ಅಂಬೇಡ್ಕರ್‌ ಭಾವಚಿತ್ರಕ್ಕೆ ಅವಮಾನ: ಆರೋಪಿಗಳ ಬಂಧನಕ್ಕೆ ಆಗ್ರಹ

KannadaprabhaNewsNetwork |  
Published : Jan 26, 2024, 01:47 AM IST
25ಐಎನ್‌ಡಿ8,ಕಲಬುರಗಿ ನಗರದಲ್ಲಿ ಅಂಬೆಡ್ಕರ ಭಾವಚಿತ್ರಕ್ಕೆ ಅವಮಾನ ಮಾಡಿದ ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿ ಆರ್‌ಪಿಐ ಮುಖಂಡರು ಎಸಿ ಅಬೀದ್‌ ಗದ್ಯಾಳ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ಇಂಡಿ: ಕಲಬುರಗಿ ನಗರದ ಕೋಟನೂರ ಬಡಾವಣೆಯಲ್ಲಿ ಡಾ.ಬಿ.ಆರ್‌.ಅಂಬೇಡ್ಕರ ಮೂರ್ತಿಗೆ ಅವಮಾನ ಮಾಡಿದ ದುಷ್ಕರ್ಮಿಗಳಿಗೆ ಗಲ್ಲು ಶಿಕ್ಷೆಗೆ ಗುರಿ ಪಡಿಸಬೇಕು ಎಂದು ಆಗ್ರಹಿಸಿ ಆರ್‌ಪಿಐ (ಅಟವಲೆ) ಮುಖಂಡರು ಗುರುವಾರ ಪಟ್ಟಣದಲ್ಲಿ ಪ್ರತಿಭಟಿಸಿದರು.

ಕನ್ನಡಪ್ರಭ ವಾರ್ತೆ ಇಂಡಿ

ಕಲಬುರಗಿ ನಗರದ ಕೋಟನೂರ ಬಡಾವಣೆಯಲ್ಲಿ ಡಾ.ಬಿ.ಆರ್‌.ಅಂಬೇಡ್ಕರ ಮೂರ್ತಿಗೆ ಅವಮಾನ ಮಾಡಿದ ದುಷ್ಕರ್ಮಿಗಳಿಗೆ ಗಲ್ಲು ಶಿಕ್ಷೆಗೆ ಗುರಿ ಪಡಿಸಬೇಕು ಎಂದು ಆಗ್ರಹಿಸಿ ಆರ್‌ಪಿಐ (ಅಟವಲೆ) ಮುಖಂಡರು ಗುರುವಾರ ಪಟ್ಟಣದಲ್ಲಿ ಪ್ರತಿಭಟಿಸಿದರು.

ಪಟ್ಟಣದ ಪ್ರವಾಸಿ ಮಂದಿರದಿಂದ ಹೊರಟ ಪ್ರತಿಭಟನೆ ಟಿಪ್ಪುಸುಲ್ತಾನ, ಬಸವೇಶ್ವರ ವೃತ್ತದ ಮೂಲಕ ನಡೆದು ತಾಲೂಕು ಆಡಳಿತಸೌಧ ತಲುಪಿತು. ನಂತರ ಕೆಲಕಾಲ ಸಭೆಯಾಗಿ ಮಾರ್ಪಟ್ಟಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಜೆಡಿಎಸ್‌ ಮುಖಂಡರಾದ ಬಿ.ಡಿ.ಪಾಟೀಲ, ಶ್ರೀಶೈಲಗೌಡ ಪಾಟೀಲ, ಆರ್‌ಪಿಐ ನಗರ ಘಟಕದ ಅಧ್ಯಕ್ಷ ಬಾಬು ಕಾಂಬಳೆ, ಕಲಬುರಗಿ ನಗರದ ಕೋಟನೂರ ಬಡಾವಣೆಯಲ್ಲಿ ಅಂಬೇಡ್ಕರ ಪುತ್ಥಳಿಗೆ ಅವಮಾನ ಮಾಡಲಾಗಿದೆ. ಇದು ದೇಶದ್ರೋಹ ಕೃತ್ಯವಾಗಿದೆ. ಆರೋಪಿ ಯಾರೇ ಆಗಿದ್ದರು ಅವರನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕು. ದೇಶದ್ರೋಹ ಪ್ರಕರಣವೆಂದು ಪರಿಗಣಿಸಿ ಅವರನ್ನು ದೇಶದಿಂದ ಗಡಿಪಾರು ಮಾಡಬೇಕು. ಇಲ್ಲವೇ ಗಲ್ಲು ಶಿಕ್ಷೆಗೆ ಗುರಿಪಡಿಸಬೆಕು ಎಂದು ಆಗ್ರಹಿಸಿದರು. ನಂತರ ಎಸಿ ಅಬೀದ್‌ ಗದ್ಯಾಳ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಈ ವೇಳೆ ಸದ್ದಾಮ ಅರಬ, ಬಾಬು ಕಾಂಬಳೆ, ವಿರೂಪಾಕ್ಷಿ ಕಾಳೆ, ಪರಶುರಾಮ ಎಂಟಮಾನ, ಲಕ್ಕಪ್ಪ ಲಚ್ಯಾಣ, ಶಾರುಖ್ ಶೇಖ, ಅಲ್ತಾಫ್‌ ವಾಲಿಕಾರ, ಶ್ರೀಶೈಲ ಸೋಲಾಪೂರ, ಮಾನೀಮ್‌ ಅರಬ, ಸಚೀನ ನಂದಗೊಂಡ, ಬಸವರಾಜ ನಡಗೇರಿ, ಸಿದ್ದಾರ್ಥ ಹಳ್ಳದಮನಿ, ಮರೇಪ್ಪ ಹರಿಜನ, ಸಿದ್ರಾಮ ಹರಿಜನ, ಆನಂದ ಮೇಲಿನಕೇರಿ, ದರ್ಶನ ಮೇಲಿನಮನಿ, ಅರ್ಬಜ ಅಗರಖೇಡ, ವಿನೋದ ನಂದಗೊಂಡ ಮೊದಲಾದವರು ಈ ಸಂದರ್ಭದಲ್ಲಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!