ಭ್ರಷ್ಟಾಚಾರದ ವಿರುದ್ಧ ಹೋರಾಟಲು ಸಿದ್ಧ ಎಂದ ಕನಾಯ್ಕನಹಳ್ಳಿ ಪ್ರದೀಪ್

KannadaprabhaNewsNetwork |  
Published : Apr 26, 2026, 02:30 AM IST
ಬಗರ್ ಹುಕಂ ಸದಸ್ಯ ಕನಾಯ್ಕನಹಳ್ಳಿ  ಪ್ರದೀಪ್  ಹಿಂಬಾಲಕರಿಗೆ ಗುತ್ತಿಗೆ ಕೊಡುವುದು ಭ್ರಷ್ಟಾಚಾರ. | Kannada Prabha

ಸಾರಾಂಶ

ತಾಲೂಕಿನ ಪ್ರಥಮ ಪ್ರಜೆ ಶಾಸಕರು ಬ ಅವರಿಗೆ ಬಂದ ಅನುದಾನವನ್ನು ಅಭಿವೃದ್ಧಿ ಕಾಮಗಾರಿಗಳಿಗೆ ಕ್ರಿಯಾ ಯೋಜನೆ ತಯಾರಿಸಲು ಅವಕಾಶವಿದೆ. ಆ ಕ್ರಿಯಾ ಯೋಜನೆಗೆ ತಂದ ಅನುದಾನವನ್ನು ತಮ್ಮ ಕಾರ್ಯಕರ್ತರಿಗೆ ಅಥವಾ ಹಿಂಬಾಲಕರಿಗೆ ಕೊಡಿ ಎಂದು ಆದೇಶ ಮಾಡುವುದು, ಅನುದಾನದ ಕಾಮಗಾರಿಯು ಟೆಂಡರ್ ಗೆ ಬಂದಾಗ ಆ ಕಾಮಗಾರಿಯನ್ನು ತಮ್ಮ ಬೆಂಬಲಿಗನಿಗೆ ನೀಡಲು ಸ್ವ ಕ್ಷೇತ್ರದ ಗುತ್ತಿಗೆದಾರರನ್ನು ಬೆದರಿಸಿ ಟೆಂಡರ್ ಹಾಕದಂತೆ ತಡೆಯುವುದು ಭ್ರಷ್ಟಾಚಾರ ಎಂಬುದನ್ನು ಶಾಸಕರು ಮೊದಲು ಅರ್ಥಮಾಡಿಕೊಳ್ಳಬೇಕು ಎಂದಿದ್ದಾರೆ.

