ಶಂಕರಾಚಾರ್ಯರ ಜಯಂತಿ ಉತ್ಸವ ಸಂಪನ್ನ

KannadaprabhaNewsNetwork |  
Published : May 06, 2025, 01:50 AM IST
ಬಾಗಲಕೋಟೆ ನಗರದ ಶಂಕರಮಠದಲ್ಲಿ ಹಮ್ಮಿಕೊಂಡಿದ್ದ ಶಂಕರ ಜಯಂತಿ ಉತ್ಸವ ಕಾರ್ಯಕ್ರಮವು ಭಾನುವಾರ ಪಾಲಕಿ ಸೇವೆಯೊಂದಿಗೆ ಸಂಪನ್ನಗೊಂಡಿತು. | Kannada Prabha

ಸಾರಾಂಶ

ಜಗದ್ಗುರು ಆದಿ ಶಂಕಚಾರ್ಯರ ಜಯಂತಿ ನಿಮಿತ್ತ ಇಲ್ಲಿನ ವಿನಾಯಕ ನಗರದಲ್ಲಿರುವ ನೂತನ ಶೃಂಗೇರಿ ಶಂಕರಮಠದಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಂಡಿದ್ದ ಉತ್ಸವ ಭಾನುವಾರ ಪಾಲಕಿ ಸೇವೆಯೊಂದಿಗೆ ಸಂಪನ್ನಗೊಂಡಿತು.

ನ್ನಡಪ್ರಭ ವಾರ್ತೆ ಬಾಗಲಕೋಟೆ

ಜಗದ್ಗುರು ಆದಿ ಶಂಕಚಾರ್ಯರ ಜಯಂತಿ ನಿಮಿತ್ತ ಇಲ್ಲಿನ ವಿನಾಯಕ ನಗರದಲ್ಲಿರುವ ನೂತನ ಶೃಂಗೇರಿ ಶಂಕರಮಠದಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಂಡಿದ್ದ ಉತ್ಸವ ಭಾನುವಾರ ಪಾಲಕಿ ಸೇವೆಯೊಂದಿಗೆ ಸಂಪನ್ನಗೊಂಡಿತು.

ನಿತ್ಯ ಶ್ರೀಮಠದಲ್ಲಿರುವ ಶ್ರೀ ಚಂದ್ರಮೌಳೇಶ್ವರ ಹಾಗೂ ಶಂಕರಾಚಾರ್ಯರ ಮೂರ್ತಿಗಳಿಗೆ ರುದ್ರಾಭಿಷೇಕ, ನೈವೇದ್ಯ, ಆರತಿ, ವಿಶೇಷ ಪೂಜೆ ಜರುಗಿದವು. ಶಂಕರಾಚಾರ್ಯರ ಅಷ್ಟೋತ್ತರ ಶತನಾಮಾವಳಿ ಪಾರಾಯಣ ನಡೆಸಿ ದೇಶದ ಕಲ್ಯಾಣಕ್ಕಾಗಿ ಪ್ರಾರ್ಥಿಸಲಾಯಿತು.ಶ್ರೀ ಶಂಕರಾಚಾರ್ಯ ಭಾವಚಿತ್ರದ ಮೆರವಣಿಗೆ ಜರುಗಿತು. ತೊಟ್ಟಿಲೋತ್ಸವ ಉತ್ಸವ ಕಳೆಗಟ್ಟುವಂತೆ ಮಾಡಿತು. ವೇದ, ಘೋಷಗಳು ನಿತ್ಯ ಮೊಳಗಿದವು. ಸಿದ್ದಾಪುರದ ಪಂ. ಶ್ರೀ ಸುಪ್ರತೀಕ ಭಟ್ಟ ಉಪನ್ಯಾಸ ನೀಡಿದರು. ಮೂರು ದಿನ ಮಹಾ ಮಂಗಳಾರತಿ, ನಂತರ ತೀರ್ಥ ಪ್ರಸಾದ ವಿತರಣೆ ನಡೆಯಿತು. ಮಹಾಲಕ್ಷ್ಮೀ ಕುಲಕರ್ಣಿ, ಅನಘಾ ಕುರುವಿನಕೊಪ್ಪ ಅವರ ಸಂಗೀತ ಕಾರ್ಯಕ್ರಮ ನೆರೆದವರನ್ನು ಭಕ್ತಿಯಲ್ಲಿ ತೇಲುವಂತೆ ಮಾಡಿತು.

ಭಾನುವಾರ ಸಾಮೂಹಿಕ ಸತ್ಯ ನಾರಾಯಣ ಪೂಜೆ, ಕುಂಕಮಾರ್ಚನೆ, ಸ್ತೋತ್ರ ಪಠಣ, ಭಜನೆ, ಭಕ್ತಿ ಗೀತೆ ಪಾಲಕಿ ಸೇವೆಯೊಂದಿಗೆ ಮಂಗಳ ಹಾಡಲಾಯಿತು. ಶಂಕರರಾಚಾರ್ಯ ಮಹಾರಕಿ ಜೈ, ಜಯ ನಮಃ ಪಾರ್ವತಿ ಹರ ಹರ ಮಹಾದೇವ ಘೋಷಣೆಗಳು ಮೊಳಗಿದವು. ಪಂ.ವೆಂಕಟೇಶಭಟ್ ಜೋಶಿ, ಪಂ.ಆನಂದಶರ್ಮ ಭಟ್, ಡಾ.ಮಹಾದೇವ ದಿಕ್ಷೀತ ನೇತೃತ್ವದಲ್ಲಿ ಧಾರ್ಮಿಕ ಕೈಂಕರ್ಯ ಮೂರು ದಿನಗಳ ಕಾಲ ನಡೆದವು.

ಶಂಕರಮಠದ ಶಾಖಾ ವ್ಯವಸ್ಥಾಪಕ ಶಿವರಾಮ ಹೆಗಡೆ , ಶಂಕರ ಸ್ವಾಧ್ಯಾಯ ಮಂಡಳಿ ಕಾರ್ಯದರ್ಶಿ ಕಿರಣ ಬಾಗಲಕೋಟ, ಡಾ.ಗಿರೀಶ ಮಾಸೂರಕರ, ವಸಂತ ಕುಲಕರ್ಣಿ, ರವಿ ಮಠ, ಸಂಜೀವ ಜೋಶಿ, ಸುನೀಲ ಮಠ, ಭೀಮಣ್ಣ ದಪ್ತರದಾರ, ವಿನೋದ ಪುರಾಣಿಕ, ಪೂರ್ಣಿಮಾ ಬಾಗಲಕೋಟೆ, ರಕ್ಷಾ ದೇಶಪಾಂಡೆ, ಪದ್ಮಾ ಮಠ, ಪ್ರೇಮಾ ಪುರಾಣಿಕ, ಗೀತಾ ಕುರುವಿನಕೊಪ್ಪ ಇತರರು ಇದ್ದರು.

PREV

Recommended Stories

ವಿಶ್ವದಲ್ಲೇ ಮೊದಲ ಬಾರಿ ಬನ್ನೇರುಘಟ್ಟದಲ್ಲಿ ಕರಡಿಗೆ ಕೃತಕ ಕಾಲು ಜೋಡಣೆ
ರಾಜ್ಯದ ಸಿರಿಧಾನ್ಯ ಬೆಳೆಗಾರರಿಗೆ ರಾಜ್ಯ ಸರ್ಕಾರದ ಸಿಹಿ ಸುದ್ದಿ