ಕನ್ನಡಪ್ರಭ ವಾರ್ತೆ ದಾವಣಗೆರೆ
ಭಾನುವಾರ ರಾತ್ರಿ 2 ಗಂಟೆಗೆ ಆರಂಭಗೊಂಡ ಫೈನಲ್ ಪಂದ್ಯಾವಳಿಯಲ್ಲಿ ಬೆಂಗಳೂರಿನ ಎರಡು ತಂಡಗಳ ಜಿದ್ದಾಜಿದ್ದಿನ ಹೋರಾಟದಲ್ಲಿ ಬೆಂಗಳೂರಿನ ತಂಡಗಳೇ ಕ್ರಮವಾಗಿ ಪ್ರಥಮ, ದ್ವಿತೀಯ ಸ್ಥಾನ ಪಡೆದುಕೊಂಡಿವೆ.
ದಾವಣಗೆರೆ ಇಲೆವೆನ್ಸ್ ಕ್ರಿಕೆಟ್ ಕ್ಲಬ್ ಮತ್ತು ಜಿಲ್ಲಾ ಕ್ರೀಡಾಪಟುಗಳ ಸಾಂಸ್ಕೃತಿಕ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಈ ಟೂರ್ನಿಯಲ್ಲಿ ಒಟ್ಟು 60 ತಂಡಗಳು ಭಾಗವಹಿಸಿದ್ದವು. 16 ತಂಡಗಳು ಅಫೇಶಿಯಲ್ ಟ್ರೋಪಿಗಾಗಿ ಸೆಣಸಾಡಿದವು. ಲಕ್ಷಾಂತರ ಕ್ರಿಕೆಟ್ ಪ್ರೇಮಿಗಳು ಯೂಟ್ಯೂಬ್ ಎಂ-9 ಸ್ಪೋರ್ಟ್ ಚಾನೆಲ್‌ನಲ್ಲಿ ನೇರವಾಗಿ ವೀಕ್ಷಿಸಿದರು. ರಾಜ್ಯದ ನಾನಾ ಜಿಲ್ಲೆಗಳು ಸೇರಿದಂತೆ ಮಹಾರಾಷ್ಟ್ರ, ಕೇರಳ, ಗೋವಾ ಹಾಗೂ ಶ್ರೀಲಂಕಾ ತಂಡಗಳು ಬಂದಿದ್ದು ಜಿಲ್ಲೆಯ ನಗರ ಹಾಗೂ ಗ್ರಾಮೀಣ ಭಾಗದ ಕ್ರೀಡಾಭಿಮಾನಿಗಳು ನೇರವಾಗಿ ಮೈದಾನಕ್ಕೆ ಆಗಮಿಸಿ ಕ್ರಿಕೆಟ್ ಹಬ್ಬವನ್ನು ಕಣ್ಣುಂಬಿಕೊಂಡಿದ್ದು ಕ್ರೀಡಾಭಿಮಾನಿಗಳ ಪ್ರೋತ್ಸಾಹದಿಂದ ದಾವಣಗೆರೆ ಜಿಲ್ಲೆಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಟೂರ್ನಿಯ ರಸದೌತಣ ನಿರ್ಮಾಣವಾಗಿ ಕೊನೆಯಲ್ಲಿ ಅದ್ದೂರಿಯಾಗಿ ತೆರೆ ಕಂಡಿತು.ಬೆಸ್ಟ್ ಬ್ಯಾಟ್ಸಮನ್ ಪ್ರಶಸ್ತಿಯನ್ನು ಗಿಳಿಯಾರು ನಾಗ (ಫ್ರೆಂಡ್ಸ್ ತಂಡ) ಪಡೆದರೆ, ಬೆಸ್ಟ್ ಬೌಲರ್ ಪ್ರಶಸ್ತಿಯನ್ನು ಸಾಗರ್ (ವಿಭೂಷಣ್ ಅನ ಪ್ರೆಡಿಕ್ಟೇಬಲ್ ತಂಡ) ದ ಆಟಗಾರ ಪಡೆದರು. ಇನ್ನು ಟೂರ್ನಿಯ ಮ್ಯಾನ್ ಆಫ್ ದ ಸೀರೀಸ್ ಪ್ರಶಸ್ತಿಯು ಲೋಕಿ ಪುತ್ತೂರು (ಜೈ ಕರ್ನಾಟಕ) ಪಾಲಾಯಿತು.
