ಹೊಸಪೇಟೆ: ಅವಿಭಜಿತ ಬಳ್ಳಾರಿ ಜಿಲ್ಲೆ ದೇಶದಲ್ಲೇ ಅತ್ಯಂತ ಘೋರ ಬರಗಾಲ ಸ್ಥಿತಿಯಿಂದ ತತ್ತರಿಸಿದೆ. ಈ ಎರಡೂ ಜಿಲ್ಲೆಗಳನ್ನು ತಕ್ಷಣ ಬರಪೀಡಿತ ಜಿಲ್ಲೆಗಳೆಂದು ಸರ್ಕಾರ ಘೋಷಿಸಬೇಕು ಎಂದು ರಾಜ್ಯದ ಪ್ರತಿಪಕ್ಷದ ನಾಯಕ ಅಶೋಕ ಆಗ್ರಹಿಸಿದರು.
ಬರ ಘೋಷಣೆ ಮಾಡಿದ ಬಳಿಕವೇ ಕೇಂದ್ರ ಸರ್ಕಾರದ ಅಧ್ಯಯನ ತಂಡ ರಾಜ್ಯಕ್ಕೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಲು ಸಾಧ್ಯವಾಗುತ್ತದೆ. ಆಗಸ್ಟ್ 15ರ ನಂತರ ಬರ ಘೋಷಣೆ ಮಾಡಿದರೆ ರೈತರಿಗೆ ಯಾವುದೇ ಪ್ರಯೋಜನವಿಲ್ಲ. ಬೆಳೆ ಸಂಪೂರ್ಣ ಹಾಳಾದ ನಂತರ ಪರಿಹಾರ ಘೋಷಿಸುವುದರಿಂದ ಸಂಕಷ್ಟ ನಿವಾರಣೆಯಾಗುವುದಿಲ್ಲ ಎಂದರು.
ಶಾಸಕರಾದ ಕೃಷ್ಣ ನಾಯ್ಕ್, ಬಿ.ಪಿ.ಹರೀಶ್, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಸಂಜೀವ ರೆಡ್ಡಿ, ಜಿಲ್ಲಾ ಉಪಾಧ್ಯಕ್ಷ ಬಲಹುಣಿಸಿ ರಾಮಣ್ಣ, ಎಸ್‌ಟಿ ಮೋರ್ಚಾ ಅಧ್ಯಕ್ಷ ಬಂಗಾರು ಹನುಮಂತು, ಒಬಿಸಿ ಮೋರ್ಚಾ ಉಪಾಧ್ಯಕ್ಷ ಅಯ್ಯಾಳಿ ತಿಮ್ಮಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕೆ. ಎಸ್. ರಾಘವೇಂದ್ರ, ಎಸ್. ಕೃಷ್ಣನಾಯ್ಕ, ಗುಳಿಗಿ ವೀರೇಂದ್ರ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಕಿಚಡಿ ಕೊಟ್ರೇಶ್, ಮುಖಂಡರಾದ ಬಲಹು ಶಂಕರ್ ಮೇಟಿ ಇದ್ದರು.