ಮೇ 26 ರಂದು ಸಾಧಕರಿಗೆ ಸೇವಾ ರತ್ನ ಪ್ರಶಸ್ತಿ ಪ್ರದಾನ: ಡಾ.ಧರ್ಮಣ್ಣ ಬಡಿಗೇರ ಮಾಹಿತಿ

KannadaprabhaNewsNetwork |  
Published : May 24, 2025, 12:08 AM IST
ಜೇವರ್ಗಿ : ಧರ್ಮಣ್ಣ ಬಡಿಗೇರ ಅವರ ಭಾವಚಿತ್ರ ಅಂಟಿಸಲಾಗಿದೆ ಬಳಸಲು ಮನವಿ, | Kannada Prabha

ಸಾರಾಂಶ

Seva Ratna Award to be presented to achievers on May 26: Dr. Dharmana Badigera Information

-ಶ್ರೀಗಂಗಾಧರೇಶ್ವರ ಗ್ರಾಮೀಣಾಭಿವೃದ್ದಿ ವಿದ್ಯಾವರ್ದಕ ಸಂಘದ ಸಹಯೋಗದಲ್ಲಿ ಪ್ರಶಸ್ತಿ ಪ್ರದಾನ

----

ಕನ್ನಡಪ್ರಭ ವಾತೆ ಜೇವರ್ಗಿ: ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಗೈದ ಸಾಧಕರಿಗೆ ಸೇವಾ ರತ್ನ ಪ್ರಶಸ್ತಿ ಪ್ರದಾನ ಮೇ.26 ರಂದು ನಡೆಯಲಿದೆ ಎಂದು ಡಾ.ಧರ್ಮಣ್ಣ ಬಡಿಗೇರ ತಿಳಿಸಿದ್ದಾರೆ

ಅವರು ಶುಕ್ರವಾರ ಪಟ್ಟಣದ ಶ್ರೀ ಮಹಾಲಕ್ಷ್ಮೀ ಮಹಿಳಾ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯದ ಆವರಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡುತ್ತ ಶ್ರೀಶಿವಲಿಂಗಪ್ಪಗೌಡ ಪಾಟೀಲ ನರಿಬೋಳ ಎಜ್ಯೂಕೇಷನ್ ಚಾರಿಟೇಬಲ್ ಮತ್ತು ಸೋಷಿಯಲ್ ವೆಲ್ಪೇರ್ ಟ್ರಷ್ಟ್(ರಿ) ನರಿಬೋಳ ಹಾಗೂ ಪೂಜ್ಯ ಶ್ರೀಗಂಗಾಧರೇಶ್ವರ ಗ್ರಾಮೀಣಾಭಿವೃದ್ದಿ ವಿದ್ಯಾವರ್ದಕ ಸಂಘದ ಸಹಯೋಗದೊಂದಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.

ಬೆಳಗಾವಿ ಮುಕ್ತಿಮಠದ ಶ್ರೀ ಶಿವಸಿದ್ದಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮಿಜಿ, ಆಂದೋಲಾ ಕರುಣೇಶ್ವರ ಮಠದ ಶ್ರೀಸಿದ್ದಲಿಂಗ ಸ್ವಾಮೀಜಿ, ಶಹಾಪುರ ಶ್ರೀಗಂಗಾಧರೇಶ್ವರ ಸ್ವಾಮೀಜಿ, ಮುಡಬೂಳದ ಶ್ರೀಅವಧೂತ ತ್ರೀಶೂಲಪ್ಪ ಶರಣರು, ಅಣಜಿಗಿಯ ಶ್ರೀಸತ್ಯಾನಂದ ಮುತ್ಯಾ ಸಾನಿದ್ಯದಲ್ಲಿ ನಡೆಯುವ ಕಾರ್ಯಕ್ರಮವನ್ನು ಜಿಪಂ ಮಾಜಿ ವಿರೂಧ ಪಕ್ಷದ ನಾಯಕ ಬಸವರಾಜ ಪಾಟೀಲ ನರಿಬೋಳ ಉದ್ಘಾಟಿಸಲಿದ್ದು, ಲಕ್ಷ್ಮೀದೇವಿ ಹಾಲಕೋಡ, ಶಿವರಾಜ ಪಾಟೀಲ ರದೇವಾಡಗಿ, ರಾಜಶೇಖರ ಸೀರಿ, ಮಲ್ಲಣ್ಣ ಯಲಗೋಡ, ರಮೇಶಬಾಬು ವಕೀಲ, ರುಬಿನಾ ಪರವಿನ್, ಮಹಾಂತಯ್ಯಾ ಹಿರೇಮಠ, ಶಿವಶರಣಪ್ಪ ಹಳಿಮನಿ, ಈಶ್ವರ ಹಿಪ್ಪರಗಿ, ತಮ್ಮಣ್ಣ ಬಾಗೇವಾಡಿ, ಮಂಜುಳಾ ಡಿ. ಬಡಿಗೇರ ಮುಖ್ಯ ಅತಿಥಿಗಳಾಗಿ ಪಾಲ್ಗೋಳಲಿದ್ದಾರೆ. ವಿದ್ಯಾರ್ಥಿನಿ ಕ್ಷೇಮ ಪಾಲನಾ ನಿರ್ದೆಶನಾಲಯದ ನಿರ್ದೆಶಕಿ ಲಕ್ಷ್ಮೀದೇವಿ ಹಾಲಕೋಡ, ಉತ್ತರ ಕರ್ನಾಟಕ ಕರವೇ ಅಧ್ಯಕ್ಷ ಶರಣು ಗದ್ದುಗೆ, ಸಿಪಿಐ ರಾಜಾಸಾಹೇಬ್ ನದಾಫ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಾಬುರಾವ ಯಡ್ರಾಮಿ, ಮಹಾರಾಜ ದಿಗ್ಗಿ, ವಿರೇಶ ಕಂದಗಲ, ಪತ್ರಕರ್ತ ವಿಜಯಕುಮಾರ ಕಲ್ಲಾ, ಶಿಕ್ಷಕ ಜಗನಾಥ ಇಮ್ಮಣ್ಣಿ, ಡಾ.ಮಾಳಪ್ಪ ಪೂಜಾರಿ, ಮಡಿವಾಳಪ್ಪಗೌಡ ಮಾಲಿಪಾಟೀಲ, ಬೀಮರಾಯ ಗುಂಡಾಪೂರ, ಅವರನ್ನು ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