ಕಾರಟಗಿ: ತಾಲೂಕಿನ ಮರ್ಲಾನಹಳ್ಳಿಯ ಯುವಕ, ರಾಜಕೀಯದ ಜೊತೆಗೆ ಸಮಾಜಸೇವೆ, ಅಭಿವೃದ್ಧಿಯ ಚಿಂತನೆ, ಮಾನವೀಯ ಮೌಲ್ಯ ಹೊಂದಿರುವ ಸೋಮನಾಥ ದೊಡ್ಡಮನಿ ಜನನಾಯಕನಾಗಿ ಬೆಳೆಯುತ್ತಿದ್ದಾರೆ.
ಸಂಘಟನೆಗಳಲ್ಲಿ ಮುಂದು: ಸಚಿವರ ಅಚ್ಚುಮೆಚ್ಚು:
ಕನಕಗಿರಿ ಮತ್ತು ಕಾರಟಗಿ ತಾಲೂಕಿನಲ್ಲಿ ಅತ್ಯಂತ ಕಡಿಮೆ ಅವಧಿಯಲ್ಲಿ ಬಹುಬೇಗನ ಬೆಳೆದ ಯುವ ನಾಯಕ ಸೋಮನಾಥ ದೊಡ್ಡಮನಿ. ಜಾತಿ ಬೇಧಭಾವಗಳಿಲ್ಲದೆ ಎಲ್ಲರೊಂದಿಗೆ ಒಂದಾಗಿ ಮುಂದಡಿ ಇರುವ ಈ ಯುವಕ ಕ್ರೀಡಾಕೂಟಗಳನ್ನು ಗ್ರಾಮೀಣ ಪ್ರದೇಶದಲ್ಲಿ ಆಯೋಜಿಸುವ ಮೂಲಕ ಗ್ರಾಮೀಣ ಪ್ರದೇಶದ ಯುವ ಪ್ರತಿಭೆಗಳಿಗೆ ಸದ್ದು ಗದ್ದಲವಿಲ್ಲದೆ ಪ್ರೋತ್ಸಾಹ ನೀಡುತ್ತಿದ್ದಾರೆ. ಹೀಗಾಗಿ ಮರಲಾನಹಳ್ಳಿ ಸೇರಿದಂತೆ ಸುತ್ತ ಹತ್ತು ಹಳ್ಳಿಗಳಲ್ಲಿ ಈ ಯುವಕ ತನ್ನನ್ನು ತಾನು ಗುರುತಿಸಿಕೊಳ್ಳುವುದಲ್ಲದೇ ಕಾಂಗ್ರೆಸ್ ಪಕ್ಷದ ಕಟ್ಟಾಳು ಆಗಿ ಸೇವೆ ಸಲ್ಲಿಸಿ ಪಕ್ಷದ ಸಂಘಟನೆ ನಡೆಸಿದ್ದಾರೆ.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಇವರಿಗೆ ಸೋಮನಾಥ ಅತ್ಯಂತ ಆಪ್ತ ವಲಯದ ಯುವಕ ನಾಯಕ. ಸಚಿವರಾಗಲಿ, ಕಾಂಗ್ರೆಸ್ ಪಕ್ಷದ ಯಾವುದೇ ಕಠಿಣ ಟಾಸ್ಕ್‌ಗಳನ್ನು ಸವಾಲಾಗಿ ಸ್ವೀಕರಿ ಕೆಲಸ ಮಾಡುವ ಚಾಕಚಕ್ಕತೆ ಇವರಲ್ಲಿದೆ. ಇದಕ್ಕೆ ಇಂಬು ನೀಡುವಂತೆ ಕಾಂಗ್ರೆಸ್ ಡಿಜಿಟಲ್ ಸದಸ್ಯತ್ವ ನೋಂದಣಿ ಕಾರ್ಯದಲ್ಲಿ ಕೊಪ್ಪಳ ಜಿಲ್ಲೆಯಲ್ಲಿಯೇ ಅತಿಹೆಚ್ಚು ಕಾರ್ಯಕರ್ತರನ್ನು ನೋಂದಣಿ ಮಾಡಿಸುವ ಮೂಲಕ ಜಿಲ್ಲೆಯಲ್ಲಿಯೇ ಪ್ರಥಮ ಸ್ಥಾನ ಪಡೆದುಕೊಂಡು ಸಚಿವರು ಮತ್ತು ಪಕ್ಷದ ಇತರೆ ಮುಖಂಡರೊಂದಿಗೆ ಸೈ ಎನ್ನಿಸಿಕೊಂಡಿದ್ದಾರೆ ಸೋಮನಾಥ ದೊಡ್ಡಮನಿ.
ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಸೇವೆ ಸಲ್ಲಿಸುತ್ತಿರುವ ಸೋಮನಾಥ ರಾಜಕೀಯ ಇಚ್ಛಾಶಕ್ತಿಯಿಂದ ಈ ಗ್ರಾಮೀಣ ಜನರ ಆಶಾಕಿರಣವಾಗಿ ಹೊರಹೊಮ್ಮಿದ್ದಾರೆ. ಸರಳತೆ ಮೈಗೂಡಿಸಿಕೊಂಡ ಈ ಯುವನಾಯಕ, ಸಮಾಜ ಸೇವೆ, ಜನರೊಂದಿಗೆ ಬೆರೆಯುವುದು, ಜನ ಸೇವೆ ಮಾಡುವುದನ್ನೇ ಈಗ ಕಾಯಕವನ್ನಾಗಿಸಿಕೊಂಡಿದ್ದಾರೆ. ನೊಂದ ಕುಟುಂಬಗಳಿಗೆ, ಕಷ್ಟದಲ್ಲಿರುವವರಿಗೆ ಕೈಲಾದ ಸಹಾಯ ಮಾಡುತ್ತ ನಡೆದಿದ್ದಾರೆ.
ಮುಂದಿನ ದಿನಮಾನಗಳಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಬಹುದೊಡ್ಡ ಸ್ಥಾನಮಾನ ಅಲಂಕರಿಸುವ ಆಶಾಭಾವನೆ ಹೊಂದಿರುವ ಸೋಮನಾಥ ಈಗ ಗ್ಯಾರೆಂಟಿ ಅನುಷ್ಠಾನ ಯೋಜನೆಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಗ್ರಾಮೀಣ ಯುವ ಸಮೂಹದ ಕಣ್ಮಣಿ ಸೋಮನಾಥ ದೊಡ್ಡಮನಿ. ಸದಾ ಹಸನ್ಮುಖಿಯಾಗಿ ಕೆಲಸ ಮಾಡುವ ಯುವ ನಾಯಕ. ಆತನಲ್ಲಿ ಸೇವಾ ಮನೋಭಾವನೆ ಹೆಚ್ಚಿದೆ. ರಾಜಕೀಯದಲ್ಲಿ ಸದಾ ಕ್ರೀಯಾಶೀಲ ಯುವಕ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶರಣೇಗೌಡ ಮಾಲಿಪಾಟೀಲ್ ತಿಳಿಸಿದ್ದಾರೆ.