ಕನ್ನಡಪ್ರಭ ವಾರ್ತೆ ಶನಿವಾರಸಂತೆ
ಅವರು ಶನಿವಾರಸಂತೆ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಶ್ರೀ ವಿಘ್ನೇಶ್ವರ ಆಟೋ ಚಾಲಕರ ಸಂಘದ ಸದಸ್ಯರೊಂದಿಗೆ ಪುಟಾಣಿ ಮಕ್ಕಳು ರಕ್ಷಾ ಬಂಧನ ಹಬ್ಬದ ರಕ್ಷೆಯನ್ನು ಕಟ್ಟಿ ಸಂತೋಷದಿಂದ ಆಚರಿಸಿದರು
ಪುಟಾಣಿ ಮಕ್ಕಳ ಈ ಸಂತೋಷದ ಕ್ಷಣವನ್ನು ಆಟೋ ಚಾಲಕರು ಮತ್ತು ಸ್ಥಳೀಯರು ಸಂಭ್ರಮಿಸಿದರು. ನಂತರ ಶನಿವಾರಸಂತೆ ಆರಕ್ಷಕ ಠಾಣೆಗೆ ತೆರಳಿ ಆರಕ್ಷಕ ಠಾಣೆಯ ಸಿಬ್ಬಂದಿ ರಕ್ಷಾ ಬಂಧನದ ಶುಭಾಶಯಗಳು ತಿಳಿಸಿ ಸಿಹಿ ವಿತರಿಸಿದರು. ಈ ವೇಳೆ ಸಹ ಶಿಕ್ಷಕಿ ಸುನಿತಾ, ರೋಸಿ, ದೈಹಿಕ ಶಿಕ್ಷಕ ಗಣೇಶ್, ಹಾಗೂ ಶನಿವಾರಸಂತೆ ಆಟೋ ಚಾಲಕರು, ಆರಕ್ಷಕ ಠಾಣೆಯ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.