ಗುನ್ನೂರು ಡೈರಿಗೆ ಅಧ್ಯಕ್ಷರಾಗಿ ಶಂಕರೇಗೌಡ ಆಯ್ಕೆ

KannadaprabhaNewsNetwork |  
Published : Jul 03, 2025, 11:50 PM IST
3ಕೆಆರ್ ಎಂಎನ್ 3.ಜೆಪಿಜಿಗುನ್ನೂರು ಡೇರಿ ನೂತನ ಅಧ್ಯಕ್ಷ ಶಂಕರೇಗೌಡ ಅವರನ್ನು ಗ್ರಾಪಂ ಅಧ್ಯಕ್ಷ ಗಿರೀಶ್ ಸೇರಿದಂತೆ ಮುಖಂಡರು ಅಭಿನಂದಿಸಿದರು. | Kannada Prabha

ಸಾರಾಂಶ

ಜೆಡಿಎಸ್ ಪಾಲಿಗೆ ಪ್ರತಿಷ್ಠೆಯಾಗಿದ್ದ ತಾಲೂಕಿನ ಕೈಲಾಂಚ ಹೋಬಳಿ ಗುನ್ನೂರು ಹಾಲು ಉತ್ಪಾದಕರ ಸಹಕಾರ ಸಂಘ ಕಾಂಗ್ರೆಸ್ ಪಾಲಾಗಿದೆ.

ಕನ್ನಡಪ್ರಭ ವಾರ್ತೆ ರಾಮನಗರ

ಜೆಡಿಎಸ್ ಪಾಲಿಗೆ ಪ್ರತಿಷ್ಠೆಯಾಗಿದ್ದ ತಾಲೂಕಿನ ಕೈಲಾಂಚ ಹೋಬಳಿ ಗುನ್ನೂರು ಹಾಲು ಉತ್ಪಾದಕರ ಸಹಕಾರ ಸಂಘ ಕಾಂಗ್ರೆಸ್ ಪಾಲಾಗಿದೆ.

ಸಂಘದ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಶಂಕರೇಗೌಡರವರು ಗುರುವಾರ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ. ಮುಂದಿನ ಐದು ವರ್ಷಗಳ ಸಂಘದ ಆಡಳಿತ ಮಂಡಳಿಯ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಕ್ಕೆ ಸಂಘದಲ್ಲಿ ಚುನಾವಣೆ ಪ್ರಕ್ರಿಯೆ ನಡೆಯಿತು.

ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಶಂಕರೇಗೌಡ ಮತ್ತು ಜೆಡಿಎಸ್ ಬೆಂಬಲಿತ ಮುದ್ದೇಗೌಡ ನಾಮಪತ್ರ ಸಲ್ಲಿಸಿದ್ದರು. ಚುನಾವಣೆಯಲ್ಲಿ ಶಂಕರೇಗೌಡ 8 ಮತಗಳನ್ನು ಪಡೆದು ಪ್ರತಿಸ್ಪರ್ಧಿ ಮುದ್ದೇಗೌಡ (5ಮತ) ಅವರನ್ನು 3 ಮತಗಳ ಅಂತರದಿಂದ ಪರಾಭವಗೊಳಿಸಿದರು.

ಉಪಾಧ್ಯಕ್ಷ ಸ್ಥಾನಕ್ಕೆ ಎಂ.ಆರ್. ಸ್ವಾಮಿ ಅವರನ್ನು ಹೊರತು ಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ರಿಟನಿರ್ಂಗ್ ಅಧಿಕಾರಿಯಾಗಿದ್ದ ಮಂಜುನಾಥ್ ಅವಿರೋಧ ಆಯ್ಕೆಯನ್ನು ಘೋಷಿಸಿದರು. ಸಂಘದ ಸಿಇಓ ಜಿ.ಎಸ್.ಸಿದ್ದೇಗೌಡ ಇದ್ದರು.

