ಚನ್ನಪಟ್ಟಣ: ರಾಷ್ಟ್ರಕವಿ ಕುವೆಂಪು ನಾಡಗೀತೆಯಲ್ಲಿ "ರನ್ನ ಷಡಕ್ಷರ ಪೊನ್ನ " ಎಂದು ಬಣ್ಣಿಸಲ್ಪಟ್ಟಿರುವುದು ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಧನಗೂರು ಷಡಕ್ಷರ ದೇವ ಕವಿ ೧೬-೧೭ನೇ ಶತಮಾನದಲ್ಲಿ ಕವಿತೆಗಳಿಂದ ಕನ್ನಡ ಸಾಹಿತ್ಯ ಬೆಳಗಿದವರು. ಈ ನಿಟ್ಟಿನಲ್ಲಿ ಷಡಕ್ಷರ ದೇವರ ಹೆಸರು ಉಳಿಸಲು ಷಡಕ್ಷರ ಪೀಠ ಸ್ಥಾಪಿಸಿ, ಸಾಹಿತ್ಯ, ಶೈಕ್ಷಣಿಕ ಹಾಗೂ ಸಾಮಾಜಿಕ ಕೆಲಸ ಮಾಡುವ ಸಂಕಲ್ಪ ಮಾಡಿದ್ದೇವೆ ಎಂದು ಧನಗೂರು ಷಡಕ್ಷರ ಪೀಠದ ಅಧ್ಯಕ್ಷ ಡಾ.ಕೂಡ್ಲೂರು ವೆಂಕಟಪ್ಪ ಹೇಳಿದರು.
ತಾಲೂಕು ಕಸಾಪ ಮಾಜಿ ಅಧ್ಯಕ್ಷ ಮತ್ತೀಕೆರೆ ಚಲುವರಾಜು ಮಾತನಾಡಿ, ಜ್ಞಾನ ಇಲ್ಲದವನಿಗೆ ತನ್ನೂರು ಮಾತ್ರ ಪ್ರಪಂಚವಾಗಿರುತ್ತದೆ. ಜ್ಞಾನವಂತನಿಗೆ ಇಡೀ ಪ್ರಪಂಚವೇ ಒಂದು ಊರು ಇದ್ದಂತೆ, ಜ್ಞಾನ ಯಾವ ಕಡೆಯಿಂದಲೂ ಬರಲಿ ಅದನ್ನು ಸ್ವೀಕರಿಸುವ ಮನೋಭಾವ ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು ಎಂದರು.
ನಿವೃತ್ತ ಅಧ್ಯಾಪಕ ಚಕ್ಕೆರೆ ಸಿ.ಚನ್ನವೀರೇಗೌಡ ಷಡಕ್ಷರ ದೇವ ಕುರಿತು ಕವಿ, ಕಾವ್ಯ ಉಪನ್ಯಾಸ ನೀಡಿದರು. ಷಡಕ್ಷರ ಪೀಠದ ಸದಸ್ಯ ಉಮೇಶ್ ದಡಮಹಳ್ಳಿ ರಸಪ್ರಶ್ನೆ ನಡೆಸಿಕೊಟ್ಟರು. ವಿದ್ಯಾರ್ಥಿ ಉಲ್ಲಾಸ್ ಪ್ರಥಮ, ಧನುಶ್ರೀ - ವಿದ್ಯಾಶ್ರೀ ದ್ವಿತೀಯ,ಮೂರನೇ ಬಹುಮಾನ ಆಕಾಶ್ ಹಾಗೂ ಅರುಣಾ ಹಂಚಿಕೊಂಡರು. ವಿಜೇತ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಹಾಗೂ ಪುಸ್ತಕಗಳನ್ನು ನೀಡಲಾಯಿತು. ಇದೇ ವೇಳೆ ಷಡಕ್ಷರ ಪೀಠದಿಂದ ಕೂಡ್ಲೂರು ಗ್ರಾಪಂ ಅರಿವು ಕೇಂದ್ರ ಗ್ರಂಥಾಲಯಕ್ಕೆ ನೂರಾರು ಪುಸ್ತಕಗಳ ಕೊಡುಗೆ ನೀಡಲಾಯಿತು.
ಗ್ರಾಪಂ ಪಿಡಿಒ ಸಿ.ಎ.ಪದ್ಮ ಹಾಗೂ ಗ್ರಂಥಪಾಲಕಿ ಎಸ್.ಎಂ.ರಾಧಾ ಪುಸ್ತಕಗಳನ್ನು ಸ್ವೀಕರಿಸಿದರು.ಮುಖ್ಯ ಶಿಕ್ಷಕಿ ಯಶೋಧ, ರಂಗಕರ್ಮಿ ಸಂಸ ಸುರೇಶ್, ಸಾಮಾಜಿಕ ಕಾರ್ಯಕರ್ತ ಹೇಮಂತ್ ಗೌಡ, ನಿವೃತ್ತ ಶಿಕ್ಷಕ ಶಿವಲಿಂಗಯ್ಯ, ಚಕ್ಕೆರೆ ಗೋಪಾಲ್, ಷಡಕ್ಷರ ಪೀಠದ ಸದಸ್ಯರಾದ ದಡಮಹಳ್ಳಿ ಉಮೇಶ್, ಕೂಡ್ಲೂರು ಚಿಕ್ಕಯ್ಯಗೌಡ, ಶಿಕ್ಷಕರಾದ ರಾಜೇಶ್, ನಟರಾಜು, ವಿಜಯ್ ಇತರರಿದ್ದರು.
ಪೊಟೋ೩೧ಸಿಪಿಟಿ೨:ಷಡಕ್ಷರ ಪೀಠ ಹಮ್ಮಿಕೊಂಡಿದ್ದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.