ಕನ್ನಡ ಪ್ರಭ ಕಿಕ್ಕೇರಿ
ಪಟ್ಟಣದ ಕೆಪಿಎಸ್ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶಿ.ಕುಮಾರಸ್ವಾಮಿ ಅವರ ಕಿಕ್ಕೇರಿ ಐಸಿರಿ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿ, ನಾನು ಉಪನ್ಯಾಸಕನಾಗಿ ಸೇವೆ ಸಲ್ಲಿಸಿದ ಈ ಕಾಲೇಜಿನಲ್ಲಿಯೇ ನನ್ನ ಬರಹದ ಪುಸ್ತಕವನ್ನು ಬಿಡುಗಡೆ ಮಾಡುವ ಸೌಭಾಗ್ಯ ಸಿಕ್ಕಿರುವುದು ನನ್ನ ಪುಣ್ಯ ಎಂದರು.
ಕಿಕ್ಕೇರಿ ಕೋಟೆ ಕೊತ್ತಲಗಳ, ಕವಿ, ಸಾಹಿತಿಗಳ ಬೇರುಬಿಟ್ಟ ಬೀಡಾಗಿದೆ. ಸಾಮಂತ ದೊರೆಗಳ ನೆಚ್ಚಿನ ಬೀಡು. ಮೈಸೂರು ಮಲ್ಲಿಗೆ ಕವಿ ಕೆಎಸ್ ನರಸಿಂಹಸ್ವಾಮಿ ಹುಟ್ಟಿದ ಮಣ್ಣಿನಲ್ಲಿ ಕಾವ್ಯದ ಸುಗಂಧವಿದೆ. ಈ ಸುಗಂಧವನ್ನು ಶಾಲಾ ಕಾಲೇಜಿನಲ್ಲಿ ಸವಿಯಬೇಕು. ಯುವ ಬರಹಗಾರರು ಆಸಕ್ತಿಯಿಂದ ಮುಂದುವರಿಯಬೇಕು ಎಂಬುದು ತನ್ನ ಆಸೆ ಆಗಿದೆ ಎಂದು ಆಶಿಸಿದರು.ನಿವೃತ್ತ ಪ್ರಾಂಶುಪಾಲ ಚಂದ್ರಮೋಹನ್ ಮಾತನಾಡಿ, ಶ್ರೀರಂಗಪಟ್ಟಣದಲ್ಲಿ ಇರುವ ಕೋಟೆ ಕೊತ್ತಲಗಳಂತೆ ಕಿಕ್ಕೇರಿಯಲ್ಲಿರುವ ಕೋಟೆ, ಬತೇರಿಗೆ ತನ್ನದೇ ಆದ ಇತಿಹಾಸವಿದೆ. ಇವುಗಳನ್ನು ಸಂರಕ್ಷಿಸುವ ಕೆಲಸ ಮೊದಲು ಆಗಬೇಕಿದೆ ಎಂದರು.
ಪ್ರಾಂಶುಪಾಲ ಎಂ.ಆರ್.ಸಹದೇವು ಪುಸ್ತಕ ಕುರಿತು ಮಾತನಾಡಿದರು. ಉಪ ಪ್ರಾಂಶುಪಾಲ ಚೆಲುವನಾರಾಯಣಸ್ವಾಮಿ, ನಿವೃತ್ತ ಪ್ರಾಂಶುಪಾಲ ಚಂದ್ರಮೋಹನ್, ಎಸ್‌ಡಿಎಂಸಿ ಅಧ್ಯಕ್ಷ ಎನ್.ಕೃಷ್ಣೇಗೌಡ, ಸದಸ್ಯ ಕಾಂತರಾಜು, ಮುಖಂಡರಾದ ಕಾಯಿ ಮಂಜೇಗೌಡರು, ಅರುಣ್ ಕುಮಾರ್, ಯೋಗಣ್ಣ , ಮಹದೇವ, ನಟರಾಜ್, ಪ್ರಕಾಶ್, ಎನ್.ಎಸ್.ಎಸ್. ಅಧಿಕಾರಿ ಜಿ.ಎಸ್. ಕುಮಾರಸ್ವಾಮಿ, ಉಪನ್ಯಾಸಕರಾದ ಎನ್. ರವೀಂದ್ರ, ಎ.ಎಂ. ಮಂಜುನಾಥ್, ಎಸ್.ಡಿ.ಹರೀಶ್, ಎನ್.ಎ. ನಾಗೇಶ್, ಫಾಜಿಲಾ ಖಾನಂ, ಚಂದ್ರಿಕಾ, ಇದ್ದರು.