- ಮಳೆಯಿಂದ ಜನಜೀವನ ಅಸ್ತವ್ಯಸ್ತ, ನೂರಾರು ಎಕರೆ ಜಮೀನುಗಳಿಗೆ ನುಗ್ಗಿದ ನೀರು
ಕನ್ನಡಪ್ರಭ ವಾರ್ತೆ ಶಹಾಪುರ
ತಾಲೂಕಿನಾದ್ಯಂತ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಮಳೆಗೆ ರೈತರು ನಲುಗಿದ್ದಾರೆ.ನಾಲ್ಕಾರು ದಿನಗಳಿಂದ ಸತತ ಸುರಿಯುತ್ತಿರುವ ಮಳೆಯಿಂದ ರಸ್ತೆಗಳು, ಚರಂಡಿಗಳು ಹಾಗೂ ಹಯ್ಯಾಳ ಬಿ., ಬಸವಂತಪುರ, ಮುನ್ಮುಟಗಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಹೊಲ-ಗದ್ದೆಗಳು ಮಳೆ ನೀರಿನಿಂದ ಜಲಾವೃತವಾಗಿವೆ. ಬೆಳೆದ ಬೆಳೆಗಳು ಹಾಳಾಗಿವೆ.
ಮಳೆ ವಿವರ: ಆ.28ರಂದು ಗೋಗಿ 12, ಭೀಮರಾಯನ ಗುಡಿ 2 ಮೀಮೀ ಮಳೆಯಾಗಿದೆ. ಆ.29, ದೋರನಹಳ್ಳಿ 8 ಮೀಮಿ ಮಳೆಯಾಗಿದೆ. ಆ.30ರಂದು ಶಹಾಪುರ 13.4, ಭೀಮರಾಯನ ಗುಡಿ 15.2, ದೋರನಹಳ್ಳಿ 4 ಮೀಮೀ ಮಳೆಯಾಗಿದೆ. ಆ.31ರಂದು ಶಹಾಪುರ 4.4, ಭೀಮರಾಯನ ಗುಡಿ 5.2, ದೋರನಹಳ್ಳಿ 6, ಗೋಗಿ 4.8 ಮೀಮೀ. ಮಳೆಯಾಗಿದೆ. ಸೆ.1, ಶಹಾಪುರ 32, ಭೀಮರಾಯನ ಗುಡಿ 33, ದೋರನಹಳ್ಳಿ 41, ಗೋಗಿ 28, ಹತ್ತಿಗೂಡೂರು 16 ಮೀಮೀ. ಮಳೆಯಾಗಿದೆ. ಸೆ.2 ರಂದು ಶಹಾಪುರ 14.6, ಭೀಮರಾಯನ ಗುಡಿ 15.2, ದೋರನಹಳ್ಳಿ 15, ಗೋಗಿ 14, ಹತ್ತಿಗೂಡೂರು 12 ಮೀಮೀ ಮಳೆಯಾಗಿದೆ. ಸೆ. 3ರಂದು ಶಹಾಪುರ 19.2 ಭೀಮರಾಯನ ಗುಡಿ 13, ದೋರನಹಳ್ಳಿ 17, ಗೋಗಿ 20 ಮೀಮೀ ಮಳೆಯಾಗಿದೆ.
ಮಳೆ ಸುರಿಯುತ್ತಿರುವುದರಿಂದ ಕೂಲಿ ಕಾರ್ಮಿಕರರು ಕೃಷಿ ಚಟುವಟಿಕೆಗಳಿಗೆ ವಿರಾಮ ಹೇಳಿದ್ದಾರೆ. ವ್ಯಾಪಾರಸ್ಥರು ಗ್ರಾಹಕರಿಗಾಗಿ ಎದುರು ನೋಡುತ್ತಿದ್ದಾರೆ. ನಸುಕಿನ ಜಾವ ಆರಂಭಗೊಂಡ ತುಂತುರು ಮಳೆ ಮುಂದುವರೆಯುತ್ತಲೇ ಇದೆ. ದಟ್ಟ ಕಾರ್ಮೋಡ ಕವಿದು, ಬಿಸಿಲು ಕಾಣದೇ ವಾತಾವರಣ ಸಂಪೂರ್ಣ ತಂಪಾಗಿದೆ.
ಕೋಟ್ -1: ಕಳೆದ ವರ್ಷ ಮಳೆ ಇಲ್ಲದೆ ಬೆಳೆಗಳು ನಷ್ಟ ಅನುಭವಿಸಿದ್ದವು. ಆದರೆ, ಈ ವರ್ಷ ಅತಿಯಾದ ಮಳೆಯಿಂದ ಬೆಳೆದ ಬೆಳೆಗಳು ಕೂಡ ಜಲಾವೃತವಾಗಿ ನಷ್ಟ ಅನುಭವಿಸುತ್ತಿದ್ದೇವೆ. ಸಾಲ ಮಾಡಿ ನಾವು ಬೆಳೆಗಳನ್ನು ಬೆಳೆಯುತ್ತೇವೆ. ಬೆಳೆಗಳು ಹಾಳಾಗಿವೆ. ಸರ್ಕಾರ ರೈತರ ಬಗ್ಗೆ ಗಮನಹರಿಸಿ ತ್ವರಿತವಾಗಿ ಪರಿಹಾರ ನೀಡಬೇಕು.
-----
-----