ಸೇವೆ ಹಣ, ಗೌರವಕ್ಕಾಗಿ ಮಾಡುವ ಕೆಲಸವಲ್ಲ: ಪರ್ತಗಾಳಿ ಶ್ರೀಗಳು

KannadaprabhaNewsNetwork |  
Published : Sep 29, 2026, 02:30 AM IST
ಗೋವಾದ ಪರ್ತಗಾಳಿಯಲ್ಲಿ ಪರ್ತಗಾಳಿ ಸ್ವಾಮೀಜಿಯವರ ಚಾತುರ್ಮಾಸ ಸಮಾರೋಪ ಅದ್ಧೂರಿಯಾಗಿ ನೆರವೇರಿತು. | Kannada Prabha

ಸಾರಾಂಶ

ಹಣ, ಅಧಿಕಾರ ಅಥವಾ ಗೌರವದಿಂದ ಸಿಗದ ಆತ್ಮತೃಪ್ತಿ ನಿಸ್ವಾರ್ಥ ಸೇವೆಯಿಂದ ದೊರೆಯುತ್ತದೆ. ಚಾತುರ್ಮಾಸದಲ್ಲಿ ಸೇವೆ ಸಲ್ಲಿಸಿದ ಪ್ರತಿಯೊಬ್ಬರೂ ತಮ್ಮ ವೈಯಕ್ತಿಕ ಸಮಯ, ಶ್ರಮ ಹಾಗೂ ಸಾಮರ್ಥ್ಯವನ್ನು ಧರ್ಮಕಾರ್ಯಕ್ಕೆ ಅರ್ಪಿಸಿದ್ದಾರೆ.

ಭಟ್ಕಳ: ವ್ರತ ಎಂದರೆ ನೋವು ಮತ್ತು ಕಷ್ಟವನ್ನು ಸುಖದ ರೂಪಕ್ಕೆ ಪರಿವರ್ತಿಸಿಕೊಳ್ಳುವ ಮನೋಭಾವ. ಚಾತುರ್ಮಾಸ ವ್ರತದಲ್ಲಿ ಇದೇ ಸಮರ್ಪಣಾ ಭಾವವನ್ನು ಕಾಣಬಹುದು ಎಂದು ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಹೇಳಿದರು.

ಗೋವಾದ ಪರ್ತಗಾಳಿ ಮಠದಲ್ಲಿ ಚಾತುರ್ಮಾಸದ ಸಮಾರೋಪದ ಧರ್ಮಸಭೆಯಲ್ಲಿ ಶ್ರೀಗಳು ಆಶೀರ್ವಚನ ನೀಡಿ, ವೈಯಕ್ತಿಕ ಗುರಿ ಮತ್ತು ಧಾರ್ಮಿಕ ಉದ್ದೇಶದ ನಡುವಿನ ವ್ಯತ್ಯಾಸವನ್ನು ವಿವರಿಸಿದ ಅವರು, ಗೋಲ್ ಎನ್ನುವುದು ವೈಯಕ್ತಿಕ ಸಾಧನೆಗಾಗಿ; ಪರ್ಪಸ್ ಎನ್ನುವುದು ದೊಡ್ಡ ಉದ್ದೇಶಕ್ಕಾಗಿ ಎಂದರು.

