ಹೊಳೆನರಸೀಪುರದಲ್ಲಿ ಶನೈಶ್ಚರಾಯಸ್ವಾಮಿ ಜಯಂತಿ

KannadaprabhaNewsNetwork |  
Published : May 17, 2026, 01:30 AM IST
16ಎಚ್ಎಸ್ಎನ್4 : ಹೊಳೆನರಸೀಪುರದ ಬಳೆಗಾರರ ಬೀದಿಯ ಶ್ರೀ ಶನಿದೇವರ ದೇವಸ್ಥಾನದಲ್ಲಿ ಶ್ರೀ ಶನೈಶ್ಚರಾಯಸ್ವಾಮಿ ಜಯಂತಿ ಹಾಗೂ ಬಾದಾಮಿ ಅಮಾವಾಸ್ಯ ಪ್ರಯುಕ್ತ ವಿಶೇಷ ಪೂಜಾ ಮಹೋತ್ಸವ ವೈಭವದಿಂದ ನಡೆಯಿತು. | Kannada Prabha

ಸಾರಾಂಶ

ಶ್ರೀ ಸ್ವಾಮಿಯ ಮೂರ್ತಿಗೆ ಪಂಚಾಮೃತಭಿಷೇಕ, ವಿಶೇಷ ಅಲಂಕಾರ, ಅರ್ಚನೆ, ನವಗ್ರಹ ಶಾಂತಿ, ಶನಿಶಾಂತಿ ಸ್ವತಹ ಭಕ್ತಾದಿಗಳಿಂದಲೇ ಶ್ರೀಸ್ವಾಮಿಯ ಮೂರ್ತಿಗೆ ತೈಲಭಿಷೇಕ ಮಾಡಿಸಲಾಯಿತು. ಉತ್ಸವ ನಂತರ ಮಹಾಮಂಗಳಾರತಿ ಪ್ರಸಾದ ವಿನಿಯೋಗ ನಡೆಸಲಾಯಿತು. ಸಂಜೆ ಗೋದೂಳಿ ಬಾದಾಮಿ ಅಮಾವಾಸ್ಯೆ ಪ್ರಯುಕ್ತ ಲಗ್ನದಲ್ಲಿ ದೇವಾಲಯದ ಆವರಣದಲ್ಲಿ ಗಣಪತಿ ಹೋಮ, ಶನೈಶ್ವರ ಹೋಮ, ನವಗ್ರಹ ಹೋಮ. ಮೃತ್ಯುಂಜಯ ಹೋಮ, ದುರ್ಗಾ ಹೋಮ, ಹಾಗೂ ಪಲ್ಲಕಿ ಉತ್ಸವ ಸೇವೆ ಸಾಮೂಹಿಕವಾಗಿ ನಡೆಸಲಾಯಿತು.

ಹೊಳೆನರಸೀಪುರ: ಪಟ್ಟಣದ ಬಳೆಗಾರರ ಬೀದಿಯ ಶ್ರೀ ಶನಿದೇವರ ದೇವಸ್ಥಾನದಲ್ಲಿ ಶ್ರೀ ಶನೈಶ್ಚರಾಯಸ್ವಾಮಿ ಜಯಂತಿ ಹಾಗೂ ಬಾದಾಮಿ ಅಮಾವಾಸ್ಯೆ ಪ್ರಯುಕ್ತ ವಿಶೇಷ ಪೂಜಾ ಮಹೋತ್ಸವ ವೈಭವದಿಂದ ನಡೆಯಿತು.ಮುಂಜಾನೆ ಬ್ರಾಹ್ಮೀ ಮಹೂರ್ತದಲ್ಲಿ ಶ್ರೀ ಸ್ವಾಮಿಯ ಮೂರ್ತಿಗೆ ಪಂಚಾಮೃತಭಿಷೇಕ, ವಿಶೇಷ ಅಲಂಕಾರ, ಅರ್ಚನೆ, ನವಗ್ರಹ ಶಾಂತಿ, ಶನಿಶಾಂತಿ ಸ್ವತಹ ಭಕ್ತಾದಿಗಳಿಂದಲೇ ಶ್ರೀಸ್ವಾಮಿಯ ಮೂರ್ತಿಗೆ ತೈಲಭಿಷೇಕ ಮಾಡಿಸಲಾಯಿತು. ಉತ್ಸವ ನಂತರ ಮಹಾಮಂಗಳಾರತಿ ಪ್ರಸಾದ ವಿನಿಯೋಗ ನಡೆಸಲಾಯಿತು. ಸಂಜೆ ಗೋದೂಳಿ ಬಾದಾಮಿ ಅಮಾವಾಸ್ಯೆ ಪ್ರಯುಕ್ತ ಲಗ್ನದಲ್ಲಿ ದೇವಾಲಯದ ಆವರಣದಲ್ಲಿ ಗಣಪತಿ ಹೋಮ, ಶನೈಶ್ವರ ಹೋಮ, ನವಗ್ರಹ ಹೋಮ. ಮೃತ್ಯುಂಜಯ ಹೋಮ, ದುರ್ಗಾ ಹೋಮ, ಹಾಗೂ ಪಲ್ಲಕಿ ಉತ್ಸವ ಸೇವೆ ಸಾಮೂಹಿಕವಾಗಿ ನಡೆಸಲಾಯಿತು.ಹಿರಿಯ ಅರ್ಚಕರಾದ ಗೋವಿಂದರಾಜು ಎಚ್.ಜೆ. ಮಾರ್ಗದರ್ಶನದಲ್ಲಿ ಹೇಮಂತ ಕುಮಾರ್ ಎಚ್.ಕೆ. ಪೂಜಾ ಕೈಂಕರ್ಯ ನೆರವೇರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮಾಜಸೇವೆ ಮೂಲಕ ಹೃದಯದಲ್ಲಿ ನೆಲೆಸಿದ ಸುಧಾಕರ್‌
ಚಿಗಟೇರಿ ಆಸ್ಪತ್ರೆಗೆ ಸಂಸದೆ ದಿಢೀರ್ ಭೇಟಿ