ಟೂರ್ನಿಯಲ್ಲಿ 16 ಅಫೇಶಿಯಲ್ ತಂಡಗಳು ಪ್ರಶಸ್ತಿಗಾಗಿ ಸೆಣಸಾಡಿದ್ದು ಪತ್ರಕರ್ತರ ತಂಡ, ಮರ್ಚೆಂಟ್ಸ್ ತಂಡ, ಕಾರ್ಪೋರೇಷನ್ ಹಾಗೂ ಪೊಲೀಸ್ ತಂಡಗಳು ಸೆಮಿಫೈನಲ್ಸ್ ಪ್ರವೇಶಿಸಿ, ಪೊಲೀಸ್ ತಂಡ ಹಾಗೂ ಕಾರ್ಪೋರೇಷನ್ ತಂಡವು ಅಂತಿಮವಾಗಿ ಪೈನಲ್ ಪ್ರವೇಶಿಸಿದ್ದವು. ಕಾರ್ಪೋಷನ್ ತಂಡವನ್ನು ಮಣಿಸಿದ ದಾವಣಗೆರೆ ಜಿಲ್ಲಾ ಪೊಲೀಸ್ ತಂಡವರು ಅಪೆಶೀಯಲ್ ಟ್ರೋಪಿಯನ್ನು ಎತ್ತಿ ಚಾಂಪಿಯನ್ ಆಗಿ ಹೊರ ಹೊಮ್ಮಿತು.
ಪೈನಲ್ ಪಂದ್ಯದ ವೇಳೆ ಮೈದಾನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಕ್ರಿಕೆಟ್ ಆಟಗಾರರಿಗೆ ಪ್ರೋತ್ಸಾಹಿಸಿ ಆಯೋಜಕರಿಗೆ ಅಭಿನಂದಿಸಿದರು.ಸಂಘದ ಅಧ್ಯಕ್ಷ ಜಯಪ್ರಕಾಶ್ ಗೌಡ, XI ದಾವಣಗೆರೆ ಕ್ರಿಕೆಟ್ ಕ್ಲಬ್, ಜಿಲ್ಲಾ ಕ್ರೀಡಾಪಟುಗಳ ಸಂಘ ಶಾಮನೂರು ಡೈಮಂಡ್ ಶಿವಗಂಗಾ ಕಪ್‌ನ ಉಪಾಧ್ಯಕ್ಷ ಶಿವಗಂಗಾ ಶ್ರೀನಿವಾಸ್, ಜಿಲ್ಲಾ ಕ್ರೀಡಾಪಟುಗಳು ಸಂಘದ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ, ಕಾರ್ಯದರ್ಶಿ ಕುರುಡಿ ಗಿರೀಶ್, ಸಹ ಕಾರ್ಯದರ್ಶಿ ಜಯಪ್ರಕಾಶ್ ಗೌಡ, ಜೆ.ಎನ್ ಶ್ರೀನಿವಾಸ, ಪಿಂಟೂ, ಸುರಭಿ ವಿನಯ್, ಹಾಲಪ್ಪ, ಚಂದ್ರು, ಆಕಾಶ್, ಶಾಂತಕುಮಾರ್, ವಿನಯ್, ಪ್ರಶಾಂತ್, ಮದನ್, ಮಂಜು, ರವಿನಾರಾಯಣ್, ಸ್ವರೂಪ್, ಭರತ್, ಶಿವು ಕ್ರೀಡಾಪಟುಗಳ ಸಾಂಸ್ಕೃತಿಕ ಸಂಘದ ಪದಾಧಿಕಾರಿಗಳು ಇದ್ದರು.