ಜಿಲ್ಲಾದ್ಯಂತ ಎಳ್ಳಮಾಸಿ ಸಡಗರ

KannadaprabhaNewsNetwork |  
Published : Dec 20, 2025, 01:15 AM IST
 | Kannada Prabha

ಸಾರಾಂಶ

ಜಿಲ್ಲೆಯಲ್ಲಿ ಶುಕ್ರವಾರ ಎಳ್ಳಾಮಾಸಿ ಸಡಗರ ಮನೆ ಮಾಡಿತ್ತು. ರೈತರು ಸೇರಿದಂತೆ ಎಲ್ಲರೂ ಹೊಲಕ್ಕೆ ತೆರೆಳಿ ಭೂಮಿತಾಯಿಗೆ ಪೂಜೆ ಮಾಡಿ ನೈವೇದ್ಯ ಅರ್ಪಿಸಿದರು. ಚೇರಗ ಚೆಲ್ಲಿ ಭೂಮಿ ದೇವಿಗೆ ನಮಿಸಿದರು.

ಕಲಬುರಗಿ/ ಆಫ್ಜಲ್ಪುರ್: ಜಿಲ್ಲೆಯಲ್ಲಿ ಶುಕ್ರವಾರ ಎಳ್ಳಾಮಾಸಿ ಸಡಗರ ಮನೆ ಮಾಡಿತ್ತು. ರೈತರು ಸೇರಿದಂತೆ ಎಲ್ಲರೂ ಹೊಲಕ್ಕೆ ತೆರೆಳಿ ಭೂಮಿತಾಯಿಗೆ ಪೂಜೆ ಮಾಡಿ ನೈವೇದ್ಯ ಅರ್ಪಿಸಿದರು. ಚೇರಗ ಚೆಲ್ಲಿ ಭೂಮಿ ದೇವಿಗೆ ನಮಿಸಿದರು.ರೈತರ ಜೀವ ಭೂಮಿ ತಾಯಿ. ಈ ಭೂಮಿ ತಾಯಿಯನ್ನು ರೈತರು ಆರಾಧಿಸುತ್ತಾರೆ. ಅದು ವಿಶೇಷವಾಗಿ ಈ ಎಳ್ಳ ಅಮವಾಸ್ಯೆ ರೈತಾಪಿ ವರ್ಗಕ್ಕೆ ಹಬ್ಬವಿದ್ದಂತೆ. ಇದನ್ನು ತಾಲೂಕಿನಾದ್ಯಂತ ರೈತರು ಸಂಭ್ರಮದಿಂದ ಆಚರಣೆ ಮಾಡಿದರು.ಇಡಿ ರೈತರ ಕುಟುಂಬ ಸಮೇತರಾಗಿ ಎತ್ತಿನಗಾಡಿಯಲ್ಲಿ ವಿಶೇಷ ತಿಂಡಿ, ತಿನಿಸುಗಳೊಂದಿಗೆ ತಮ್ಮ ಜಮೀನುಗಳಿಗೆ ತೆರಳಿ ತಮ್ಮ ಜಮೀನಿನ ಸುತ್ತ ಸಪ್ಪನೆಯ ಹೋಳಿಗೆ-ಅನ್ನ ಮಿಶ್ರಿತ ಪದಾರ್ಥವನ್ನು ಭೂಮಿ ತಾಯಿಗೆ ನೈವೈಧ್ಯ ಅರ್ಪಿಸುತ್ತಿರುವುದು ಮಾತ್ರ ವಿಶೇಷ.ಆಫ್ಜಲ್ಪುರದಲ್ಲಿ ಸಂಭ್ರಮ:

ಆಫ್ಜಲ್ಪುರ ತಾಲೂಕಿನಲ್ಲಿ ಎಳ್ಳ ಅಮಾವಾಸ್ಯೆ ಹಬ್ಬವನ್ನು ರೈತರು ವಿಶೇಷ ಹಾಗೂ ವಿಶಿಷ್ಟವಾಗಿ ಆಚರಿಸಿದರು.