ನಿಸ್ವಾರ್ಥ ಸೇವೆಯ ಮಹತ್ವವನ್ನು ಶ್ರೀಗಳು ವಿವರಿಸಿ, ಚಾತುರ್ಮಾಸದಲ್ಲೂ ಅನೇಕ ರಾಮಸೇವಕರು ಯಾವುದೇ ಪ್ರತಿಫಲದ ನಿರೀಕ್ಷೆಯಿಲ್ಲದೆ ಸೇವೆ ಸಲ್ಲಿಸಿದ್ದಾರೆ. ಕೆಲವರು ೩೦ ಕಿಮೀ ದೂರದಿಂದ ಆಗಮಿಸಿ ಸೇವೆ ಮಾಡಿದ್ದಾರೆ. ಇನ್ನು ಕೆಲವರು ತಮಗೆ ಸಾಧ್ಯವಾದ ರೀತಿಯಲ್ಲಿ ಕೊಡುಗೆ ನೀಡಿದ್ದಾರೆ. ಪ್ರತಿಫಲದ ನಿರೀಕ್ಷೆಯಿಲ್ಲದೆ ಮಾಡುವ ಸೇವೆಗೆ ದೇವರ ಅನುಗ್ರಹ ಹಾಗೂ ಗುರುಗಳ ಆಶೀರ್ವಾದವೇ ಪ್ರತಿಫಲವಾಗುತ್ತದೆ. ಸೇವೆ ಎಂದರೆ ಹಣಕ್ಕಾಗಿ ಅಥವಾ ಗೌರವಕ್ಕಾಗಿ ಮಾಡುವ ಕೆಲಸವಲ್ಲ; ಭಕ್ತಿಯಿಂದ ಮಾಡುವ ಸಮರ್ಪಣೆ ಎಂದು ಸ್ವಾಮೀಜಿ ಹೇಳಿದರು.

ಹಣ, ಅಧಿಕಾರ ಅಥವಾ ಗೌರವದಿಂದ ಸಿಗದ ಆತ್ಮತೃಪ್ತಿ ನಿಸ್ವಾರ್ಥ ಸೇವೆಯಿಂದ ದೊರೆಯುತ್ತದೆ. ಚಾತುರ್ಮಾಸದಲ್ಲಿ ಸೇವೆ ಸಲ್ಲಿಸಿದ ಪ್ರತಿಯೊಬ್ಬರೂ ತಮ್ಮ ವೈಯಕ್ತಿಕ ಸಮಯ, ಶ್ರಮ ಹಾಗೂ ಸಾಮರ್ಥ್ಯವನ್ನು ಧರ್ಮಕಾರ್ಯಕ್ಕೆ ಅರ್ಪಿಸಿದ್ದಾರೆ. ಇದೇ ನಿಜವಾದ ರಾಮಸೇವೆ ಎಂದರು.

ಈ ಸಂದರರ್ಭದಲ್ಲಿ ಚಾತುರ್ಮಾಸ ಸಮಿತಿ ಅಧ್ಯಕ್ಷ ಅನೀಲ ಪೈ, ಸೆಂಟರ್ ಕಮಿಟಿ ಉಪಾಧ್ಯಕ್ಷ ಆರ್.ಆರ್. ಕಾಮತ, ಶಿವಾನಂದ ಸಾಲಗಾಂವಕರ, ರಾಮಚಂದ್ರ ಶ್ಯಾನಭಾಗ ಬೆಂಗಳೂರು, ದಿನೇಶ ಆರ್ ಪೈ, ವಿಜಯ ಸರ್‌ದೇಸಾಯಿ ಸೇರಿದಂತೆ ಇತರ ಗಣ್ಯರು ಇದ್ದರು. ಚಾತುರ್ಮಾಸ ವ್ರತದ ಸಮಾರೋಪದ ಅಂಗವಾಗಿ ಭವ್ಯ ದಿಗ್ವಿಜಯ ಮಹೋತ್ಸವ ನಡೆಯಿತು. ಪುಷ್ಪಾಲಂಕೃತಗೊಂಡ ಶ್ರೀಪಾದ ವಡೇರ ಸ್ವಾಮೀಜಿಯವರ ದಿವ್ಯ ರಥ, ವಿವಿಧ ಆಕರ್ಷಕ ಟ್ಯಾಬ್ಲೋಗಳು ಮೆರವಣಿಗೆಯ ಮೆರುಗನ್ನು ಹೆಚ್ಚಿಸಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವೈದ್ಯರ ಕರ್ತವ್ಯಕ್ಕೆ ಅಡ್ಡಿಪಡಿಸಿದರೆ ಕ್ರಮ ಅಗತ್ಯ: ರಮಿತಾ
ಮೂಡ್ಲಕಟ್ಟೆ ನರ್ಸಿಂಗ್‌ ಕಾಲೇಜಿನಿಂದ ಆತ್ಮಹತ್ಯೆ ತಡೆ ಮಾಸಾಚರಣೆ