ಬೇಲೂರು: ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಹಾಗೂ ಪಾರದರ್ಶಕ ಆಡಳಿತಕ್ಕಾಗಿ ಶಾಸಕರು ಭ್ರಷ್ಟಾಚಾರದ ವಿರುದ್ಧ ಹೋರಾಡಲು ಮುಂದಾದರೆ ನಾವು ಕೂಡ ಅವರ ಜೊತೆಗೆ ಕೈಜೋಡಿಸುತ್ತೇವೆ ಎಂದು ಬಗರ್‌ಹುಕಂ ಸದಸ್ಯ ಕನಾಯ್ಕನಹಳ್ಳಿ ಪ್ರದೀಪ್ ಹೇಳಿದ್ದಾರೆ. ಪತ್ರಿಕಾ ಹೇಳಿಕೆಯಲ್ಲಿತಿಳಿಸಿರುವ ಭ್ರಷ್ಟಾಚಾರವು ಸ್ವಜನಪಕ್ಷಪಾತ, ಅಧಿಕಾರ ದುರ್ಬಳಕೆ ಮತ್ತು ವಂಚನೆಗಳ ಮೂಲಕ ಸಮಾಜದ ಪ್ರಗತಿಗೆ ತಡೆಗೋಡೆಯಾಗಿದೆ. ಕೆಲಸ ಮಾಡಿಸಿಕೊಳ್ಳಲು ಹಣ ಅಥವಾ ಉಡುಗೊರೆ ನೀಡುವುದು ಲಂಚವಾದರೆ ಅರ್ಹತೆಗಿಂತ ಹೆಚ್ಚಾಗಿ ಸಂಬಂಧಿಕರಿಗೆ, ಹಿಂಬಾಲಕರಿಗೆ ಅವಕಾಶ ನೀಡುವ ಸ್ವಜನ ಪಕ್ಷಪಾತ ಭ್ರಷ್ಟಾಚಾರದ ಎರಡನೇ ಮುಖವಾಗಿದೆ. ಆ ತಾಲೂಕಿನ ಪ್ರಥಮ ಪ್ರಜೆ ಶಾಸಕರು ಬ ಅವರಿಗೆ ಬಂದ ಅನುದಾನವನ್ನು ಅಭಿವೃದ್ಧಿ ಕಾಮಗಾರಿಗಳಿಗೆ ಕ್ರಿಯಾ ಯೋಜನೆ ತಯಾರಿಸಲು ಅವಕಾಶವಿದೆ. ಆ ಕ್ರಿಯಾ ಯೋಜನೆಗೆ ತಂದ ಅನುದಾನವನ್ನು ತಮ್ಮ ಕಾರ್ಯಕರ್ತರಿಗೆ ಅಥವಾ ಹಿಂಬಾಲಕರಿಗೆ ಕೊಡಿ ಎಂದು ಆದೇಶ ಮಾಡುವುದು, ಅನುದಾನದ ಕಾಮಗಾರಿಯು ಟೆಂಡರ್ ಗೆ ಬಂದಾಗ ಆ ಕಾಮಗಾರಿಯನ್ನು ತಮ್ಮ ಬೆಂಬಲಿಗನಿಗೆ ನೀಡಲು ಸ್ವ ಕ್ಷೇತ್ರದ ಗುತ್ತಿಗೆದಾರರನ್ನು ಬೆದರಿಸಿ ಟೆಂಡರ್ ಹಾಕದಂತೆ ತಡೆಯುವುದು ಭ್ರಷ್ಟಾಚಾರ ಎಂಬುದನ್ನು ಶಾಸಕರು ಮೊದಲು ಅರ್ಥಮಾಡಿಕೊಳ್ಳಬೇಕು ಎಂದಿದ್ದಾರೆ.ಇಲಾಖೆಯ ಅಧಿಕಾರಿಗಳು ಸರ್ಕಾರಿ ಕಾರ್ಯಕ್ರಮ, ಸಭೆ ಸಮಾರಂಭಗಳನ್ನು ಮಾಡಲು ಕ್ಷೇತ್ರದ ಶಾಸಕರ ಅನುಮತಿ ಪಡೆದು ಪೂರ್ವಭಾವಿ ಸಭೆ ಮತ್ತು ಸಭೆಗಳ ದಿನಾಂಕ ಮತ್ತು ಸಮಯ ನಿಗದಿಪಡಿಸಿರುತ್ತಾರೆ. ಶಾಸಕರ ಸೂಚನೆಯಂತೆ ಕಾರ್ಯಕ್ರಮದ ಪಟ್ಟಿಯನ್ನು ತಯಾರಿಸಿರುತ್ತಾರೆ. ಅದರಂತೆ ಸ್ಥಳೀಯ ಆಡಳಿತದಿಂದ ನಡೆಯುವ ಸರ್ಕಾರಿ ಕಾರ್ಯಕ್ರಮಗಳಿಗೆ ಅಧಿಕಾರಿಗಳು ಹಾಗೂ ಶಾಸಕರ ಜವಾಬ್ದಾರಿ ಸ್ಥಾನದಲ್ಲಿರುತ್ತಾರೆ. ಕಾರ್ಯಕ್ರಮ ಉತ್ತಮವಾಗಿ ನಡೆದರೆ ಆಗ ಎಲ್ಲಾ ಸಮಾಜದ ಕಾರ್ಯಕರ್ತರು ಯಾವ ಸಮಾರಂಭವನ್ನು ಯಶಸ್ವಿಗೊಳಿಸಲು ಸಾಧ್ಯವಾಗುತ್ತದೆ, ಅದನ್ನು ಬಿಟ್ಟು ಪೂರ್ವಭಾವಿ ಸಭೆಯಲ್ಲಿ ಒಂದನ್ನು ಹೇಳಿ ಕಾರ್ಯಕ್ರಮ ಯಾವ ರೀತಿ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿಯನ್ನು ಪಡೆಯದೆ ನಿರ್ಲಕ್ಷ್ಯ ವಹಿಸಿ ಕಾರ್ಯಕ್ರಮ ಏರುಪೇರು ಆದಾಗ ಸುಮ್ಮನೆ ಅಧಿಕಾರಿಗಳ ಮೇಲೆ ಗೂಬೆಕೂರಿಸುವುದಲ್ಲ ಶಾಸಕರ ಸ್ಥಾನಕ್ಕೆ ಶೋಭೆ ತರುವುದಿಲ್ಲ. ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿಯಿಂದ ನಡೆಯುವ ಕಾರ್ಯಕ್ರಮದ ಯಶಸ್ವಿಗೆ ಆ ಕ್ಷೇತ್ರದ ಶಾಸಕರು ಶ್ರಮವಹಿಸಬೇಕು ಅದನ್ನು ಬಿಟ್ಟು ಎಲ್ಲದಕ್ಕೂ ಅಧಿಕಾರಿಗಳನ್ನೇ ಹೊಣೆ ಮಾಡಿ ದೂಷಿಸುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೇಲೂರಿನಲ್ಲಿ ಶಂಕರಾಚಾರ್ಯರ ಜಯಂತಿ
ಮಹಿಳಾ ಕಾಂಗ್ರೆಸ್ ಘಟಕದ ವತಿಯಿಂದ ಸಹಿ ಸಂಗ್ರಹ ಅಭಿಯಾನ