ಹಿರಿಯ ನಾಗರಿಕರ ರಕ್ಷಣೆಗಾಗಿ ಹಲವು ಕಾನೂನು ಜಾರಿ

KannadaprabhaNewsNetwork |  
Published : Oct 13, 2025, 02:00 AM IST
ಹಿರಿಯ ನಾಗರೀಕರ ರಕ್ಷಣೆಗಾಗಿ ಹಲವು ಕಾನೂನು ಜಾರಿ : ನ್ಯಾ. ಭರತ್ ಚಂದ್ರ | Kannada Prabha

ಸಾರಾಂಶ

ಭಾರತ ಸರ್ಕಾರ ಹಿರಿಯ ನಾಗರೀಕರ ರಕ್ಷಣೆಗಾಗಿ ಹಲವು ಕಾಯ್ದೆ ಕಾನೂನುಗಳನ್ನು ಜಾರಿಗೆ ತಂದಿದ್ದು, ಅವುಗಳ ನೆರವು ಪಡೆದುಕೊಂಡು ನೆಮ್ಮದಿಯಿಂದ ಉತ್ತಮ ಜೀವನ ಸಾಗಿಸಬೇಕು ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಕೆ.ಎಸ್ ಭರತ್ ಚಂದ್ರ ತಿಳಿಸಿದರು.

ಕನ್ನಡಪ್ರಭ ವಾರ್ತೆ ತಿಪಟೂರು

ಭಾರತ ಸರ್ಕಾರ ಹಿರಿಯ ನಾಗರೀಕರ ರಕ್ಷಣೆಗಾಗಿ ಹಲವು ಕಾಯ್ದೆ ಕಾನೂನುಗಳನ್ನು ಜಾರಿಗೆ ತಂದಿದ್ದು, ಅವುಗಳ ನೆರವು ಪಡೆದುಕೊಂಡು ನೆಮ್ಮದಿಯಿಂದ ಉತ್ತಮ ಜೀವನ ಸಾಗಿಸಬೇಕು ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಕೆ.ಎಸ್ ಭರತ್ ಚಂದ್ರ ತಿಳಿಸಿದರು. ನಗರದ ಹಿರಿಯರ ಮನೆ ಶಾರದ ವೃದ್ಧಾಶ್ರಮದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ತಾಲೂಕು ವಕೀಲರ ಸಂಘದಿಂದ ಆಯೋಜಿಸಿದ್ದ ಹಿರಿಯ ನಾಗರಿಕರ ದಿನಾಚರಣೆ ಮತ್ತು ಮಾನಸಿಕ ಸ್ವಾಸ್ಥ್ಯ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕುಟುಂಬ ಅಥವಾ ಸಮಾಜದ ಅಭಿವೃದ್ಧಿಯಾಗಬೇಕಾದರೆ ಹಿರಿಯರ ಮಾರ್ಗದರ್ಶನದ ಅವಶ್ಯಕತೆಯನ್ನು ಕಾಯ್ದಿರಿಸುವ ನಿಟ್ಟಿನಲ್ಲಿ ೨೦೧೭ನೇ ಇಸವಿಯಲ್ಲಿ ಹಿರಿಯ ನಾಗರಿಕರ ಸಂರಕ್ಷಣಾ ಕಾಯ್ದೆ ರಚನೆಯಾಗಿದ್ದು, ತಮ್ಮ ಮಕ್ಕಳ ಅಥವಾ ಸೊಸೆಯಂದಿರ ಪೋಷಣೆಗೆ ತಾವುಗಳು ಒಳಗಾದ ಪಕ್ಷದಲ್ಲಿ ಈ ಕಾಯ್ದೆ ಅನುಸಾರ ಸೂಕ್ತ ರಕ್ಷಣೆ ಪಡೆದುಕೊಳ್ಳಬಹುದು. ಮಕ್ಕಳು ಇಳಿವಯಸ್ಸಿನಲ್ಲಿ ನಿಮ್ಮನ್ನು ನೋಡಿಕೊಳ್ಳದಿದ್ದರೆ ತಮ್ಮಿಂದ ಮಕ್ಕಳಿಗೆ ವರ್ಗಾವಣೆಯಾದ ಆಸ್ತಿಯನ್ನು ಮರಳಿ ಪಡೆಯುವ ವ್ಯವಸ್ಥೆಯಿದ್ದು ಈ ಸಂಬಂಧ ಅರ್ಜಿಗಳನ್ನು ತಾಲೂಕು ಕಾನೂನು ಸೇವಾ ಸಮಿತಿಗೆ ಸಲ್ಲಿಸಿದರೆ ನಿಮ್ಮ ನೆರವಿಗೆ ಸದಾ ಸಿದ್ಧರಿರುತ್ತೇವೆ. ತಾವುಗಳು ಮಾನಸಿಕ ಸ್ವಾಸ್ಥತೆಯನ್ನು ಅಥವಾ ಆರೋಗ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ತಮ್ಮ ಸುತ್ತಮುತ್ತಲಿನ ವಾತಾವರಣವನ್ನು ಆರೋಗ್ಯಕರವಾಗಿ ಇಟ್ಟುಕೊಳ್ಳಬೇಕು. ಯಾವುದೇ ರೀತಿಯ ನಕಾರಾತ್ಮಕ ಆಲೋಚನೆಗಳಿಗೆ ಒಳಗಾಗದೆ ಸಾತ್ವಿಕ ಆಹಾರ ಸೇವಿಸುವ ಮೂಲಕ ಧ್ಯಾನ, ಪ್ರಾಣಯಾಮ ಮತ್ತಿತರ ಉಪಯುಕ್ತ ಅಭ್ಯಾಸಗಳನ್ನು ಮಾಡಿಕೊಳ್ಳುವ ಮೂಲಕ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದರು. ಕಾರ್ಯಕ್ರಮದಲ್ಲಿ ಶಾರದ ವೃದ್ಧಾಶ್ರಮದ ಅಧ್ಯಕ್ಷ ವಿ.ಆರ್.ರಾಮಣ್ಣ, ಬದುಕು ಸಂಸ್ಥೆಯ ನಂದಕುಮಾರ್, ನಗರಸಭಾ ಮಾಜಿ ಸದಸ್ಯ ತರಕಾರಿ ಗಂಗಾಧರ್, ಟ್ರಸ್ಟಿ ಚೆನ್ನಾಂಬಿಕ, ಕಾನೂನು ಸಲಹೆಗಾರ ಡಿ. ಅಶೋಕ್ ಮತ್ತಿತರರಿದ್ದರು.

PREV

Recommended Stories

ಬಂಡಿಗಣಿಯಲ್ಲಿಂದು ಸರ್ವಧರ್ಮ ಮಹಾಸಂಗಮ: ಸಿಎಂ ಭಾಗಿ
ಆರೆಸ್ಸೆಸ್‌ ಬೆಳವಣಿಗೆ ಕೆಲ ಶಕ್ತಿ, ಸಂಘಟನೆಗಳಿಗೆ ಸಹಿಸಲಾಗ್ತಿಲ್ಲ: ಅರುಣಕುಮಾರ