆಗೆ 1.4 ಕೋಟಿ ರು. ಶೀಘ್ರವಾಗಿ ಬಿಡುಗಡೆ ಮಾಡಬೇಕು ಎಂದು ಶಾಸಕ ಸಿ. ಎನ್. ಬಾಲಕೃಷ್ಣ ಸರಕಾರವನ್ನು ಒತ್ತಾಯಿಸಿದರು.

ತಾಲೂಕಿನ ಶ್ರವಣಬೆಳಗೊಳ ಹೋಬಳಿ ಆಲದ ಹಳ್ಳಿಯಲ್ಲಿ ಕೃಷಿಕ ಎಂಬ ರೇಷ್ಮೆ ತೋಟದಲ್ಲಿ ನನ್ನ ರೇಷ್ಮೆ ನನ್ನ ಹೆಮ್ಮೆ ಯೋಜನೆ ಅಡಿ ಆಯೋಜಿಸಿದ್ದಾರೆ. ರೇಷ್ಮೆ ಕೃಷಿ ಕ್ಷೇತ್ರೋತ್ಸವ ಹಾಗೂ ರೇಷ್ಮೆ ಬೆಳೆ ವಿಚಾರ ಸಂಕಿರಣ ಸಮಾರಂಭದಲ್ಲಿ ಮಾತನಾಡಿದರು ತಾಲೂಕಿನಲ್ಲಿ ೧೮೦೦ ಎಕರೆ ರೇಷ್ಮೆ ಕೃಷಿ ಇದ್ದು ಕಳೆದ ಎರಡು ವರ್ಷದಿಂದ ನೂರು ಎಕರೆ ವಿಸ್ತೀರ್ಣಗೊಂಡಿದೆ ಸಾವಿರ ಮಂದಿ ರೈತರು ರೇಷ್ಮೆ ಕೃಷಿಯಲ್ಲಿ ತಮ್ಮನ ತೊಡಗಿಸಿಕೊಂಡಿದ್ದು ಬಿತ್ತನೆ ತೆರಿಗೆ ಯೋಗ್ಯ ಪ್ರದೇಶವೆಂದು ಖ್ಯಾತಿ ಹೊಂದಿದೆ ಸರ್ಕಾರ ರೇಷ್ಮೆ ಕೃಷಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಮುಂದಾಗಬೇಕು ಎಂದರು.

ಈ ಸಂಬಂಧ ಮುಂಬರುವ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆಯುವುದಾಗಿ ತಿಳಿಸಿದ ಅವರು, ಚಾಕಿ ಕೇಂದ್ರಗಳಿಗೆ ಕೇಂದ್ರ ಸರ್ಕಾರ ಶೇಕಡ ೬೦ ಸಹಾಯಧನ ನೀಡುತ್ತಿದ್ದು ಪರಿಶಿಷ್ಟ ಜಾತಿ ವರ್ಗಗಳಿಗೆ ಶೇಕಡ ೯೫ರಷ್ಟು ಸಬ್ಸಿಡಿ ದೊರೆಯುತ್ತದೆ. ಹಾಸನ ಜಿಲ್ಲೆಯಲ್ಲಿ ಹಾಲು ಮತ್ತು ರೇಷ್ಮೆ ಕೃಷಿ ಮಾಡುತ್ತಿರುವ ರೈತರು ಇತರರಿಗೆ ಮಾದರಿಯಾಗಿದ್ದಾರೆ. ರೇಷ್ಮೆ ಬೆಳೆಯುವುದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂಬುದು ಸುಳ್ಳು. ಆರೋಗ್ಯ ಹಾಗೂ ಆರ್ಥಿಕವಾಗಿ ಪ್ರಗತಿ ಸಾಧಿಸಬಹುದು ಎಂದರು. ೩೦ ಬೆಳೆಗಳನ್ನ ಬೆಳೆಯಲು ರೈತರಿಗೆ ಅವಕಾಶ ಕಲ್ಪಿಸಲಾಗಿದೆ. ಕೃಷಿ ಹೊಂಡ ತೆಗೆದು ಮುಚ್ಚುವ ಕೆಲಸವನ್ನು ಯಾವ ರೈತರೂ ಮಾಡಬಾರದು. ಈ ಸಂಬಂಧ ಪಂಚಾಯಿತಿಗೆ ಮುಚ್ಚಳಿಕೆ ಬರೆದು ಕೊಡಬೇಕಾಗುತ್ತದೆ ಎಂದು ಶಾಸಕರು ರೇಷ್ಮೆ ಇಲಾಖೆಯಲ್ಲಿ ತಾಲೂಕಿನಲ್ಲಿ ೧೪ ಮಂದಿ ಸಿಬ್ಬಂದಿಯ ಜಾಗದಲ್ಲಿ ಒಬ್ಬರೇ ಕರ್ತವ್ಯ ನಿರ್ವಹಿಸಬೇಕಾಗಿದ್ದು ಕೂಡಲೇ ಈ ನಿಟ್ಟಿನಲ್ಲಿ ಗಮನಹರಿಸಬೇಕು. ವೈಜ್ಞಾನಿಕವಾಗಿ ಕೆರೆಗಳ ಹೂಳೆತ್ತುವುದು ಹಾಗೂ ನೀರನ್ನು ಪೋಲು ಮಾಡುವುದನ್ನು ನಿಲ್ಲಿಸಬೇಕು ಎಂದು ಹೇಳಿದರು.

ಕೇಂದ್ರ ರೇಷ್ಮೆ ಸಂಶೋಧನೆ ಹಾಗೂ ತರಬೇತಿ ಸಂಸ್ಥೆಯ ವಿಜ್ಞಾನಿ ಡಾ. ಮಹಿಬ ಹೆಲನ್, ರೇಷ್ಮೆ ಉಪನಿರ್ದೇಶಕ ಎಂ.ಜೆ. ಗಿರೀಶ್ ವಿಜ್ಞಾನಿ ಡಾ. ಲೋಕೇಶ್ ರಾಮನಾಥಪುರ ರೇಷ್ಮೆ ತರಬೇತಿ ಶಾಲೆಯ ಪ್ರಾಂಶುಪಾಲರಾದ ಶೈಲಾ, ಹರೀಶ್, ಸಹಾಯಕ ನಿರ್ದೇಶಕ ಡಾ. ಸುನಿಲ್ ಕುಮಾರ್‌, ಕುಬೇರಪ್ಪ, ಸುರೇಶ್, ರಮೇಶ್ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸೌಧದಲ್ಲಿ ಕಾಗದ ರಹಿತ ಆಡಳಿತ ಜಾರಿಗೆ ಕ್ರಮ: ಜಿ.ಎಸ್‌.ಪಾಟೀಲ್‌
ಬರಪೀಡಿತ ತಾಲೂಕು ಎಂದು ಘೋಷಣೆ ಮಾಡುವಂತೆ ಮನವಿ