ಶಂಕರಪುರ: ರೋಟರಿ ಸಮುದಾಯದಳ ಜಿಲ್ಲಾ ಸಮ್ಮೇಳನ ಸಂಪನ್ನ

KannadaprabhaNewsNetwork |  
Published : Jan 01, 2025, 12:01 AM IST
31ರೋಟರಿ | Kannada Prabha

ಸಾರಾಂಶ

ಶಿರ್ವ ರೋಟರಿಯ ಸಂಸ್ಥಾಪಕರು, ಬಹುಮುಖಿ ಪ್ರತಿಭಾ ಸಂಪನ್ನರಾದ ದಿ.ಪಾಂಗಾಳ ವಿಠಲ್‌ ಶೆಣೈ ಜನ್ಮ ಶತಮಾನೋತ್ಸವ ಅಂಗವಾಗಿ ಶಿರ್ವ ರೋಟರಿ ಕ್ಲಬ್, ಪಾದೂರು ರೋಟರಿ ಸಮುದಾಯದಳದ ನೇತೃತ್ವ ಹಾಗೂ ರೋಟರಿ ಶಂಕರಪುರ ಸಹಕಾರದಲ್ಲಿ ರೋಟರಿ ಅ.ರಾ.ಜಿಲ್ಲೆ ೩೧೮೨ ಇದರ ರೋಟರಿ ಸಮುದಾಯದಳ ಜಿಲ್ಲಾ ಸಮ್ಮೇಳನ ಶಂಕರಪುರ ಸೈಂಟ್ ಜೋನ್ಸ್ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.

ಕನ್ನಡಪ್ರಭ ವಾರ್ತೆ ಕಾಪು

ಇಲ್ಲಿನ ಶಿರ್ವ ರೋಟರಿಯ ಸಂಸ್ಥಾಪಕರು, ಬಹುಮುಖಿ ಪ್ರತಿಭಾ ಸಂಪನ್ನರಾದ ದಿ.ಪಾಂಗಾಳ ವಿಠಲ್‌ ಶೆಣೈ ಜನ್ಮ ಶತಮಾನೋತ್ಸವ ಅಂಗವಾಗಿ ಶಿರ್ವ ರೋಟರಿ ಕ್ಲಬ್, ಪಾದೂರು ರೋಟರಿ ಸಮುದಾಯದಳದ ನೇತೃತ್ವ ಹಾಗೂ ರೋಟರಿ ಶಂಕರಪುರ ಸಹಕಾರದಲ್ಲಿ ರೋಟರಿ ಅ.ರಾ.ಜಿಲ್ಲೆ ೩೧೮೨ ಇದರ ರೋಟರಿ ಸಮುದಾಯದಳ ಜಿಲ್ಲಾ ಸಮ್ಮೇಳನ ಶಂಕರಪುರ ಸೈಂಟ್ ಜೋನ್ಸ್ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು. ರೋಟರಿ ಅಂತಾರಾಷ್ಟ್ರೀಯ ಜಿಲ್ಲೆ ೩೧೮೨ ಇದರ ಜಿಲ್ಲಾ ಗವರ್ನರ್ ಸಿ.ಎ. ದೇವ್ ಆನಂದ್ ಉದ್ಘಾಟಿಸಿದರು.ಆರಂಭದಲ್ಲಿ ದಿ.ಪಾಂಗಾಳ ವಿಠಲ್ ಶೆಣೈ ಸಂಸ್ಮರಣಾರ್ಥ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ರೋಟರಿ ಜಿಲ್ಲಾ ಮಾಜಿ ಗವರ್ನರ್ ಡಾ.ದೇವದಾಸ್ ರೈ ಮಂಗಳೂರು ದಿಕ್ಸೂಚಿ ಭಾಷಣ ಮಾಡಿದರು.

ಈ ಸಂದರ್ಭ ಶಿಕ್ಷಣ, ಕೃಷಿ, ಸಾಹಿತ್ಯ, ರಂಗಭೂಮಿ, ಸಂಘಟನೆ, ಸಮಾಜಸೇವೆ ಸಹಿತ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವವರಿಗಾಗಿ ನೀಡಲಾಗುತ್ತಿರುವ ಪಾಂಗಾಳ ವಿಠಲ ಶೆಣೈ ಸ್ಮರಣಾರ್ಥ ‘ಸಾಧನಾ-ಪ್ರೇರಣಾ ಪುರಸ್ಕಾರ’ವನ್ನು ನಿವೃತ್ತ ಶಿಕ್ಷಕ, ಕಲಾವಿದ ಕೃಷ್ಣಕುಮಾರ್ ರಾವ್ ಮಟ್ಟು ಅವರಿಗೆ ಪ್ರದಾನ ಮಾಡಲಾಯಿತು.ಸಮಾರಂಭದ ಅಧ್ಯಕ್ಷತೆಯನ್ನು ಶಿರ್ವ ರೋಟರಿ ಅಧ್ಯಕ್ಷ ಆಲ್ವಿನ್ ಅಮಿತ್ ಅರಾನ್ಹಾ ವಹಿಸಿದ್ದರು. ಅತಿಥಿಗಳಾಗಿ ಪಾಂಗಾಳ ಜಯರಾಮ ಶೆಣೈ, ೨೦೨೫-೨೬ನೇ ಸಾಲಿನ ನಿಯೋಜಿತ ಜಿಲ್ಲಾ ಗವರ್ನರ್ ಪಾಲಾಕ್ಷ ಹಾಸನ, ೨೦೨೬-೨೭ರ ಜಿಲ್ಲಾ ಗವರ್ನರ್ ಬಿ.ಎಂ.ಭಟ್ ಬ್ರಹ್ಮಾವರ, ವಲಯ ಸಹಾಯಕ ಗವರ್ನರ್ ಅನಿಲ್ ಡೇಸಾ, ಆರ್‌ಸಿಸಿ ಜಿಲ್ಲಾ ಪ್ರತಿನಿಧಿ ಪ್ರಸಾದ್ ಆಚಾರ್ಯ ಉಪಸ್ಥಿತರಿದ್ದರು.ಆರ್‌ಸಿಸಿ ಜಿಲ್ಲಾ ಚೇರ್ಮನ್‌ ಬಿ.ಪುಂಡಲೀಕ ಮರಾಠೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮ್ಮೇಳನ ಸಮಿತಿ ಅಧ್ಯಕ್ಷ ಡಾ.ವಿಠಲ್ ನಾಯಕ್ ಸ್ವಾಗತಿಸಿದರು. ಡಾ.ಅರುಣ್ ಕುಮಾರ್ ಹೆಗ್ಡೆ ನಿರೂಪಿಸಿದರು. ರೋಟರಿ ಕಾರ್ಯದರ್ಶಿ ಈವನ್ ಜ್ಯೂಡ್ ಡಿಸೋಜ ವಂದಿಸಿದರು.ಆರಂಭದಲ್ಲಿ ಹಿರಿಯ ಸಾಹಿತಿ ಪಾಂಗಾಳ ಬಾಬು ಕೊರಗ ನೇತೃತ್ವದ ನವೋದಯ ಕೊರಗರ ಸಾಂಸ್ಕೃತಿಕ ಕಲಾ ತಂಡದಿಂದ ಕಲಾ ಪ್ರಸ್ತುತಿ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