ಜಮೀನು ವಿವಾದ ಬಗೆಹರಿಸುವ ನೆಪದಲ್ಲಿ ಲೈಂಗಿಕ ಕಿರುಕುಳ

KannadaprabhaNewsNetwork |  
Published : Aug 21, 2026, 01:15 AM IST
ಫೋಟೋ : 20 ಎಚ್,ಎನ್,ಎಮ್ 01    ಹನುಮಸಾಗರದಲ್ಲಿ ಎಸ್ಸಿ ಎಸ್ಟಿ ಅಲೆಮಾರಿ, ಅರೆ ಅಲೆಮಾರಿ, ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ಸಮುದಾಯದವರಿಗೆ ನಿವೇಶನ ನೀಡುವಂತೆ ಹಮ್ಮಿಕೊಳ್ಳುವ ಅನಿರ್ದಿಷ್ಟಾವಧಿ ಧರಣಿಯ ಪೂರ್ವಭಾವಿ ಸಭೆ ಗುರುವಾರ ಜರುಗಿತು. | Kannada Prabha

ಸಾರಾಂಶ

ಜಮೀನು ವಿವಾದ ಬಗೆಹರಿಸುವ ನೆಪದಲ್ಲಿ ಮಹಿಳೆಯೊಬ್ಬರಿಂದ ಹಣ ಪಡೆದಿದ್ದ ಆರೋಪಿ, ನಂತರ ಅವರಿಗೆ ಲೈಂಗಿಕ ಕಿರುಕುಳ ನೀಡಿ ಪತಿಗೆ ಪ್ರಾಣ ಬೆದರಿಕೆ ಹಾಕಿದ್ದರು.

ಪ್ರಜಾಪ್ರಬುದ್ಧ ವೇದಿಕೆ ಪೇಜ್‌ನಲ್ಲಿ ವಿಡಿಯೋ ಮಾಡುತ್ತಿದ್ದ ಶ್ರೀನಾಥ್‌ ಎಂಬಾತನಿಂದ ಕೃತ್ಯ

ಕನ್ನಡಪ್ರಭ ವಾರ್ತೆ ಬೇತಮಂಗಲ

ಜಮೀನು ವಿವಾದ ಬಗೆಹರಿಸಿ ಗ್ರಾಪಂನಲ್ಲಿ ಎಲ್ಲಾ ದಾಖಲೆಗಳನ್ನು ಮಾಡಿಕೊಡುವುದಾಗಿ ನಂಬಿಸಿ, ಹಣ ಪಡೆದು ನಂತರ ಲೈಂಗಿಕ ಕಿರುಕುಳ ನೀಡಿ ಗಂಡನಿಗೆ ಪ್ರಾಣ ಬೆದರಿಕೆ ಹಾಕಲಾಗಿದೆ ಎಂದು ಮಹಿಳೆಯೊಬ್ಬರು ದೂರು ನೀಡಿದ್ದು ಆರೋಪಿ ಶ್ರೀನಾಥ್‌ರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿ ಹೇಳಿಕೆ ಪಡೆದಿದೆ ಎಂದು ಪೋಲೀಸರು ತಿಳಿಸಿದ್ದಾರೆ.

ಬೇತಮಂಗಲ ಠಾಣೆಯಲ್ಲಿ ದೂರು ದಾಖಲಾಗಿದ್ದು, ತ್ಯಾಗರಾಜ್ ನೋಟಿಸ್ ನೀಡಿ ಠಾಣೆಗೆ ಕರೆಸಿಕೊಂಡಾಗ ಶ್ರೀನಾಥ್‌ರನ್ನು ಲಾಕ್ ಮಾಡಲಾಗಿದೆ. ಸರ್ಕಲ್ ಇನ್ಸ್‌ಪೆಕ್ಟರ್ ಎಸ್.ಆರ್.ಜಗದೀಶ್ ವಿಚಾರಣೆ ನಡೆಸಿ ಎಫ್‌ಐಆರ್ ದಾಖಲಿಸಿದ್ದಾರೆ.

