ಶಕ್ತಿ: ಮಹಿಳೆಯರಿಗೆ ಹೆಚ್ಚು ಉಪಯುಕ್ತ ಯೋಜನೆ-ಮೋಹನ ಹಲವಾಯಿ

KannadaprabhaNewsNetwork |  
Published : Jul 15, 2025, 01:00 AM IST
ದಾಂಡೇಲಿ ನಗರದ ಬಸ್ ನಿಲ್ದಾಣದಲ್ಲಿ ಶಕ್ತಿ ಸಂಭ್ರಮ ಆಚರಣೆ ನಡೆಯಿತು. | Kannada Prabha

ಸಾರಾಂಶ

ರಾಜ್ಯ ಕಾಂಗ್ರೆಸ್ ಸರ್ಕಾರದ ಶಕ್ತಿ ಯೋಜನೆ ಎರಡು ವರ್ಷವಾಗಿ ೫೦೦ ಕೋಟಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಿರುವ ಸಂಭ್ರಮಾಚರಣೆ ಅಂಗವಾಗಿ ದಾಂಡೇಲಿ ನಗರದ ಬಸ್ ನಿಲ್ದಾಣದಲ್ಲಿ ಸೋಮವಾರ ಶಕ್ತಿ ಸಂಭ್ರಮ ಆಚರಿಸಲಾಯಿತು.

ದಾಂಡೇಲಿ: ರಾಜ್ಯ ಸರ್ಕಾರದ ಶಕ್ತಿ ಯೋಜನೆ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದು ಸಾಧನೆ ಮಾಡಿದೆ ಎಂದು ದಾಂಡೇಲಿ ಬ್ಲಾಕ ಕಾಂಗ್ರೆಸ್ ಅಧ್ಯಕ್ಷ ಮೋಹನ ಹಲವಾಯಿ ಹೇಳಿದರು.

ರಾಜ್ಯ ಕಾಂಗ್ರೆಸ್ ಸರ್ಕಾರದ ಶಕ್ತಿ ಯೋಜನೆಯು ಎರಡು ವರ್ಷವಾಗಿ ೫೦೦ ಕೋಟಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಿರುವ ಸಂಭ್ರಮಾಚರಣೆ ಅಂಗವಾಗಿ ದಾಂಡೇಲಿ ನಗರದ ಬಸ್ ನಿಲ್ದಾಣದಲ್ಲಿ ಸೋಮವಾರ ಶಕ್ತಿ ಸಂಭ್ರಮವನ್ನು ಉದ್ದೇಶಿಸಿ ಮಾತನಾಡಿದರು. ಮಹಿಳೆಯರ ಪರವಾಗಿ ಅತಿ ಹೆಚ್ಚಿನ ಮತ್ತು ಉಪಯುಕ್ತ ಯೋಜನೆಗಳನ್ನು ಜಾರಿಗೆ ತಂದ ಹೆಗ್ಗಳಿಕೆ ರಾಜ್ಯ ಕಾಂಗ್ರೆಸ್‌ಗಿದೆ. ಮಹಿಳೆಯರಿಗಾಗಿಯೇ ಉಚಿತ ಸಂಚಾರ ಸೌಲಭ್ಯನ್ನು ಒದಗಿಸುವ ಶಕ್ತಿ ಯೋಜನೆ ರಾಷ್ಟ್ರದಲ್ಲಿಯೇ ಪರಿಣಾಮಕಾರಿಯಾದ ಯೋಜನೆಯಾಗಿದೆ ಎಂದರು.

ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷ ರಿಯಾಜ ಬಾಬು ಸಯ್ಯದ ಮಾತನಾಡಿ, ಈ ಯೋಜನೆ ಅಡಿಯಲ್ಲಿ 500 ಕೋಟಿ ಮಹಿಳೆಯರು ಉಚಿತ ಬಸ್ ಸಂಚಾರ ಸೇವೆಯ ಪ್ರಯೋಜನ ಪಡೆದುಕೊಂಡಿದ್ದಾರೆ. ದಾಂಡೇಲಿ ತಾಲೂಕಿನಲ್ಲಿ ಶಕ್ತಿ ಯೋಜನೆ ಆರಂಭವಾದಾಗಿನಿಂದ ಇಲ್ಲಿಯವರೆಗೆ ಸುಮಾರು ೯೮ ಲಕ್ಷಕ್ಕೂ ಹೆಚ್ಚು ಮಹಿಳೆಯರು ಪ್ರಯಾಣ ಮಾಡಿದ್ದಾರೆ. ಬಡತನ ನಿರ್ಮೂಲನೆಗಾಗಿ ಕಾಂಗ್ರೆಸ್‌ ಪಂಚ ಗ್ಯಾರಂಟಿ ಯೋಜನೆ ಜಾರಿ ಮಾಡಿದೆ. ಬಡವರ, ದೀನದಲಿತರ, ಮಹಿಳೆಯರ, ರೈತರ, ಕೂಲಿ ಕಾರ್ಮಿಕರ ಸಮಗ್ರ ಅಭಿವೃದ್ಧಿ ಕೇಂದ್ರವಾಗಿಸಿಕೊಂಡು ಈ ಯೋಜನೆ ಅನುಷ್ಠಾನ ಮಾಡಿದೆ. ಅದರಿಂದ ಬಡವರು ನೆಮ್ಮದಿಯ ಬದುಕು ಕಾಣುವಂತಾಗಲು ಸಾಧ್ಯವಾಗಿದೆ ಎಂದರು.

