ಮಾದೇಗೋಡು: ಮಾರಿಯಮ್ಮ ದೇವಸ್ಥಾನ ಜೀರ್ಣೋದ್ಧಾರ

KannadaprabhaNewsNetwork |  
Published : Feb 06, 2026, 04:00 AM IST
S  S  ಫೋಟೋ 1. &2 | Kannada Prabha

ಸಾರಾಂಶ

ಮಾದೇಗೋಡು ಗ್ರಾಮದ ಶ್ರೀ ಮಾರಿಯಮ್ಮ ದೇವಸ್ಥಾನ ದೇವಾಲಯ ಜೀರ್ಣೋದ್ಧಾರ ಹಾಗೂ ಪುನರ್ ಪ್ರತಿಷ್ಠಾಪನ ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ ಗಣಪತಿ ಹೋಮ, ನವಗ್ರಹ ಹೋಮ, ಗಣ ಹೋಮ, ಗಂಗಾ ಪೂಜ ಕಾರ್ಯಕ್ರಮ ದೇವರ ವಿಗ್ರಹ ಪ್ರತಿಷ್ಠಾಪನೆ

ಶನಿವಾರಸಂತೆ: ಮಾದೇಗೋಡು ಗ್ರಾಮದ ಶ್ರೀ ಮಾರಿಯಮ್ಮ ದೇವಸ್ಥಾನ ದೇವಾಲಯ ಜೀರ್ಣೋದ್ಧಾರ ಹಾಗೂ ಪುನರ್ ಪ್ರತಿಷ್ಠಾಪನ ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ ಗಣಪತಿ ಹೋಮ, ನವಗ್ರಹ ಹೋಮ, ಗಣ ಹೋಮ, ಗಂಗಾ ಪೂಜ ಕಾರ್ಯಕ್ರಮ ದೇವರ ವಿಗ್ರಹ ಪ್ರತಿಷ್ಠಾಪನೆ ನಡೆಯಿತು. ಸಭಾ ಕಾರ್ಯಕ್ರಮವನ್ನು ದೇವಾಲಯ ಸಮಿತಿ ಅಧ್ಯಕ್ಷ ರಘುವೀರ್ ಅಧ್ಯಕ್ಷತೆಯಲ್ಲಿ ಮಾಜಿ ಶಾಸಕ ಅಪ್ಪಚ್ಚು ರಂಜನ್ ಉದ್ಘಾಟಿಸಿದರು.

ಈ ಸಂದರ್ಭ ಮಾತನಾಡಿದ ಅವರು ಗ್ರಾಮೀಣ ಭಾಗಗಳಲ್ಲಿ ದೇವಾಲಯಗಳು ನಿರ್ಮಾಣವಾಗುತ್ತಿದ್ದು ಅದನ್ನು ವ್ಯವಸ್ಥಿತವಾಗಿ ನಿರ್ವಹಿಸಬೇಕಾಗಿದೆ. ಕೆಲ ಕಡೆ ದೇವಾಲಯ ನಿರ್ಮಾಣಗೊಂಡಿದ್ದು ಸರಿಯಾದ ರೀತಿಯಲ್ಲಿ ಪೂಜೆ ಪುರಸ್ಕಾರ ನಡೆಯುತ್ತಿಲ್ಲ. ಈ ದೇವಸ್ಥಾನ ನಿರ್ಮಾಣವಾಗಲು ಸ್ಥಳೀಯ ಯುವಕರು ಹೋರಾಟ ನಡೆಸಿದ್ದು ಮಾರಿಯಮ್ಮ ದೇವರು ಅವರಿಗೆ ಯಶಸ್ಸು ಕೊಡಲೆಂದು ಹಾರೈಸಿದರು.

ಇದೇ ಸಂದರ್ಭ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಡಿ. ಬಿ ಧರ್ಮಪ್ಪ ಅವರು ದೇವಸ್ಥಾನ ಸಮಿತಿಯವರನ್ನು ಶ್ಲಾಘಿಸಿದರು. ಶನಿವಾರ ಸಂತೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರಘು ಶುಭಕೋರಿದರು.

ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ದೀಪಕ್ ಕೆ. ಎನ್ ಹಾಗೂ ಪ್ರದೀಪ ಶಾಮೆರಾ ಹಾಗೂ ಪ್ರಜ್ವಲ್ ಪೂರ್ಣಚಂದ್ರ ವಸಂತ ಆಚಾರ್ಯ, ಕೆ ಟಿ ಬಿ ಟಿ ಯು ಅಧ್ಯಕ್ಷ ಹಾಗೂ ಸೋಮವಾರಪೇಟೆ ತಾಲೂಕು ಪತ್ರಕರ್ತ ಸಂಘದ ಅಧ್ಯಕ್ಷ ಹರೀಶ್ ಉಪಸ್ಥಿತರಿದ್ದರು. ಹಿಂದೂ ಸಂಘಟನೆ ಮುಖಂಡ ಸುರೇಶ್ ಹಾಗೂ ಕಾಫಿ ಬೆಳೆಗಾರ ಹುಣ್ಸೆ ಕಾಯಿ ಹೊಸಳ್ಳಿ ಮೋಹನ್ ಹಾಗೂ ದೇವಾಲಯದ ವಿಗ್ರಹ ದಾನಿಗಳಾದ ರತ್ನಮ್ಮ ಹಾಗೂ ಗ್ರಾಮಸ್ಥರು ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಕವಿತಾ ಸ್ವಾಗತಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಮಾಜಿಕ ಜಾಲತಾಣ ಮೇಲೆ ಕಣ್ಣಿಡಲು ಸರ್ಕಾರಿ ಸಾಫ್ಟ್‌ವೇರ್‌
ಬ್ಯಾಲೆಟ್‌ ಪೇಪರಲ್ಲೇ ಪಂಚಾಯ್ತಿ ಚುನಾವಣೆಗೆ ಸರ್ಕಾರ ಮಸೂದೆ