ಚುನಾವಣಾ ಪ್ರಕ್ರಿಯೆಯಲ್ಲಿ ನಿರ್ದೇಶಕರಾದ ಶಿವರತ್ನ, ಗಿರೀಶ್, ಮಹಲಿಂಗಯ್ಯ, ಜಯರತ್ನ, ಮಂಗಳಮ್ಮ, ಸಿದ್ದರಾಜು, ಶಿವರುದ್ರಯ್ಯ, ಲೋಕೇಶ್, ಮಂಟೇದಯ್ಯ, ವಿಸ್ತರಣಾಧಿಕಾರಿ ವೆಂಕಟೇಶ್ ಭಾಗವಹಿಸಿದ್ದರು.ಈ ವೇಳೆ ನೂತನ ಅಧ್ಯಕ್ಷ - ಉಪಾಧ್ಯಕ್ಷರನ್ನು ಅಭಿನಂದಿಸಿದ ಹುಲಿಕೆರೆ-ಗುನ್ನೂರು ಗ್ರಾಪಂ ಅಧ್ಯಕ್ಷ ಗಿರೀಶ್ , ಸಹಕಾರಿ ಕ್ಷೇತ್ರದಲ್ಲಿ ಎಲ್ಲರೂ ಸಹಬಾಳ್ವೆಯಿಂದ ಸಾಗಿದರೆ ಸಂಘದ ಪ್ರಗತಿ ಜೊತೆಗೆ ಸಹಕಾರಿಗಳು ಸಹ ಆರ್ಥಿಕವಾಗಿ ಪ್ರಗತಿ ಹೊಂದಲು ಸಾಧ್ಯವಾಗುತ್ತದೆ. ಕೆಲವರು ರಾಜಕೀಯ ಹಸ್ತಕ್ಷೇಪ ಮಾಡಿಕೊಂಡು ತಮ್ಮ ಕುಟುಂಬದವರನ್ನು ಅಧ್ಯಕ್ಷರನ್ನಾಗಿ ಮಾಡುವ ಉದ್ದೇಶದಿಂದ ಜೆಡಿಎಸ್ ಬೆಂಬಲಿತರು ಎಂದು ನಿರ್ದೇಶಕರನ್ನು ಬಿಂಬಿಸಲು ಪ್ರಯತ್ನಿಸಿದರು ಅದು ಅವರಿಗೆ ಫಲ ನೀಡಲಿಲ್ಲ. ಇನ್ನಾದರೂ ವೈಯಕ್ತಿಕ ಲಾಭದಾಸೆಯನ್ನು ಬಿಟ್ಟು ಜನಪರವಾಗಿ ಕೆಲಸಗಳನ್ನು ಮಾಡಲಿ ಎಂದರು.

ನೂತನ ಅಧ್ಯಕ್ಷ ಶಂಕರೇಗೌಡ ಅವರನ್ನು ಬಮೂಲ್ ನಿರ್ದೇಶಕ ಪಿ.ನಾಗರಾಜು, ಮುಖಂಡರಾದ ನಾಗರಾಜು, ಸಿದ್ದಲಿಂಗಯ್ಯ, ಸಿದ್ದರಾಮಯ್ಯ, ರಾಜೇಶ್, ಗೋಪಾಲ್, ಹೊನ್ನೇಗೌಡ, ಚೇತನ, ವಿಜಯ್ ಕುಮಾರ್, ಮಧು ಜಿ.ಆರ್, ಚೇತನ, ಸಿದ್ದರಾಜು, ಧನಂಜಯ್ಯ ಮತ್ತಿತರರಿದ್ದು ಅಭಿನಂದಿಸಿದರು....ಕೋಟ್ ....

ಗ್ರಾಮದಲ್ಲಿ ಎಂಪಿಸಿಎಸ್‌ಗಳು ಒಂದು ದೇವಾಲಯ ಇದ್ದಂತೆ, ಸಂಘದ ನಿರ್ದೇಶಕರು ವೈಯಕ್ತಿಕ ಲಾಭವನ್ನು ಬಿಟ್ಟು ಬಮೂಲ್ ಅಧ್ಯಕ್ಷರಾದ ಡಿ.ಕೆ.ಸುರೇಶ್ ಆಶಯದಂತೆ ರೈತರ ಮತ್ತು ಹೈನುಗಾರಿಕೆ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕೈ ಜೋಡಿಸಿದರೆ, ಸಂಘವು ಮತ್ತಷ್ಟು ಅಭಿವೃದ್ದಿಯಾಗಲಿದೆ.-ಗಿರೀಶ್, ಅಧ್ಯಕ್ಷ ಹುಲಿಕೆರೆ-ಗುನ್ನೂರು ಗ್ರಾಪಂ.

3ಕೆಆರ್ ಎಂಎನ್ 3.ಜೆಪಿಜಿ

ಗುನ್ನೂರು ಡೇರಿ ನೂತನ ಅಧ್ಯಕ್ಷ ಶಂಕರೇಗೌಡ ಅವರನ್ನು ಗ್ರಾಪಂ ಅಧ್ಯಕ್ಷ ಗಿರೀಶ್ ಸೇರಿದಂತೆ ಮುಖಂಡರು ಅಭಿನಂದಿಸಿದರು.

PREV