ಪಟ್ಟಣ ಸೇರಿದಂತೆ ತಾಲೂಕಿನ ಮಣ್ಣೂರ, ಶೇಷಗಿರಿ, ಹೊಸೂರ, ಶಿವಬಾಳನಗರ, ಉಪ್ಪಾರವಾಡಿ, ರಾಮನಗರ, ಕುಡಗನೂರ, ಶಿವೂರ, ಕರಜಗಿ, ಮಾಶಾಳ, ಉಡಚಣ, ಉಡಚಣಹಟ್ಟಿ, ಭೊಸಗಾ ಸೇರಿ ತಾಲೂಕಿನ ಪ್ರತಿ ಹಳ್ಳಿ ಹಳ್ಳಿಯ ರೈತರು ಎತ್ತಿನಗಾಡಿ, ಟ್ರ್ಯಾಕ್ಟರ್ ಅನ್ನು ಅಲಂಕಾರ ಮಾಡಿಕೊಂಡು ತಮ್ಮ ಜೋಳದ ಜಮೀನುಗಳಿಗೆ ತೆರಳಿದರು. ತಾವು ತಯಾರಿಸಿದ ವಿಶೇಷ ತಿಂಡಿ-ತಿನಿಸುಗಳನ್ನು ಜೋಳ ಬಿತ್ತಿದ ಹೊಲಕ್ಕೆ ಹೋಗಿ ವಿಶೇಷ ನೈವೈದ್ಯದೊಂದಿಗೆ ಪೂಜೆ ಸಲ್ಲಿಸಿದರು. ಬಳಿಕ ಜೊಳದ ಹೊಲದ ಮಧ್ಯೆ ತಮ್ಮ ಅಡುಗೆಯನ್ನು ''''''''ಚರಗ'''''''' ಚೆಲ್ಲಿದರು. ರೈತರ ಜೀವನಾಡಿ ಭೂತಾಯಿಗೆ ನಮಿಸಿ, ಫಸಲು ಚೆನ್ನಾಗಿ ಬರಲು ಎಂದು ಪ್ರಾರ್ಥಿಸಿದರು.

ಜೋಳಕ್ಕೆ ರೈತರ ನಮನ:

ಕೇವಲ ಒಂದೇ ಮಳೆಗೆ ಬೆಳೆ ಬೆಳೆಯುವುದು ಈ ಜೋಳದ ಬೆಳೆ. ಈ ಚಳಿಗಾಲದ ವಿಪರೀತ ಚಳಿಗೆ ಬೆಳೆದು ರೈತರಿಗೆ ಫಸಲು ನೀಡುತ್ತದೆ. ಈ ಬೆಳೆಯಿಂದ ರೈತರಿಗೆ ಕಡಿಮೆ ಖರ್ಚಿನಲ್ಲಿ ಬೆಳೆ ಬೆಳೆಯಬಹುದು. ಇದು ರೈತರ ಆರ್ಥಿಕ ಪರಿಸ್ಥಿತಿ ಹೆಚ್ಚು ಮಾಡುತ್ತದೆ. ಜೊತೆಗೆ ತಮ್ಮ ರೈತರ ಜೊತೆಗಾರ ಎತ್ತುಗಳಿಗೆ ತಿನ್ನಲು ಸಪ್ಪೆಯನ್ನು ಕೂಡ ಈ ಜೋಳದಿಂದ ಬರುತ್ತದೆ. ಈ ಜೋಳದಿಂದ ಹಲವು ರೀತಿಯ ಅನೂಕೂಲಗಳು ಆಗುತ್ತವೆ. ಹಾಗಾಗಿ ಈ ಜೋಳವನ್ನು ತಾಲೂಕಿನ ರೈತರು ಆರಾಧಿಸುತ್ತಾರೆ. ರೈತರು ಇದೇ ಜೋಳದ ಹೊಲದಲ್ಲಿ ಒಂದು ದಿನ ಕುಟುಂಬ ಸಮೇತರಾಗಿ ವಾಸ್ತವ್ಯ ಹೂಡಿ ಗೋಲಾಕಾರದಲ್ಲಿ ಕುಳಿತು ವಿಶೇಷ ಭೋಜನ ಸವಿದರು. ತಮ್ಮ ಮಕ್ಕಳು, ಬೀಗರು, ಬಂಧು ಬಳಗದೊಂದಿಗೆ ಸೇರಿದರು. ಇದು ರೈತಾಪಿ ವರ್ಗದ ಜನರಲ್ಲಿ ಉತ್ಸಾಹ ಹೆಚ್ಚು ಮಾಡುತ್ತದೆ.ಪ್ರಕೃತಿ ಮಾತೆಗೆ ''''''''ರೈತರ ಚರಗವೇ ನೈವೈಧ್ಯ ನಮನ:

