ಅಧಿಕಾರಿಗಳ ಮೇಲೆ ಶಿಸ್ತುಕ್ರಮಕ್ಕೆ ಆಗ್ರಹಿಸಿ ಎಸ್‌ಎಫ್‌ಐ ನೇತೃತ್ವದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ

KannadaprabhaNewsNetwork |  
Published : Aug 12, 2025, 12:30 AM IST
ರಾಣಿಬೆನ್ನೂರಿನ ಬಸ್‌ ನಿಲ್ದಾಣದ ಬಳಿ ಎಸ್‌ಎಫ್‌ಐ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ರಾಜ್ಯ ಸರ್ಕಾರದ ಆದೇಶದ ಪ್ರಕಾರ ಹಾಸ್ಟೆಲ್ ಬಯಸಿ ಅರ್ಜಿ ಹಾಕಿದ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ಸಮಾಜಕಲ್ಯಾಣ ಇಲಾಖೆ ವಸತಿನಿಲಯಗಳಲ್ಲಿ ಹಾಸ್ಟೆಲ್ ಸೌಲಭ್ಯ ಕಲ್ಪಿಸಬೇಕು.

ರಾಣಿಬೆನ್ನೂರು: ನಿಯಮಗಳನ್ನು ಉಲ್ಲಂಘಿಸಿ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ನಿರಾಕರಿಸಿದ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಶಿಸ್ತುಕ್ರಮಕ್ಕೆ ಆಗ್ರಹಿಸಿ ಎಸ್‌ಎಫ್‌ಐ ನೇತೃತ್ವದಲ್ಲಿ ವಿದ್ಯಾರ್ಥಿಗಳು ಸೋಮವಾರ ನಗರದ ಬಸ್ ನಿಲ್ದಾಣದ ಬಳಿ ಪ್ರತಿಭಟನೆ ನಡೆಸಿದರು.ಸಂಘಟನೆಯ ಜಿಲ್ಲಾಧ್ಯಕ್ಷ ಬಸವರಾಜ ಎಸ್. ಮಾತನಾಡಿ, ರಾಜ್ಯ ಸರ್ಕಾರದ ಆದೇಶದ ಪ್ರಕಾರ ಹಾಸ್ಟೆಲ್ ಬಯಸಿ ಅರ್ಜಿ ಹಾಕಿದ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ಸಮಾಜಕಲ್ಯಾಣ ಇಲಾಖೆ ವಸತಿನಿಲಯಗಳಲ್ಲಿ ಹಾಸ್ಟೆಲ್ ಸೌಲಭ್ಯ ಕಲ್ಪಿಸಬೇಕು. ಆದರೆ ತಾಲೂಕಿನಲ್ಲಿ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ನಿಯಮ ಉಲ್ಲಂಘನೆವಾಗಿದೆ.

ನೂರಾರು ವಿದ್ಯಾರ್ಥಿಗಳು ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಕೂಡಲೇ ಶಾಸಕರು ಮಧ್ಯಪ್ರವೇಶ ಮಾಡಿ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಂಡು ಸ್ಥಳೀಯ, ಹೊರ ಜಿಲ್ಲೆ, ತಾಲೂಕು ಸೇರಿದಂತೆ ಎಲ್ಲ ವಿದ್ಯಾರ್ಥಿಗಳಿಗೂ ಪ್ರವೇಶಾತಿ ನೀಡಬೇಕು. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ನಗರಕ್ಕೆ ಹೆಚ್ಚುವರಿಯಾಗಿ ಬಾಲಕರ, ಬಾಲಕಿಯರ ತಲಾ ಒಂದೊಂದು ಹಾಸ್ಟೆಲ್ ಮಂಜೂರು ಮಾಡಿಸಬೇಕು, ಇಲ್ಲವೇ ಬಾಡಿಗೆ ಬಿಲ್ಡಿಂಗ್‌ನಲ್ಲಿ ನಡೆಸಬೇಕು ಎಂದರು.ಸಂಘಟನೆಯ ಸಹ ಕಾರ್ಯದರ್ಶಿ ಕೃಷ್ಣ ನಾಯ್ಕ, ಜಿಲ್ಲಾ ಮುಖಂಡ ಅರುಣ್ ನಾಗವತ್ ಮಾತನಾಡಿದರು. ಮಹೇಶ ಮರೋಳ, ಸುನೀಲಕುಮಾರ ಎಲ್., ಅರುಣ ಲಮಾಣಿ, ಬೀರೇಶ ಕಂಬಳಿ, ಚಂದ್ರು ಎಚ್., ಲಕ್ಷ್ಮಣ, ನಿಖಿಲ್ ಎಚ್., ಝಮಲಶಾಬ್, ನಿಂಗರಾಜ ಹೊಸಮನಿ, ಯಶವಂತ ಲಮಾಣಿ, ಸಂದೇಶ ಆರ್.ಎಚ್., ಮಹಾಂತೇಶ ಲಮಾಣಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.ಜೈವಿಕ ಇಂಧನ ದಿನಾಚರಣೆ ಪ್ರಯುಕ್ತ ಜಾಗೃತಿ

ರಾಣಿಬೆನ್ನೂರು: ಎಥೆನಾಲ್ ಒಂದು ಪರ್ಯಾಯ ಇಂಧನವಾದ ಕಾರಣ ಮುಂದಿನ ದಿನಗಳಲ್ಲಿ ಎಥೆನಾಲ್‌ಗೆ ಭವಿಷ್ಯವಿದೆ ಎಂದು ನೀಡ್ಸ್ ಸಂಸ್ಥೆಯ ಸಿಇಒ ಎಚ್.ಎಫ್. ಅಕ್ಕಿ ತಿಳಿಸಿದರು.ತಾಲೂಕಿನ ಹೊನ್ನತ್ತಿ ಪ್ರೌಢಶಾಲೆಯಲ್ಲಿ ಜಿಲ್ಲೆಯ ಜೈವಿಕ ಇಂಧನ ಉಸ್ತುವಾರಿ ಸಮಿತಿ, ಜಿಲ್ಲಾ ಮುಂದಾಳು ಸಂಸ್ಥೆ ನವೋದಯ ಶಿಕ್ಷಣ ಮತ್ತು ಪರಿಸರ ಅಭಿವೃದ್ಧಿ ಸೇವಾ ಸಂಸ್ಥೆ(ನೀಡ್ಸ್) ಆಶ್ರಯದಲ್ಲಿ ಜೈವಿಕ ಇಂಧನ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಅರಿವು ಜಾಗೃತಿ ಮತ್ತು ಜಾಥಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಈಗಾಗಲೇ ತಾಲೂಕಿನಲ್ಲಿ ಭತ್ತ ಮತ್ತು ಗೋವಿನಜೋಳದಿಂದ ಎಥೆನಾಲ್ ತಯಾರಿಸಲಾಗುತ್ತಿದೆ ಎಂದರು.

ಶಾಲೆಯ ಮುಖ್ಯ ಶಿಕ್ಷಕ ಶಿವರಾಜ ಶೀಮೀಕೇರಿ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಆಡಳಿತ ಮಂಡಳಿ ಉಪಾಧ್ಯಕ್ಷ ಗುಡ್ಡಪ್ಪ ಪಟ್ಟಣಶೆಟ್ಟಿ, ಶಿಕ್ಷಕರಾದ ರವಿಕಾಂತ ನಾಯಕ, ಮಮತಾ ಕಡ್ಲಿಮಠ, ನೀಡ್ಸ್ ಸಂಸ್ಥೆಯ ತಿಪ್ಪೇಶಪ್ಪ ಕನ್ನಮ್ಮನವರ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು