ಕನ್ನಡಪ್ರಭ ವಾರ್ತೆ ವಿಜಯಪುರ
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ನ. 29ರಿಂದ ಡಿ.1ರ ವರೆಗೆ ಮೂರು ದಿನಗಳ ಕಾಲ ತಾಲೂಕಿನ ಅರಕೇರಿಯಲ್ಲಿರುವ ಜ್ಞಾನಜ್ಯೋತಿ ವಸತಿ ಶಾಲೆಯಲ್ಲಿ ತರಬೇತಿ ಹಮ್ಮಿಕೊಳ್ಳಲಾಗಿದೆ. ಕಾಂಗ್ರೆಸ್ಸಿನ ಜಿಲ್ಲೆಯ 16 ಬ್ಲಾಕ್ ಸಮಿತಿಗಳಲ್ಲಿನ ಮಹಿಳೆಯರು ಹಾಗೂ ಪುರುಷರು ಭಾಗವಹಿಸಲಿದ್ದಾರೆ. ಸೇವಾದಳದ 15 ಜನ ಪ್ರಮುಖರು ತರಬೇತಿ ನೀಡಲಿದ್ದು, ಈ ತರಬೇತಿ ಕಾರ್ಯಕ್ರಮದಲ್ಲಿ ವಿಜಯಪುರ, ಬಾಗಲಕೋಟೆ, ಬೆಳಗಾವಿಯ ಸಚಿವರು ಸಹ ಭಾಗವಹಿಸಲಿದ್ದಾರೆ. ಜಿಲ್ಲಾ ಕಾಂಗ್ರೆಸ್ ಸೇವಾದಳದಿಂದ ತರಬೇತಿ ನಡೆಸಲಾಗುತ್ತಿದ್ದು, ಕಾಂಗ್ರೆಸ್ ಕಾರ್ಯಕರ್ತರಿಗೆ ಹಾಗೂ ಸೇವಾದಳದವರಿಗೆ ಶಿಸ್ತು ಹಾಗೂ ಸಂಯಮದ ಕುರಿತು ತರಬೇತಿ ಕೊಡಲಾಗುವುದು ಎಂದು ತಿಳಿಸಿದರು.
ಸೇವಾದಳದ ರಾಜ್ಯ ಪ್ರಮುಖ ರಮೇಶ ಮಾತನಾಡಿ, ಎಐಸಿಸಿ ಹಾಗೂ ಕೆಪಿಸಿಸಿ ಆದೇಶದ ಮೇರೆಗೆ ರಾಜ್ಯಾದ್ಯಂತ ಪ್ರತಿ ಜಿಲ್ಲೆಯಲ್ಲಿ ಮೂರು ದಿನಗಳ ಕಾಲ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗುತ್ತಿದೆ. ರಾಜ್ಯದಲ್ಲಿಯೇ ಮೊದಲು ವಿಜಯಪುರದಲ್ಲಿ ತರಬೇತಿ ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಯಲ್ಲಿ 500ಕ್ಕೂ ಅಧಿಕ ಸೇವಾದಳದ ಸದಸ್ಯರಿದ್ದು, ಎಲ್ಲರಿಗೂ ಶಿಸ್ತು ಹಾಗೂ ಸಂಯಮವನ್ನು ಕಲಿಸಿ ಕೊಡಲಾಗುತ್ತಿದೆ. ಮೂರು ದಿನಗಳ ಕಾಲ ಬೆಳಗ್ಗೆ 5 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ನಡೆಯುವ ತರಬೇತಿ ಶಿಬಿರದಲ್ಲಿ ಕಾಂಗ್ರೆಸ್ ನಡೆದು ಬಂದ ದಾರಿ, ಧ್ವಜ ವಂದನೆ ಇತ್ಯಾದಿ ವಿಷಯಗಳ ಬಗ್ಗೆ ತಿಳಿಸಿಕೊಡಲಾಗುವುದು. ಡಿ.26, 27 ಹಾಗೂ 28 ರಂದು ಬೆಳಗಾವಿಯಲ್ಲಿ ರಾಜ್ಯಮಟ್ಟದ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ 5 ಸಾವಿರ ಜನರು ಶಿಸ್ತಿನಿಂದ ಭಾಗವಹಿಸಲಿದ್ದು, ಅದಕ್ಕಾಗಿ ಅವರಿಗೆ ತರಬೇತಿ ಹಮ್ಮಿಕೊಳ್ಳಲಾಗಿದೆ.ಕಾಂಗ್ರೆಸ್ ಮುಖಂಡರಾದ ಗಂಗಾಧರ ಸಂಬಣ್ಣಿ, ಅಬ್ದುಲ್ ಹಮೀದ್ ಮುಶ್ರೀಫ್, ಅಖಿಲ ಭಾರತ ಸೇವಾದಳದ ಪ್ರಮುಖರಾದ ರಾಜು, ಸಮೀರ್ ಫಜೀರ್, ಧರ್ಮಾನಂದ ಶೆಟ್ಟಿಗಾರ, ಜುಬೇರ್, ರಾಜು ಸಿಂಘೆ, ಭೂತೇಶ, ಮುತ್ತುರಾಜ, ವಿಜಯ ಕಾಲೆ ಉಪಸ್ಥಿತರಿದ್ದರು.