ಸನಾತನ ಸಂಸ್ಕೃತಿಗೆ ಶಂಕರಾಚಾರ್ಯರ ಕೊಡುಗೆ ಅಪಾರ: ಡಾ. ಸಂತೋಷ್

KannadaprabhaNewsNetwork |  
Published : Feb 05, 2024, 01:45 AM ISTUpdated : Feb 05, 2024, 03:54 PM IST
4ಎಚ್ಎಸ್ಎನ್10 : ಶ್ರೀ ಶಾರದಾ ಪೀಠಂ ಶಂಕರಮಠ ಬೇಲೂರು ಮತ್ತು ದೇಶಭಕ್ತರ ಬಳಗ ಬೇಲೂರು ಸಂಯುಕ್ತಾಶ್ರಯದಲ್ಲಿ ನಡೆದ ಭಜಗೋವಿಂದ ಸ್ಪರ್ಧಾ ಕಾರ್ಯಕ್ರಮ ನಡೆಸಲಾಯಿತು. | Kannada Prabha

ಸಾರಾಂಶ

ಸನಾತನ ಧರ್ಮ, ಸಂಸ್ಕೃತಿಯ ಉಳಿವಿಗಾಗಿ ಆದಿಶಂಕರರ ಕೊಡುಗೆ ಅಪಾರವಾಗಿದೆ. ಜಗತ್ತಿನ 36 ಸಂಸ್ಕೃತಿಗಳಲ್ಲಿ 35 ಸಂಸ್ಕೃತಿಗಳು ನಶಿಸಿ ಹೋಗಿರುವಾಗ ಭಾರತೀಯ ಸನಾತನ ಸಂಸ್ಕೃತಿ ಮಾತ್ರ ಉಳಿದಿದ್ದು, ಇದನ್ನು ಉಳಿಸುವಲ್ಲಿ ಶಂಕರಾಚಾರ್ಯರಂತ ಮಹನೀಯರ ಕೊಡುಗೆ ಅಪಾರವಾಗಿದೆ.

ಕನ್ನಡಪ್ರಭ ವಾರ್ತೆ ಬೇಲೂರು

ಸನಾತನ ಸಂಸ್ಕೃತಿ ಉಳಿವಿಗೆ ಶಂಕರಾಚಾರ್ಯರ ಕೊಡುಗೆ ಅಪಾರವಾಗಿದೆ ಎಂದು ದೇಶಭಕ್ತರ ಬಳಗದ ತಾಲೂಕು ಅಧ್ಯಕ್ಷ ಡಾ. ಸಂತೋಷ್ ಹೇಳಿದರು.

ಶ್ರೀ ಶಾರದಾ ಪೀಠಂ ಶಂಕರಮಠ ಬೇಲೂರು ಮತ್ತು ದೇಶಭಕ್ತರ ಬಳಗ ಬೇಲೂರು ಸಂಯುಕ್ತಾಶ್ರಯದಲ್ಲಿ ಭಜಗೋವಿಂದ ಸ್ಪರ್ಧಾ ಕಾರ್ಯಕ್ರಮ ನಡೆಸಲಾಯಿತು.

ದೇಶಭಕ್ತರ ಬಳಗದ ತಾಲೂಕು ಅಧ್ಯಕ್ಷ ಡಾಕ್ಟರ್ ಸಂತೋಷ್ ಕುಮಾರ್ ಮಾತನಾಡಿ. ಸನಾತನ ಧರ್ಮ, ಸಂಸ್ಕೃತಿಯ ಉಳಿವಿಗಾಗಿ ಆದಿಶಂಕರರ ಕೊಡುಗೆ ಅಪಾರವಾಗಿದೆ. 

ಜಗತ್ತಿನ 36 ಸಂಸ್ಕೃತಿಗಳಲ್ಲಿ 35 ಸಂಸ್ಕೃತಿಗಳು ನಶಿಸಿ ಹೋಗಿರುವಾಗ ಭಾರತೀಯ ಸನಾತನ ಸಂಸ್ಕೃತಿ ಮಾತ್ರ ಉಳಿದಿದ್ದು, ಇದನ್ನು ಉಳಿಸುವಲ್ಲಿ ಶಂಕರಾಚಾರ್ಯರಂತ ಮಹನೀಯರ ಕೊಡುಗೆ ಅಪಾರವಾಗಿದೆ. 

ಇವರು ದೇಶಾದ್ಯಂತ ಸಂಚರಿಸಿ. ನಾಲಕ್ಕು ಆಮ್ನಾಯ ಮಠಗಳನ್ನು ಸ್ಥಾಪಿಸಿ ತಮ್ಮದೇ ಅದ್ವೈತ ಸಿದ್ದಾಂತವನ್ನು ಪ್ರತಿಷ್ಠಾಪಿಸಿ ಸನಾತನ ಸಂಸ್ಕೃತಿಯನ್ನು ಉಳಿಸಿದರು.

ನಮ್ಮ ದೇಶಭಕ್ತ ಬಳಗದ ವತಿಯಿಂದ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದೇವೆ ಮುಂದೆಯೂ ಕೂಡ ಇದನ್ನು ಮುಂದುವರೆಸಿಕೊಂಡು ಹೋಗುವುದಾಗಿ ತಿಳಿಸಿದರು.

ಶಂಕರ ಮಠದ ಕಾರ್ಯದರ್ಶಿ ಸುಬ್ರಹ್ಮಣ್ಯ ಮಾತನಾಡಿ, ನಮ್ಮ ಸಂಸ್ಕೃತಿ, ಧರ್ಮ ರಕ್ಷಣೆಗೆ ಶೃಂಗೇರಿ ಶ್ರೀಗಳ ಕೊಡುಗೆ ಅಪಾರ ಮತ್ತು ಈ ಕಾರ್ಯಕ್ರಮಕ್ಕೆ ಶೃಂಗೇರಿ ಶ್ರೀಗಳು ಮನಪೂರ್ವಕವಾಗಿ ಆಶೀರ್ವಾದ ಮಾಡಿರುವುದೇ ಪ್ರೇರಣೆಯಾಗಿರುತ್ತದೆ. 

ಇನ್ನು ಮುಂದೆ ನಿರಂತರವಾಗಿ ಭಗವದ್ಗೀತೆ, ರಾಮಾಯಣ, ಮಹಾಭಾರತದ ಕ್ವಿಜ್ ಮುಂತಾದ ಕಾರ್ಯಕ್ರಮಗಳನ್ನು ಮಠದಲ್ಲಿ ಮಾಡುವ ಯೋಜನೆ ಇದೆ ಎಂದು ತಿಳಿಸಿದರು. ಇದೇ ವೇಳೆ ೮೦ ಜನ ವಿದ್ಯಾರ್ಥಿಗಳು ಭಜಗೋವಿಂದ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಮಲ್ಲಿಕಾರ್ಜುನ ಮೆಡಿಕಲ್ ಮಹೇಶ್, ಹಯವದನರಾವ್,ಪ್ರಕಾಶ್,ನವರತ್ನ ಎಸ್ ವಟಿ,ಹರೀಶ್ ಸೇರಿದಂತೆ ಇತರರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೊಸ ಅವಕಾಶ ತೆರೆದ ಸಮಕಾಲೀನ ಭಾಷಾ ತಂತ್ರಜ್ಞಾನ: ಗೀತಾ ವಾಲೀಕಾರ್
ವಸಾಹತುಶಾಹಿತ್ವ ಒಳಿತು ಕೆಡಕಿನ ಸಂತೆ: ಡಾ. ಕೆ. ವೆಂಕಟೇಶ