ಮಲ್ಲಿಕಾರ್ಜುನ ಪಟ್ಟಣಶೆಟ್ಟಿ
ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿರಾಜ್ಯ ಸರ್ಕಾರ ಹಲವು ಆಕ್ಷೇಪ, ಟೀಕೆಗಳ ಮಧ್ಯೆಯೇ ರಾಜ್ಯದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಆರಂಭಿಸಿದೆ. ಆದರೆ, ತಾಲೂಕಿನಾದ್ಯಂತ ಶಿಕ್ಷಕರು ಮತ್ತು ಗಣತಿದಾರರು 4ನೇ ದಿನವೂ ಹಲವು ರೀತಿಯ ಅಡೆತಡೆಗಳು ಹಾಗೂ ಸಮೀಕ್ಷೆ ವೇಳೆ ಸರ್ವರ್ ಸಮಸ್ಯೆ, ತಾಂತ್ರಿಕ ದೋಷ, ವಿದ್ಯುತ್ ಯುಎಚ್ಐಡಿ ನಂಬರ್ ಅಸ್ಪಷ್ಟ, ಮನೆ ಪಟ್ಟಿ, ಸರಿಯಾದ ಜಿಯೋ ಮ್ಯಾಪಿಂಗ್ ಇಲ್ಲದಿರುವುದು ಕಂಡುಬಂದಿದೆ. ಮಾತ್ರವಲ್ಲ, ಮಾಹಿತಿ ಕೊರತೆಯಿಂದಾಗಿ ಸಾರ್ವಜನಿಕರು ಸೂಕ್ತ ದಾಖಲೆಗಳನ್ನು ನೀಡದಿರುವುದು, ಗ್ರಾಮಗಳಲ್ಲಿ ನೆಟ್‌ವರ್ಕ್ ಸಮಸ್ಯೆ, ಸಮೀಕ್ಷೆಗಾಗಿ ತಯಾರಿಸಿರುವ ಆ್ಯಪ್ ಸಮರ್ಪಕವಾಗಿ ಕಾರ್ಯನಿರ್ವಹಿಸದೇ ಇರುವ ಸಮಸ್ಯೆಗಳನ್ನು ಸಮೀಕ್ಷಾ ಸಿಬ್ಬಂದಿ ಎದುರಿಸುತ್ತಿದ್ದಾರೆ. ಇದರಿಂದ ಸಮೀಕ್ಷೆ ನಡೆಸಲು ಅವರು ಹೈರಾಣಾಗುತ್ತಿದ್ದಾರೆ.
ಸೆ.22ರಂದು ಸಮೀಕ್ಷೆ ಆರಂಭಿಸುವುದಕ್ಕೆ ಅಧಿಕಾರಿಗಳು ಸೂಚಿಸಿದ್ದರು. ಅದರಂತೆ ಶಿಕ್ಷಕರು ಸೇರಿದಂತೆ ಸಮೀಕ್ಷೆಗೆ ನಿಯೋಜನೆಗೊಂಡಿದ್ದ ಸಿಬ್ಬಂದಿ ಬೆಳಗ್ಗೆಯೇ ತಮ್ಮ ಕಾರ್ಯಕ್ಷೇತ್ರಕ್ಕೆ ತೆರಳಿ ಸಮೀಕ್ಷೆ ಆರಂಭಿಸಿದ್ದರು. ಆದರೆ, ತಾಲೂಕಿನ ಕೆಲ ಗ್ರಾಮಗಳಲ್ಲಿ ನೆಟ್‌ವರ್ಕ್ ಸಮಸ್ಯೆ ತಲೆದೋರಿದೆ. ಪರಿಸ್ಥಿತಿ ಹೀಗಿರುವಾಗ ಕೆಲವು ಗ್ರಾಮಗಳಾದ ಬಮ್ಮನಜೋಗಿ, ಪಡಗಾನೂರ, ನಿವಾಳಖೇಡ, ಇಂಗಳಗಿ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಮೊಬೈಲ್‌ನಲ್ಲಿ ತಂತ್ರಾಂಶ ಬಳಸಿ ಗಣತಿಯ ಮಾಹಿತಿಯನ್ನು ಕಲೆ ಹಾಕಿ ಅಪ್‌ಡೇಟ್ ಮಾಡುವುದಕ್ಕೆ ಸಮಸ್ಯೆ ಆಗುತ್ತಿದೆ. ನೆಟ್‌ವರ್ಕ್ ಇಲ್ಲದ ಕಡೆ ಏನು ಮಾಡೋದು ಎಂದು ಸಿಬ್ಬಂದಿ ತಲೆಕೆಡಿಸಿಕೊಂಡಿದ್ದಾರೆ.ಪೂರ್ವ ತಯಾರಿಯೇ ಇಲ್ಲದ ಸಮೀಕ್ಷೆ:
