ಆತ್ಮಸಾಕ್ಷಿಗೆ ಅನುಗುಣವಾಗಿ ಸೇವೆ ಸಲ್ಲಿಸಿ: ಪ್ರೊ. ಪಿ.ಸಿ. ಹಿರೇಮಠ

KannadaprabhaNewsNetwork | Published : Apr 30, 2025 12:33 AM

ಸಾರಾಂಶ

ಕೇವಲ ನೌಕರಿ ಎಂದು ಭಾವಿಸಿದರೆ ಸೇವೆ ಎಂಬುದು ಅರ್ಥ ಕಳೆದುಕೊಳ್ಳುತ್ತದೆ. ಈ ಹಿನ್ನೆಲೆ ಆತ್ಮವಿಮರ್ಶೆ ಮಾಡಿಕೊಂಡು ಸಾಗಬೇಕಿದೆ.

ಶಿಗ್ಗಾಂವಿ: ಶೈಕ್ಷಣಿಕ ಗುಣಮಟ್ಟ ಕುಸಿಯುತ್ತಿರುವ ಇಂದಿನ ದಿನಗಳಲ್ಲಿ ಆತ್ಮಸಾಕ್ಷಿಗೆ ಅನುಗುಣವಾಗಿ ಸೇವೆ ಸಲ್ಲಿಸುವುದು ಬೋಧಕರ ಜವಾಬ್ದಾರಿ ಎಂದು ನಿವೃತ್ತ ಪ್ರಾಚಾರ್ಯ ಪ್ರೊ. ಪಿ.ಸಿ. ಹಿರೇಮಠ ತಿಳಿಸಿದರು.ಪಟ್ಟಣದ ರಂಭಾಪುರಿ ಜಗದ್ಗುರು ವೀರಗಂಗಾಧರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದಿದ ರಾಜೇಶ್ವರಿ ಹೊಗರ್ತಿ ಅವರ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಬೋಧಕ ಹುದ್ದೆಯಲ್ಲಿರುವವರು ಐಎಎಸ್, ಐಪಿಎಸ್ ಅಧಿಕಾರಿಗಳನ್ನು ಸೃಷ್ಟಿಸಬಹುದು. ಅದಕ್ಕೆ ನಮ್ಮ ಪಾಲಿನ ಹೊಣೆಗಾರಿಕೆ ನಿಭಾಯಿಸಬೇಕು. ಕೇವಲ ನೌಕರಿ ಎಂದು ಭಾವಿಸಿದರೆ ಸೇವೆ ಎಂಬುದು ಅರ್ಥ ಕಳೆದುಕೊಳ್ಳುತ್ತದೆ. ಈ ಹಿನ್ನೆಲೆ ಆತ್ಮವಿಮರ್ಶೆ ಮಾಡಿಕೊಂಡು ಸಾಗಬೇಕಿದೆ ಎಂದರು.ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರೊ. ರಾಜೇಶ್ವರಿ ಹೊಗರ್ತಿ ಅವರು, ರಂಭಾಪುರಿ ಕಾಲೇಜಿಗೆ ಭೂಗೋಳಶಾಸ್ತ್ರ ಉಪನ್ಯಾಸಕರಾಗಿ ಆಗಮಿಸಿದಾಗ ಕಾಲೇಜಿನ ಸಂಸ್ಥಾಪಕ ಸದಸ್ಯರು, ಸಹೋದ್ಯೋಗಿಗಳು ಆತ್ಮವಿಶ್ವಾಸ ತುಂಬಿದರು. ಕ್ರಮೇಣ ಕುಟುಂಬ ಸದಸ್ಯರು ಮತ್ತು ವಿದ್ಯಾರ್ಥಿಗಳ ಸಹಕಾರದಿಂದ ನನ್ನ ೩೮ ವರ್ಷಗಳ ಸೇವೆ ಸಂತೃಪ್ತ ಭಾವ ಮೂಡಿಸಿತು ಎಂದರು.ಪ್ರಾಚಾರ್ಯ ಡಾ. ಬಿ.ವೈ. ತೊಂಡಿಹಾಳ ಮಾತನಾಡಿ, ಇದೊಂದು ಭಾವನಾತ್ಮಕ ಬೆಸುಗೆ. ಸೇವಾ ದಿನಗಳಲ್ಲಿ ನಮಗೆ ಪ್ರೊ. ರಾಜೇಶ್ವರಿ ಅವರು ನಮಗೆ ಸದಾ ಬೆಂಬಲ ನೀಡುತ್ತ ಬಂದಿರುವರು. ಅವರ ಸರಳತೆ ಮತ್ತು ಪ್ರೀತಿಯ ಭಾವನೆಗೆ ಚಿರಋಣಿಯಾಗಿರುವೆ ಎಂದರು.ಪ್ರೊ. ಶ್ರೀಶೈಲ ಹುದ್ದಾರ, ಸಂಗಮೇಶ ಪಾಶ್ಚಾಪುರ, ರಾಜರತನ್ ದಾದೂಗೌಡ್ರ, ಪರಿಮಳಾ ಜೈನ್, ಶೋಭಾ ಅಳಗವಾಡಿ, ಅರಳಿಕಟ್ಟಿ ಗೂಳಪ್ಪ, ಗೌರಮ್ಮ ಹೊಸಮನಿ ಮಾತನಾಡಿದರು.ಪ್ರೊ. ಬಿ.ಎಸ್. ನರೇಗಲ್ಲ, ಡಾ. ಡಿ.ಎ. ಗೊಬ್ಬರಗುಂಪಿ, ಪ್ರೊ. ಬಿ.ಎಂ. ಮುಳಗುಂದ, ಪ್ರೊ. ಎಂ.ಜಿ. ಬಾಗೇವಾಡಿ, ಸುಮಂಗಲಾ ಅತ್ತಿಗೇರಿ, ಪ್ರೊ. ವಿನಯ ಎನ್.ಸಿ., ಮಲ್ಲಿಕಾರ್ಜುನ ಕರಡಿ, ಧೀರೇಂದ್ರ ಕುಂದಾಪುರ, ಗುರಪ್ಪ ಅಂಗಡಿ ಉಪಸ್ಥಿತರಿದ್ದರು. ಸುರೇಶ ಹರಿಜನ ಸ್ವಾಗತಿಸಿದರು. ವಿದ್ಯಾವತಿ ಹಿರೇಮಠ ಹಾಗೂ ಭಾಗ್ಯಾ ಮಣ್ಣೂರು ನಿರೂಪಿಸಿದರು. ರಜೀಯಾಬೇಗಂ ಅತ್ತಿಗೇರಿ ವಂದಿಸಿದರು.ಬಸವಣ್ಣದೇವರ ಜಾತ್ರಾ ಮಹೋತ್ಸವ ಇಂದಿನಿಂದ