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಲೈಂಗಿಕ ಕಿರುಕುಳ, ಮೋಸ (೩೧೮(೪)), ಕ್ರಿಮಿನಲ್ ಬೆದರಿಕೆ (೩೫೧(೨)) ಹಾಗೂ ವಂಚನೆ (೩೦೮(೨)) ಪ್ರಕರಣ ದಾಖಲಾಗಿದೆ.

ಕಮ್ಮಸಂದ್ರದ ಆರೋಪಿ ಶ್ರೀನಾಥ್, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋಗಳನ್ನು ಹರಿಬಿಡುವ ಮೂಲಕ ಹಾಗೂ ಪ್ರಜಾಪ್ರಬುದ್ಧ ವೇದಿಕೆ ಸ್ಥಾಪಿಸಿ ಸರ್ಕಾರಿ ಇಲಾಖೆಗಳು ಮತ್ತು ಪಂಚಾಯಿತಿಗಳಲ್ಲಿನ ಲೋಪದೋಷಗಳ ಬಗ್ಗೆ ವಿಡಿಯೋ ಮಾಡಿ ಪ್ರಚಾರ ಪಡೆದಿದ್ದರು.

ಜಮೀನು ವಿವಾದ ಬಗೆಹರಿಸುವ ನೆಪದಲ್ಲಿ ಮಹಿಳೆಯೊಬ್ಬರಿಂದ ಹಣ ಪಡೆದಿದ್ದ ಆರೋಪಿ, ನಂತರ ಅವರಿಗೆ ಲೈಂಗಿಕ ಕಿರುಕುಳ ನೀಡಿ ಪತಿಗೆ ಪ್ರಾಣ ಬೆದರಿಕೆ ಹಾಕಿದ್ದರು ಎಂದು ಆರೋಪಿಸಲಾಗಿದೆ. ಈ ಸಂಬಂಧ ಸಂತ್ರಸ್ಥ ಮಹಿಳೆ ಬೇತಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ದೂರಿನ ಆಧಾರದ ಮೇಲೆ ವಿಚಾರಣೆಗೆ ಹಾಜರಾಗುವಂತೆ ಬಂಗಾರಪೇಟೆ ಪಿಎಸ್‌ಐ ತ್ಯಾಗರಾಜ್ ನೋಟಿಸ್ ನೀಡಿದ್ದರು. ಠಾಣೆಗೆ ಬಂದಾಗ ಆರೋಪಿಯನ್ನು ವಶಕ್ಕೆ ಪಡೆಯಲಾಯಿತು. ಸರ್ಕಲ್ ಇನ್ಸ್‌ಪೆಕ್ಟರ್ ಎಸ್.ಆರ್.ಜಗದೀಶ್ ವಿಚಾರಣೆ ನಡೆಸಿ, ಎಫ್‌ಐಆರ್ ದಾಖಲಿಸಿ ಕ್ರಮ ಕೈಗೊಳ್ಳಲಾಗಿದೆ.

ಆರೋಪಿ ವಿರುದ್ಧ ಲೈಂಗಿಕ ಕಿರುಕುಳ ಸೇರಿದಂತೆ ಐಪಿಸಿ ಸೆಕ್ಷನ್‌ಗಳಾದ ೩೧೮(೪) (ಮೋಸ), ೩೫೧(೨) (ಕ್ರಿಮಿನಲ್ ಬೆದರಿಕೆ) ಹಾಗೂ ೩೦೮(೨) (ವಂಚನೆ) ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೊಕ್ರಾಣಿ: ಬಾವಿಯಲ್ಲಿ ಯುವತಿ ಶವ ಪತ್ತೆ
ಮುದಗಲ್‌: ಈದ್ ಮಿಲಾದ್ ಹಬ್ಬದ ಶಾಂತಿ ಸಭೆ