ಸಮೀಕ್ಷೆ ವಿಚಾರದಲ್ಲಿ ಸರ್ಕಾರದ ಪೂರ್ವತಯಾರಿ ಕೊರತೆ ಎದ್ದು ಕಾಣುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಅಧಿಕಾರಿಗಳು ಪಟ್ಟಣ ಪ್ರದೇಶದ ಸ್ಥಿತಿಗತಿ, ಅಲ್ಲಿನ ಅನುಕೂಲತೆಯನ್ನು ಮಾತ್ರ ಗಮನದಲ್ಲಿಟ್ಟುಕೊಂಡು ಸಮೀಕ್ಷೆ ನಡೆಸಲು ಯೋಜನೆ ಹಾಕಿಕೊಂಡಿದಂತಿದೆ. ಕೆಲ ಗ್ರಾಮೀಣ ಪ್ರದೇಶದಲ್ಲಿ ಇಂಟರ್ನೆಟ್ ವ್ಯವಸ್ಥೆ ಸಮರ್ಪಕವಾಗಿಲ್ಲದ ಕಡೆ ಏನು ಮಾಡಬೇಕು ಎಂಬ ಬಗ್ಗೆ ಮಾಹಿತಿ ಯಾರೂ ನೀಡುತ್ತಿಲ್ಲ.ಶಿಕ್ಷಕರನ್ನೇ ಸಮೀಕ್ಷೆಗೆ ಹೆಚ್ಚಾಗಿ ಬಳಸಿಕೊಳ್ಳಲಾಗಿದೆ. ಸಮೀಕ್ಷಾ ಕರ್ತವ್ಯಕ್ಕೆ ಹಾಜರಾಗುವ ವಿಚಾರದಲ್ಲೂ ಕೆಲವರ ಪ್ರಭಾವ ಕೆಲಸ ಮಾಡಿದೆ. ಸಂಘಟನೆಯಲ್ಲಿರುವವರು, ಹಿರಿಯ ಅಧಿಕಾರಿಗಳು ಹಾಗೂ ಪ್ರಭಾವಿಗಳು ತಮ್ಮ ಪ್ರಭಾವ ಬಳಸಿ ತಮ್ಮನ್ನು ಕರ್ತವ್ಯಕ್ಕೆ ನಿಯೋಜನೆ ಮಾಡದಂತೆ ನೋಡಿಕೊಳ್ಳುವಲ್ಲಿ ಕೆಲವರು ಯಶಸ್ವಿಯಾಗಿದ್ದಾರೆ. ಇದು ಹಲವು ಶಿಕ್ಷಕರಲ್ಲಿ ಅಸಮಾಧಾನ ಮೂಡಿಸಿದೆ. ಆರೋಗ್ಯ ಸಮಸ್ಯೆ ಇರುವವರನ್ನು ಹಾಗೂ ನಿವೃತ್ತಿಯ ಅಂಚಿನಲ್ಲಿರುವವರನ್ನು ಸಮೀಕ್ಷೆಗೆ ನೇಮಿಸಲಾಗಿದೆ ಎಂಬ ಆಕ್ರೋಶವೂ ಕೇಳಿ ಬರುತ್ತಿದೆ.
--------------ಕೋಟ್.....ತಾಂತ್ರಿಕ ಸಮಸ್ಯೆ ಪರಿಹರಿಸಲು ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ 60ಕ್ಕಿಂತ ಹೆಚ್ಚು ಮನೆಗಳ ಸಮೀಕ್ಷೆ ಪೂರ್ಣಗೊಳಿಸಲಾಗಿದೆ. ಗಣತಿದಾರರು ಯಾವುದೇ ಸಮಸ್ಯೆ ಇದ್ದರೂ ಗುಂಪಿನಲ್ಲಿ ಪ್ರಶ್ನೆ ಮಾಡಿ ಉತ್ತರ ಪಡೆಯಬಹುದು. ತಹಸೀಲ್ದಾರ್, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಒಬಿಸಿ ಅಧಿಕಾರಿಗಳು ಗಣತಿದಾರರ ಸಮಸ್ಯೆ ಬಗೆಹರಿಸಲು ಸದಾ ಸಿದ್ಧರಿದ್ದಾರೆ. ನಾಳೆಯಿಂದ ಎಲ್ಲಾ ಗಣತಿದಾರರು ಸ್ಥಳೀಯವಾಗಿ ಯಾವುದೇ ಸಮಸ್ಯೆ ಇದ್ದರೂ ಫೋನ್ ಅಥವಾ ಗ್ರೂಪ್‌ನಲ್ಲಿ ಪ್ರಶ್ನೆ ಮಾಡಿ ಸಮಸ್ಯೆ ಬಗೆಹರಿಸಲು ಸದಾ ತಾಂತ್ರಿಕ ಹಾಗೂ ಎಲ್ಲಾ ಅಧಿಕಾರಿಗಳು ಸಿದ್ದರಾಗಿದ್ದಾರೆ. ಸಾರ್ವಜನಿಕರ ಜೊತೆ ಸ್ಪಂದಿಸಿ ಸಮೀಕ್ಷೆಗೆ ಯಶಸ್ಸಿಗೆ ಎಲ್ಲಾ ಶಿಕ್ಷಕರು ಸಹಕರಿಸಬೇಕು.