ನಗರಸಭೆ ಅಧ್ಯಕ್ಷ ಅಷ್ಪಾಕ ಶೇಖ ಮಾತನಾಡಿದರು. ತಾಪಂ ಕಾರ್ಯನಿರ್ವಾಹನ ಅಧಿಕಾರಿ ಟಿ.ಸಿ. ಹಾದಿಮನಿ, ಸಾರಿಗೆ ಘಟಕದ ವ್ಯವಸ್ಥಾಪಕ ಎಲ್.ಎಚ್. ರಾಠೋಡ, ಆಹಾರ ನಿರೀಕ್ಷಕ ಗೋಪಿ ಚವ್ಹಾಣ, ಗ್ಯಾರಂಟಿ ಯೋಜನೆ ಜಿಲ್ಲಾ ಅನುಷ್ಠಾನ ಸಮಿತಿ ಸದಸ್ಯ ಅನಿಲ ದಂಡಗಲ್, ನಗರಸಭೆ ಸದಸ್ಯೆ ಯಾಸ್ಮಿನ್‌ ಕಿತ್ತೂರ, ಪಂಚ ಗ್ಯಾರಂಟಿ ಯೋಜನೆಯ ತಾಲೂಕು ಅನುಷ್ಠಾನ ಸಮಿತಿ ಸದಸ್ಯರಾದ ರೇಷ್ಮಾ ಇಮ್ತಿಯಾಜ್‌, ಚಂದ್ರು ದೇವದಾನಂ ಆರ್ಯಾ, ಸಿದ್ದಾರೂಢ ಗಜಗಲ್, ಛಾಯಾ ಪ್ರಕಾಶ ಪಿಶಾಳೆ, ಜಾನು ವಿಟ್ಟು ಕೊಕರೆ, ರಮೇಶ ಶೆಟ್ಟಮ್ಮನವರ, ಮ್ಯಾಥ್ಯಸ್ ಕೊಂಡಿಟ್ಟಿ, ರವಿಕುಮಾರ ಚಾಟ್ಲಾ, ದೇವೇಂದ್ರಪ್ಪ ಶೆಟ್ಟರ, ಅಶೋಕ ನಾಯ್ಕ, ಅಡಿವೆಪ್ಪ ಭದ್ರಕಾಳಿ, ವೀರೇಶ ಯರಗೇರಿ, ದಾವಲಸಾಬ ನೀರಲಗಿ, ಪರಶುರಾಮ ನಾಗಪ್ಪ ಮುತವಾಡ, ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ರೇಣುಕಾ ಬಂದಮ್, ಮುಖಂಡರಾದ ರವಿ ಪಿ. ನಾಯ್ಕ, ದಿವಾಕರ ನಾಯ್ಕ, ದಾದಾಪೀರ ನದಿಮುಲ್ಲಾ, ಮುನ್ನಾ ವಹಾಬ್, ಕರಿಂ ಅಜ್ರೇಕರ, ಪ್ರಭುದಾಸ ಯನಿಬೇರಾ, ಸಂಗೀತ ರಾವ್‌, ಕಿರಣ ಸಿಂಗ್‌ ರಜಪೂತ, ಮುನ್ನಾ ಸಂಕ್ಲಾ, ರವಿಕುಮಾರ ಚವ್ಹಾಣ, ಪ್ರಮುಖರಾದ ಶ್ರೀಕಾಂತ ಅಸೋದೆ, ಲೀಲಾ ಮಾದರ, ಮುಜಿಬಾ ಛೆಬ್ಬಿ ಉಪಸ್ಥಿತರಿದ್ದರು.

PREV

Latest Stories

ಅಂಗನವಾಡಿ ಮಕ್ಕಳ ಅನುಕೂಲಕ್ಕಾಗಿ 'ಅಪಾರ್‌ ಐಡಿ': ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಜಾರಿ
ರಾಜ್ಯದ 14 ಜಿಲ್ಲೆಗಳಲ್ಲಿ 2 ದಿನ ಭಾರೀ ಮಳೆ
ಲಾಕ್ಡೌನ್ನಿಂದ ಹುಟ್ಟಿ, ಕಪೆಕ್ನಿಂದ ಬೆಳೆದು ನಿಂತ ಉದ್ಯಮ