ಹಿಂದೂ ಧರ್ಮ ಉಳಿವಿಗೆ ಅವತರಿಸಿದವರು ಶಂಕರಾಚಾರ್ಯರು: ಕೆ.ಬಿ.ವೆಂಕಟೇಶ್

KannadaprabhaNewsNetwork | Published : May 3, 2025 12:16 AM

ಸಾರಾಂಶ

ಶಂಕರಾಚಾರ್ಯರು ಭರತಖಂಡದ ನಾಲ್ಕು ದಿಕ್ಕುಗಳಲ್ಲಿ ಶಕ್ತಿಪೀಠ, ಮಠಗಳನ್ನು ಸ್ಥಾಪಿಸಿದರು. ಇವರ ರಚನೆಯಹ್ಮಸೂತ್ರದ ಭಾಷ್ಯ, ಉಪನಿಷತ್‌ ಭಾಷ್ಯ ಭಜಗೋವಿಂದಂ, ಸೌಂದರ್ಯ ಲಹರಿ ಸ್ತ್ರೋತ್ರಗಳು ಜಗತ್ಪ್ರಸಿದ್ಧವಾಗಿದೆ. ಬದುಕಿದ್ದು ಅತ್ಯಲ್ಪವಾದರೂ ಸಾಧನೆ ಅಗಾಧವಾಗಿದೆ. ವೇದ, ಶಾಸ್ತ್ರಗಳಲ್ಲಿ ಅಖಂಡ ಪಾಂಡಿತ್ಯ ಪಡೆದು, ವೇದ, ಪೌರೋಹಿತ್ಯ ಎಲ್ಲ ವರ್ಣಕ್ಕೆ ಸೇರಿದೆ.

ಕನ್ನಡಪ್ರಭ ವಾರ್ತೆ ಕಿಕ್ಕೇರಿ

ಅವನತಿಯ ಹಾದಿಯಲ್ಲಿದ್ದ ಹಿಂದೂ ಧರ್ಮದ ಅಳಿವಿಗೆ ಅವತಾರ ಪುರುಷರಂತೆ ನಾಡಿಗೆ ಬಂದ ಆಚಾರ್ಯ ಶಂಕರರು ಎಂದು ವಿಪ್ರ ಬಾಂಧವ ಸೇವಾ ಸಮಿತಿ ಕಾರ್ಯದರ್ಶಿ ಕೆ.ಬಿ.ವೆಂಕಟೇಶ್ ಹೇಳಿದರು.

ಪಟ್ಟಣದ ವಿಪ್ರ ಬಾಂಧವ ಸೇವಾ ಸಮಿತಿ ಬ್ರಹ್ಮೇಶ್ವರ ದೇಗುಲದಲ್ಲಿ ಆಯೋಜಿಸಿದ್ದ ಶಂಕರ ಜಯಂತಿಯಲ್ಲಿ ಮಾತನಾಡಿ, ಶಂಕರರು ಹಿಂದೂ ಧರ್ಮ ತಿಲಕವಾಗಿ ನಾಡಿನ ಉದ್ದಗಲಕ್ಕೂ ಧರ್ಮ ಪ್ರಚಾರ, ಉಪನ್ಯಾಸದಂತಹ ಕಾರ್ಯ ಕೈಗೊಂಡರು ಎಂದರು.

ಭರತಖಂಡದ ನಾಲ್ಕು ದಿಕ್ಕುಗಳಲ್ಲಿ ಶಕ್ತಿಪೀಠ, ಮಠಗಳನ್ನು ಸ್ಥಾಪಿಸಿದರು. ಇವರ ರಚನೆಯಹ್ಮಸೂತ್ರದ ಭಾಷ್ಯ, ಉಪನಿಷತ್‌ ಭಾಷ್ಯ ಭಜಗೋವಿಂದಂ, ಸೌಂದರ್ಯ ಲಹರಿ ಸ್ತ್ರೋತ್ರಗಳು ಜಗತ್ಪ್ರಸಿದ್ಧವಾಗಿದೆ. ಬದುಕಿದ್ದು ಅತ್ಯಲ್ಪವಾದರೂ ಸಾಧನೆ ಅಗಾಧವಾಗಿದೆ. ವೇದ, ಶಾಸ್ತ್ರಗಳಲ್ಲಿ ಅಖಂಡ ಪಾಂಡಿತ್ಯ ಪಡೆದು, ವೇದ, ಪೌರೋಹಿತ್ಯ ಎಲ್ಲ ವರ್ಣಕ್ಕೆ ಸೇರಿದೆ ಎಂದು ತಿಳಿಸಿ ದೇವಮಾನವರಾದರು ಎಂದರು.