- ಪ್ರಕಾಶ ಸಿಂದಗಿ, ತಹಸೀಲ್ದಾರ್ ದೇವರಹಿಪ್ಪರಗಿ.---------
ಕೋಟ್........ಸರ್ವರ್ ಸಮಸ್ಯೆಯಿಂದಾಗಿ ಸಮೀಕ್ಷೆಗೆ ಬಳಸುವ ತಂತ್ರಾಂಶ ಓಪನ್ ಆಗಲೇ ಇಲ್ಲ. ಕೆಲವು ಸಂದರ್ಭದಲ್ಲಿ ಓಪನ್ ಆದರೂ ಒಂದು ಮನೆಯಲ್ಲಿ ಸಮೀಕ್ಷೆ ಪೂರ್ಣಗೊಳಿಸಬೇಕಾದರೆ ಗಂಟೆಗಟ್ಟಲೆ ಕಾಯಬೇಕು. ಆಪ್ ನಿಧಾನಗತಿಯಲ್ಲಿ ಕಾರ್ಯನಿರ್ವಹಣೆಯಿಂದ ಒಂದು ಪ್ರಶ್ನೆಗೆ ಉತ್ತರ ಪಡೆದು ಅದನ್ನು ಅಪ್ಲೋಡ್ ಮಾಡಬೇಕಾದರೆ ಐದರಿಂದ ಹತ್ತು ನಿಮಿಷ ತಗಲುತ್ತದೆ. ಒಟ್ಟು 61 ಪ್ರಶ್ನೆಗೆ ಮಾಹಿತಿ ಪಡೆದು ಅಪ್ಲೋಡ್ ಮಾಡಬೇಕು. ಅಷ್ಟು ಹೊತ್ತು ಕಾಯುವ ತಾಳ್ಮೆ ಜನರಲ್ಲಿ ಇಲ್ಲದಂತಾಗಿದೆ. ನಮಗೂ ಮಾಸಿಕವಾಗಿ ಇದು ಹಿಂಸೆಯಾಗುತ್ತಿದೆ.
- ಹೆಸರು ಹೇಳಲಿಚ್ಚಿಸದ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಸಿಬ್ಬಂದಿಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿರಾಜ್ಯ ಸರ್ಕಾರ ಹಲವು ಆಕ್ಷೇಪ, ಟೀಕೆಗಳ ಮಧ್ಯೆಯೇ ರಾಜ್ಯದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಆರಂಭಿಸಿದೆ. ಆದರೆ, ತಾಲೂಕಿನಾದ್ಯಂತ ಶಿಕ್ಷಕರು ಮತ್ತು ಗಣತಿದಾರರು 4ನೇ ದಿನವೂ ಹಲವು ರೀತಿಯ ಅಡೆತಡೆಗಳು ಹಾಗೂ ಸಮೀಕ್ಷೆ ವೇಳೆ ಸರ್ವರ್ ಸಮಸ್ಯೆ, ತಾಂತ್ರಿಕ ದೋಷ, ವಿದ್ಯುತ್ ಯುಎಚ್ಐಡಿ ನಂಬರ್ ಅಸ್ಪಷ್ಟ, ಮನೆ ಪಟ್ಟಿ, ಸರಿಯಾದ ಜಿಯೋ ಮ್ಯಾಪಿಂಗ್ ಇಲ್ಲದಿರುವುದು ಕಂಡುಬಂದಿದೆ. ಮಾತ್ರವಲ್ಲ, ಮಾಹಿತಿ ಕೊರತೆಯಿಂದಾಗಿ ಸಾರ್ವಜನಿಕರು ಸೂಕ್ತ ದಾಖಲೆಗಳನ್ನು ನೀಡದಿರುವುದು, ಗ್ರಾಮಗಳಲ್ಲಿ ನೆಟ್‌ವರ್ಕ್ ಸಮಸ್ಯೆ, ಸಮೀಕ್ಷೆಗಾಗಿ ತಯಾರಿಸಿರುವ ಆ್ಯಪ್ ಸಮರ್ಪಕವಾಗಿ ಕಾರ್ಯನಿರ್ವಹಿಸದೇ ಇರುವ ಸಮಸ್ಯೆಗಳನ್ನು ಸಮೀಕ್ಷಾ ಸಿಬ್ಬಂದಿ ಎದುರಿಸುತ್ತಿದ್ದಾರೆ.