ಏಳು ವೈದ್ಯರಿಗೆ ಶಿಕ್ಷಕರ ದಿನಾಚರಣೆಯ ಪ್ರಶಸ್ತಿ ಪ್ರದಾನ

KannadaprabhaNewsNetwork |  
Published : Sep 12, 2024, 01:45 AM IST
ಸಾಧಕ ವೈದ್ಯರನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಏಳು ಮಂದಿ ಸಾಧಕ ವೈದ್ಯರಿಗೆ ಅವರು ವೈದ್ಯಕೀಯ ಶಿಕ್ಷಣ ಕ್ಷೇತ್ರಕ್ಕೆ ಸಲ್ಲಿಸಿದ ಅನುಪಮ ಸೇವೆಗಾಗಿ ಶಿಕ್ಷಕರ ದಿನಾಚರಣೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಮಂಗಳೂರು: ಭಾರತೀಯ ವೈದ್ಯಕೀಯ ಸಂಘ, ವೈದ್ಯಕೀಯಶಾಸ್ತ್ರ ತಜ್ಞರ ಸಂಘ, ಕೆನರಾ ಕೀಲು ಮೂಳೆಶಾಸ್ತ್ರ ತಜ್ಞರ ಸಂಘದ ಜಂಟಿ ಆಶ್ರಯದಲ್ಲಿ ನಗರದ ಐಎಂಎ ಸಭಾಂಗಣದಲ್ಲಿ ಏಳು ಮಂದಿ ಸಾಧಕ ವೈದ್ಯರಿಗೆ ಅವರು ವೈದ್ಯಕೀಯ ಶಿಕ್ಷಣ ಕ್ಷೇತ್ರಕ್ಕೆ ಸಲ್ಲಿಸಿದ ಅನುಪಮ ಸೇವೆಗಾಗಿ ಶಿಕ್ಷಕರ ದಿನಾಚರಣೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಡಾ.ಎಸ್.ಆರ್. ನಾಯಕ್ (ಪ್ರಸೂತಿ ಮತ್ತು ಸ್ತ್ರೀ ಆರೋಗ್ಯ ತಜ್ಞರು), ಡಾ.ಎಚ್. ರವೀಂದ್ರನಾಥ ರೈ (ಕೀಲು ಮೂಳೆ ಶಾಸ್ತ್ರ ತಜ್ಞರು), ಡಾ. ಸುರೇಂದ್ರ ಕಾಮತ್ (ಕೀಲು ಮೂಳೆ ತಜ್ಞರು), ಡಾ. ಶಾಂತರಾಮ ಬಾಳಿಗ (ಮಕ್ಕಳ ತಜ್ಞರು), ಡಾ. ಪದ್ಮಜಾ ಉದಯ ಕುಮಾರ್ (ಔಷಧೀಯ ಶಾಸ್ತ್ರ ತಜ್ಞರು), ಡಾ. ಪ್ರೇಮಾ ಸಲ್ಡಾನಾ (ರೋಗ ಶಾಸ್ತ್ರ ತಜ್ಞರು), ಡಾ. ಪ್ರೇಮ್ ಕೋಟ್ಯಾನ್ (ಕೀಲು ಮೂಳೆ ತಜ್ಞರು) ಅವರನ್ನು ಈ ಸಂದರ್ಭ ಸನ್ಮಾನಿಸಲಾಯಿತು.

ಸನ್ಮಾನ ನೆರವೇರಿಸಿದ ಸಂತ ಅಲೋಶಿಯಸ್ ವಿವಿ ಉಪಕುಲಪತಿ ಡಾ. ಪ್ರವೀಣ್ ವಿಜಯ ಮಾರ್ಟಿಸ್ ಮಾತನಾಡಿ, ವಿದ್ಯಾರ್ಥಿಗಳ ಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹಿಸಿ ಶ್ರದ್ಧೆಯಿಂದ ಮೌಲ್ಯಾಧಾರಿತ ಶಿಕ್ಷಣ ಧಾರೆ ಎರೆದು ಶ್ರೇಷ್ಠ ಪ್ರಜೆಯಾಗಿ ರೂಪಿಸುವ ಶಿಕ್ಷಕರ ಪಾತ್ರ ಅಮೂಲ್ಯ ಎಂದು ಹೇಳಿದರು.

ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ. ರಂಜನ್ ಸ್ವಾಗತಿಸಿದರು. ಭಾರತೀಯ ವೈದ್ಯಕೀಯಶಾಸ್ತ್ರ ತಜ್ಞರ ಸಂಘದ ಅಧ್ಯಕ್ಷೆ ಡಾ. ವತ್ಸಲಾ ಕಾಮತ್, ಕಾರ್ಯದರ್ಶಿ ಡಾ. ಜಯಪ್ರಕಾಶ್, ಕೆನರಾ ಕೀಲು ಮತ್ತು ಮೂಳೆ ಶಾಸ್ತ್ರ ತಜ್ಞರ ಅಧ್ಯಕ್ಷ ಡಾ.ಕೆ.ಆರ್. ಕಾಮತ್, ಕಾರ್ಯದರ್ಶಿ ಡಾ. ಅಹಮದ್ ರಿಜ್ವಾನ್, ಭಾರತೀಯ ವೈದ್ಯಕೀಯ ಸಂಘದ ಕೋಶಾಧಿಕಾರಿ ಡಾ. ಪ್ರಶಾಂತ್ ಇದ್ದರು. ಅಕ್ಷತಾ ಸುಜೀರ್ ನಿರೂಪಿಸಿದರು. ಐಎಂಎ ಕಾರ್ಯದರ್ಶಿ ಡಾ. ಅವಿನ್ ಆಳ್ವ ವಂದಿಸಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