ಸವಣೂರು: ಪಟ್ಟಣದ ಹೊರಕೇರಿ ಓಣಿಯ ಬಸವಣ್ಣದೇವರ ಜಾತ್ರಾ ಮಹೋತ್ಸವವು ಏ. 30 ಮತ್ತು ಮೇ 1ರಂದು ಎರಡು ದಿನಗಳ ಕಾಲ ನಡೆಯಲಿದೆ.

ಏ. 30ರಂದು ಬೆಳಗ್ಗೆ ಬಸವಣ್ಣದೇವರ ಮೂರ್ತಿಗೆ ರುದ್ರಾಭಿಷೇಕ, 108 ಬಿಲ್ವಾರ್ಚನೆ, ವಿಶೇಷ ಪೂಜೆ ಜರುಗುಲಿದೆ. ನಂತರ 8 ಗಂಟೆಗೆ ಬಸವಣ್ಣ ದೇವರ ದೇವಸ್ಥಾನದಿಂದ ವಾದ್ಯ ವೈಭವಗಳೊಂದಿಗೆ ಪಲ್ಲಕ್ಕಿ ಉತ್ಸವ ಮತ್ತು ಎತ್ತಿನ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಯಲ್ಲಿ ನಡೆಯಲಿದೆ.ಸಂಜೆ 5 ಗಂಟೆಗೆ ಬಸವಣ್ಣದೇವರ ಮಹಾ ರಥೋತ್ಸವವು ಜರುಗುವುದು. ನಂತರ ರಾತ್ರಿ ಶಿವಭಜನೆ ಕಾರ್ಯಕ್ರಮಗಳು ನಡೆಯಲಿವೆ. ಮೇ 1ರಂದು ಸಂಜೆ 6 ಗಂಟೆಗೆ ಕಡುಬಿನ ಕಾಳಗ ಜರುಗುವುದು ಎಂದು ಬಸವಣ್ಣದೇವರ ಸೇವಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

Share this article