ತಮ್ಮ 16ರ ವಯಸ್ಸಿನಲ್ಲಿ ಗ್ರಂಥ ರಚಿಸಿ, 32ವಯಸ್ಸಿನಲ್ಲಿ 3ಬಾರಿ ದೇಶದ ಉದ್ದಗಲಕ್ಕೂ ಸಂಚರಿಸಿ ಹಿಂದೂಧರ್ಮವನ್ನು ಗಟ್ಟಿಗೊಳಿಸಿದರು. ಮನುಕುಲಕ್ಕೆ ಅತ್ಯುನ್ನತ ಜ್ಞಾನ ಹಂಚಿದ ನಮ್ಮದೇಶದ ಧರ್ಮವಾಗಿದೆ. ಆಧ್ಯಾತ್ಮ ಶಕ್ತಿ ಜ್ಞಾನವನ್ನು ಜನಸಾಮಾನ್ಯರಿಗೆ ಉಣಬಡಿಸಿದ ಶಂಕರರ ಸ್ಮರಣೆ ಚಿರಂತನವಾಗಿರಬೇಕು ಎಂದರು.

ಪಟ್ಟಣದ ಸುಬ್ಬರಾಯಛತ್ರದಲ್ಲಿ ಏಳು ದಿನಗಳವರೆಗೆ ಸಪ್ತಾಹ ಏರ್ಪಡಿಸಲಾಗಿದೆ.ನಿತ್ಯ ಸಂಜೆ ಶಂಕರರ ಪಾದುಕಾ ಪೂಜೆ, ಅಷ್ಟೋತ್ತರ, ಭಜನೆ, ಶಂಕರ ವಿಜಯ ಪಾರಾಯಣಜರುಗಲಿದೆ ಎಂದು ತಿಳಿಸಿದರು.

ಭಾವಚಿತ್ರಕ್ಕೆ ವಿವಿಧ ಪರಿಮಳ ಪುಷ್ಪಗಳ ಮಾಲೆಯನ್ನು ಹಾಕಿ ಶೃಂಗರಿಸಲಾಗಿತ್ತು. ಮಹಿಳೆಯರು ಭಜಗೋವಿಂದಂ ಕೀರ್ತನೆ ಹಾಡಿದರು. ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಹಮ್ಮಿಕೊಳ್ಳಲಾಗಿತ್ತು. ಕೆ.ಬಿ. ವೆಂಕಟೇಶ್, ಚಂದ್ರಶೇಖರಯ್ಯ, ಭಾಸ್ಕರಸ್ವಾಮಿ, ಸೋಮಶೇಖರ್, ಆದಿತ್ಯ, ಸುಮಾ, ಕುಸುಮಾ, ಕಲಾವತಿ, ವೇದಾವತಿ ಇದ್ದರು.

ನಾಳೆ ಪ್ರೊ.ಜೆಪಿ, ನಾಗರಾಜುಗೆ ಅಭಿನಂದನಾ ಸಮಾರಂಭ

ಕನ್ನಡಪ್ರಭ ವಾರ್ತೆ ಮಂಡ್ಯ

ನಾಗರಿಕ ಅಭಿನಂದನಾ ಸಮಿತಿಯಿಂದ ಕನ್ನಡ ಪುಸ್ತಕ ಪ್ರಾಧಿಕಾರದ ಡಾ.ಜಿ.ಪಿ.ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿ ಪುರಸ್ಕೃತ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಹಾಗೂ ಮತ್ತೆ ಮತ್ತೆ ಶಂಕರಗೌಡ ಪುಸ್ತಕಕ್ಕೆ ಕನ್ನಡ ಪುಸ್ತಕ ಪ್ರಾಧಿಕಾರದ ಪುಸ್ತಕ ಮುದ್ರಣ ಸೊಗಸು ಪುರಸ್ಕೃತ ಎನ್.ನಾಗರಾಜು ಅವರನ್ನು ಮೇ 4ರಂದು ಬೆಳಗ್ಗೆ 11 ಗಂಟೆಗೆ ಅಭಿನಂದಿಸಲಾಗುವುದು ಎಂದು ನಿವೃತ್ತ ಪ್ರಾಂಶುಪಾಲ ಪ್ರೊ.ಎಸ್.ಬಿ.ಶಂಕರೇಗೌಡ ತಿಳಿಸಿದರು.

ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪುರಸ್ಕೃತರನ್ನು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅಭಿನಂದಿಸುವರು. ಅಧ್ಯಕ್ಷತೆಯನ್ನು ಮಾಜಿ ಶಾಸಕ ಎಂ.ಶ್ರೀನಿವಾಸ್ ವಹಿಸುವರು. ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಅಭಿನಂದನಾ ನುಡಿಗಳನ್ನಾಡುವರು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಅನಿಲ್‌ಕಕುಮಾರ್, ಶಿವರುದ್ರಪ್ಪ, ಜಯರಾಂ, ವಿನಯ್‌ಕುಮಾರ್, ನಾಗಪ್ಪ, ಸುರೇಶ್, ಲೋಕೇಶ್ ಇದ್ದರು.

Share this article