ಶಿಕಾರಿಪುರ: ಸಮಾಜದ ಸಂಘಟನೆ ಕಷ್ಟಸಾಧ್ಯ, ಸಂಕುಚಿತ ಮನೋಭಾವ ಹಾಗೂ ಸ್ವಾರ್ಥ ಬದಿಗೊತ್ತಿ ವೀರಶೈವ ಸಮಾಜವನ್ನು ಸದೃಢಗೊಳಿಸಬೇಕಾಗಿದೆ. ಸ್ವಾರ್ಥ ಸಾಧನೆಗೆ ಸಂಘಟನೆ ದುರ್ಬಲಗೊಳಿಸದಂತೆ ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯಾಧ್ಯಕ್ಷ, ನಿವೃತ್ತ ಐಪಿಎಸ್ ಅಧಿಕಾರಿ ಶಂಕರ್ ಬಿದರಿ ಹೇಳಿದರು.
2026ರ ಫೆಬ್ರವರಿಯಲ್ಲಿ ಶಿಕಾರಿಪುರದಲ್ಲಿ ನಡೆಯುವ ಮಹಾಸಭೆಗೆ 10 ಸಾವಿರ ಜನ ಸೇರಬೇಕು, ಮನೆಗೊಬ್ಬರಂತೆ ಸದಸ್ಯರನ್ನು ನೋಂದಣಿ ಮಾಡಿ ಅದರಿಂದ ಬರುವ ಸಂಪನ್ಮೂಲದಿಂದ ಬಡ ವಿದ್ಯಾರ್ಥಿಗಳಿಗೆ, ರೋಗಿಗಳಿಗೆ, ದೀನ ದಲಿತರ ಸಹಾಯಕ್ಕಾಗಿ ವಿನಿಯೋಗಿಸಿ ಎಂದು ಸಲಹೆ ನೀಡಿದರು.ಸಭೆಯಲ್ಲಿ ರಾಜ್ಯ ಕಾರ್ಯನಿರ್ವಾಹಕ ಸಮಿತಿಯ ಸದಸ್ಯ ಹಾಗೂ ನಿಕಟಪೂರ್ವ ತಾ.ಅಧ್ಯಕ್ಷ ಎನ್.ವಿ.ಈರೇಶ್, ತಾಲೂಕು ಅಧ್ಯಕ್ಷ ಸುಧೀರ್ ಮಾರವಳ್ಳಿ, ರಾಜ್ಯ ಸಮಿತಿಯ ಕಾರ್ಯದರ್ಶಿ ಶಶಿಕಲಾ, ಜಿಲ್ಲಾ ಅಧ್ಯಕ್ಷ ರುದ್ರಮುನಿ ಸಜ್ಜನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಳ್ಳಕೆರೆ ಸಂತೋಷ್, ಜಿಲ್ಲಾ ಉಪಾಧ್ಯಕ್ಷ ಈಸೂರು ಜಗದೀಶ್, ಜಿಲ್ಲಾ ಕೊಶಾಧ್ಯಕ್ಷ ಕಾನೂರು ಮಲ್ಲಿಕಾರ್ಜುನ್, ಪುರಸಭಾ ಸದಸ್ಯ ಮಯೂರ್ ದರ್ಶನ್ ಉಳ್ಳಿ, ಪಾರು ಸ್ವಾಮಿ, ಆನಂದ್ ಮಡ್ಡಿ, ಬಾಲಚಂದ್ರ ಹೊನ್ನಶೆಟ್ಟರ್, ಕಾನೂರು ನಿರಂಜನ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಘಟಕದ ಮುಖಂಡರು ಹಾಗೂ ಪದಾಧಿಕಾರಿಗಳು ಇದ್ದರು.