ಬೇಲೂರಿನಲ್ಲಿ ಶಂಕರಾಚಾರ್ಯರ ಜಯಂತಿ

KannadaprabhaNewsNetwork |  
Published : Apr 26, 2026, 02:30 AM IST
ಬೇಲೂರಿನಲ್ಲಿ ಶಂಕರಾಚಾರ್ಯರ ಜಯಂತಿಯ  ಐದು ದಿನಗಳ  ಕಾರ್ಯಕ್ರಮ ವೈಭವಮಯ  ಉತ್ಸವ, ಮೆರವಣಿಗೆ ಪ್ರವಚನದೊಂದಿಗೆ ಅದ್ದೂರಿಯಾಗಿ ಸಂಪನ್ನಗೊಂಡಿತು . | Kannada Prabha

ಸಾರಾಂಶ

ಬೇಲೂರು ಪಟ್ಟಣದ ಶೃಂಗೇರಿ ಶಂಕರಮಠದ ಶಾಖೆಯಲ್ಲಿ ಆದಿ ಶಂಕರಾಚಾರ್ಯರ ಜಯಂತಿಯ ಅಂಗವಾಗಿ ಐದು ದಿನಗಳ ಕಾಲ ವಿಶೇಷ ಪೂಜೆ, ಉತ್ಸವಗಳು, ಮೆರವಣಿಗೆ ಪ್ರವಚನದೊಂದಿಗೆ ಅದ್ಧೂರಿಯಾಗಿ ಸಂಪನ್ನಗೊಂಡಿತು. ಶಂಕರ ಜಯಂತಿಯ ವಿಶೇಷ ಅಂಗವಾಗಿ ಶಂಕರಾಚಾರ್ಯರ ಉತ್ಸವ ಮೂರ್ತಿಯನ್ನು ಪಟ್ಟಣದ ಪ್ರಮುಖ ಎಂಟು ಬೀದಿಗಳಲ್ಲಿ ಭವ್ಯ ಮೆರವಣಿಗೆಯ ಮೂಲಕ ಕೊಂಡೊಯ್ಯಲಾಯಿತು.

ಬೇಲೂರು: ಪಟ್ಟಣದ ಶೃಂಗೇರಿ ಶಂಕರಮಠದ ಶಾಖೆಯಲ್ಲಿ ಆದಿ ಶಂಕರಾಚಾರ್ಯರ ಜಯಂತಿಯ ಅಂಗವಾಗಿ ಐದು ದಿನಗಳ ಕಾಲ ವಿಶೇಷ ಪೂಜೆ, ಉತ್ಸವಗಳು, ಮೆರವಣಿಗೆ ಪ್ರವಚನದೊಂದಿಗೆ ಅದ್ಧೂರಿಯಾಗಿ ಸಂಪನ್ನಗೊಂಡಿತು.

ಪ್ರತಿದಿನವೂ ಬೆಳಿಗ್ಗೆ ಅಭಿಷೇಕ, ಅಲಂಕಾರ, ವಿಶೇಷ ಪೂಜೆಗಳು ನೆರವೇರಿಸಲ್ಪಡುತ್ತಿದ್ದು, ಬಳಿಕ ಪ್ರಾಕಾರೋತ್ಸವ ಹಾಗೂ ಭಕ್ತರಿಗೆ ಪ್ರಸಾದ ವಿನಿಯೋಗವನ್ನು ಏರ್ಪಡಿಸಲಾಗಿತ್ತು. ಶಂಕರ ಜಯಂತಿಯ ವಿಶೇಷ ಅಂಗವಾಗಿ ಶಂಕರಾಚಾರ್ಯರ ಉತ್ಸವ ಮೂರ್ತಿಯನ್ನು ಪಟ್ಟಣದ ಪ್ರಮುಖ ಎಂಟು ಬೀದಿಗಳಲ್ಲಿ ಭವ್ಯ ಮೆರವಣಿಗೆಯ ಮೂಲಕ ಕೊಂಡೊಯ್ಯಲಾಯಿತು.

ಈ ವೇಳೆ ಶೃಂಗೇರಿ ಶಾರದ ಮಠದ ಧರ್ಮದರ್ಶಿ ವಿಜಯಕೇಶವ ಮಾತನಾಡಿದರು. ಕೆ. ನಾರಾಯಣರಾವ್ ಮಾತನಾಡಿ, ಶಂಕರಾಚಾರ್ಯರ ತತ್ತ್ವಗಳು ಮಾನವ ಜೀವನಕ್ಕೆ ದಾರಿ ತೋರಿಸುವವು. ಇಂತಹ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದರಿಂದ ನಮ್ಮ ಸಂಸ್ಕೃತಿ ಮತ್ತು ಪರಂಪರೆ ಮುಂದುವರಿಯಲು ಸಹಕಾರವಾಗುತ್ತದೆ. ಯುವಪೀಳಿಗೆ ಇಂತಹ ಆಚರಣೆಗಳಲ್ಲಿ ಭಾಗಿಯಾಗಬೇಕು” ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಪ್ರಧಾನ ಅರ್ಚಕ ಸುಮಂತ್ ಕುಮಾರ್ ಶರ್ಮಾ, ರಮೇಶ್ ಆನಂಬಿ, ಸುರೇಶ್, ನಾಗರಾಜು ಅನಂತಮೂರ್ತಿ, ರವೀಂದ್ರ, ಸುರೇಶ್, ಶಶಿ, ಕೃಷ್ಣಮೂರ್ತಿ ಹಾಗೂ ಗಾಯಿತ್ರಿ ಭಜನಾ ಮಂಡಳಿ ಸದಸ್ಯರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭ್ರಷ್ಟಾಚಾರದ ವಿರುದ್ಧ ಹೋರಾಟಲು ಸಿದ್ಧ ಎಂದ ಕನಾಯ್ಕನಹಳ್ಳಿ ಪ್ರದೀಪ್
ಮಹಿಳಾ ಕಾಂಗ್ರೆಸ್ ಘಟಕದ ವತಿಯಿಂದ ಸಹಿ ಸಂಗ್ರಹ ಅಭಿಯಾನ