ಕನ್ನಡಪ್ರಭ ಜೊತೆ ರೈತರಾದ ಶಿವಲಿಂಗ ಜಾಲ್ವಾಡಿ, ಲಗಶೆಪ್ಪ ಭಾಸಗಿ ಮಹಾದೇವಪ್ಪ, ಅಲ್ಲಾಪೂರ ವೇಣುಮಾಧವ ಅವಧಾನಿ, ಭೀಮಾಶಂಕರ ಪೂಜಾರಿ, ಸಂತೋಷ ಅಲ್ಲಾಪೂರ, ಸೋಮಯ್ಯ ಹಿರೇಮಠ, ಶಿವಪುತ್ರ ನಿವರಗಿ ಸಂತೋಷ ಕೋನಳ್ಳಿ ಮಾತಾನಾಡಿ, ಎಳ್ಳ ಅಮಾವಸ್ಯೆ ಇದು ವರ್ಷಕ್ಕೊಮ್ಮೆ ಬರುವ ರೈತರ ಹಬ್ಬವಾಗಿದೆ. ಇದನ್ನು ನಮ್ಮ ಹಿರಿಯರು ಮೊದಲಿನಿಂದಲೂ ಆಚರಣೆ ಮಾಡಿಕೊಂಡು ಬಂದಿದ್ದಾರೆ ಎಂದರು.ಮಳೆ ಇಲ್ಲದ ಬೆಳೆ ಅಂದರೆ ಬಿಳಿ ಜೋಳ. ಬಿಳಿ ಜೋಳವನ್ನು ಅಕ್ಟೋಬರ್ ತಿಂಗಳಲ್ಲಿ ಬಿತ್ತಲಾಗುತ್ತದೆ. ಪಾಂಡವರು-ಕೌರವರು ಬೆಳೆದ ಬೆಳೆ ಈ ಬಿಳಿ ಜೋಳ. ಇಂದು ನಾವು ನಂಬಿದ ಭೂಮಿ ತಾಯಿಗೆ ಚೆರಗ ಚೆಲ್ಲುವ ಮೂಲಕ ನೈವೈದ್ಯ ಅರ್ಪಿಸುತ್ತೇವೆ. ಹಿಂಡಿ ಪಲ್ಯಾ, ಕಾಯಿಪಲ್ಯಾ, ಹೋಳಿಗೆ, ಅನ್ನ-ಸಾಂಬಾರು ಅನ್ನು ಮುದ್ದೆ ಮಾಡಿ ಈಡೀ ಜೋಳದ ಹೊಲದ ತುಂಬಾ ಚೆರಗ ಚೆಲ್ಲುತ್ತೇವೆ ಎಂದು ತಿಳಿಸಿದರು.

ನಮ್ಮ ಕುಟುಂಬದ ಎಲ್ಲಾ ಸದಸ್ಯರು ಸೇರಿ ನಮ್ಮ ಜಮೀನಿನಲ್ಲೆ ವಿವಿಧ ಬಗೆಯ ಊಟ, ತಿಂಡಿ-ತಿನಿಸುಗಳನ್ನು ಸವೆಯಲಾಗುತ್ತದೆ, ಹೋಳಿಗೆ, ಅನ್ನ-ಸಾಂಬಾರು, ಬದನೆಕಾಯಿಯನ್ನು ಕುಟುಂಬಸ್ಥರೆಲ್ಲರೂ ಊಟ ಸವಿದು ಸಂಜೆ ಮನೆಗೆ ತೆರಳುತ್ತೇನೆ ಎಂದು ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಣಸೆ, ಹಲಸು, ನೇರಳೆಗೆ ಮಂಡಳಿ ರಚಿಸಿ: ದೇವೇಗೌಡ
ಗುಮ್ಮ ಬಂದ ಗುಮ್ಮ, ಮಕ್ಕಳಿಗೆ ಹೊಡೆಯೋ ಗುಮ್ಮ!