ಕನ್ನಡಪ್ರಭ ವಾರ್ತೆ ಹಳೇಬೀಡು
ಹಳೇಬೀಡಿನ ಕರ್ನಾಟಕ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ನಡೆದ ಶಾಂತಲಾ ಮಹೋತ್ಸವದ ಸಾನ್ನಿಧ್ಯವನ್ನು ವಹಿಸಿ ಮಾತನಾಡುತ್ತಾ, ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಸೇರಿರುವ ಹಳೇಬೀಡು ಇನ್ನೂ ಹಾಳು ಬೀಡಾಗಿ ಇರುವುದು ಬೇಸರ ವಿಚಾರವಾಗಿದೆ. ಶಾಂತಲಾ ಮಹೋತ್ಸವದಂಥ ಸುಂದರ ಕಾರ್ಯಕ್ರಮಕ್ಕೆ ಸ್ಥಳೀಯ ಜನತೆ ಆಸಕ್ತಿ ತೋರದೇ ಇರುವುದು ಬೇಸರ ವಿಚಾರವಾಗಿದೆ. ಹಳೇಬೀಡಿಗೆ ಅಂದಿನ ರಾಜ ಮಹಾರಾಜರು ಕೊಟ್ಟಂತ ಇತಿಹಾಸಕ್ಕೆ ಇಂದು ಹಳೇಬೀಡು ಉಳಿದಿದೆ. ಇಲ್ಲದಿದ್ದರೆ ಭೂಪಟದಲ್ಲಿ ಹಳೇಬೀಡು ಎನ್ನುವ ಹೆಸರೇ ಇರುತ್ತಿರಲಿಲ್ಲ. ಅಂದಿನ ಕಾಲದಲ್ಲಿ ಚಿನ್ನ, ಬೆಳ್ಳಿ, ವಜ್ರಗಳನ್ನು ರಸ್ತೆ ಬದಿಯಲ್ಲಿ ಇಟ್ಟು ವ್ಯಾಪಾರ ಮಾಡಿದ ಸ್ಥಳದಲ್ಲಿ ಇಂದು ರಸ್ತೆ ಬದಿಯಲ್ಲಿ ಜಲ್ಲಿಕಲ್ಲು, ಗುಂಡಿಗಳು ಇದೆ. ಶಾಂತಲಾ ಮಹೋತ್ಸವ ಕಾರ್ಯಕ್ರಮವು ಪ್ರತಿ ವರ್ಷವೂ ನಡೆದುಕೊಂಡು ಹೋಗಬೇಕು. ಇದು ನಾಡಹಬ್ಬ, ಜಾತ್ರೆ ಕಾರ್ಯಕ್ರಮವಾದರೆ ಎರಡು ಅಥವಾ ಮೂರು ವರ್ಷಗಳಲ್ಲಿ ಸರ್ಕಾರ ಕಣ್ಣು ತೆರೆದು ಅವರೇ ಸರ್ಕಾರದಿಂದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು ಈ ವೇದಿಕೆಯಲ್ಲಿ ಬಂದು ಕಾರ್ಯಕ್ರಮ ನಡೆಸುವ ಹಾಗೆ ನಾವು ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ ಗ್ರಾನೆಟ್ ರಾಜಶೇಖರ್ ಮಾತನಾಡುತ್ತಾ, ಕರ್ನಾಟಕ ರಾಜ್ಯದಲ್ಲಿ ಹಲವಾರು ಮಹೋತ್ಸವಗಳು ನಡೆಯುತ್ತಲೇ ಬಂದಿದೆ. ಆದರೆ ಹಳೇಬೀಡು ಹೊಯ್ಸಳ ಮಹೋತ್ಸವದ ಬಗ್ಗೆ ಬೇಸರ ಏಕೆ? ಮುಂದಿನ ದಿನಗಳಲ್ಲಿ ಶಾಂತಲಾ ಮಹೋತ್ಸವದೊಂದಿಗೆ ಹೊಯ್ಸಳ ಮಹೋತ್ಸವ ನಡೆಯಲೇಬೇಕು. ಅದರ ಬಗ್ಗೆ ನಮ್ಮ ಹೋರಾಟ ಸದಾ ಇದ್ದೇ ಇರುತ್ತದೆ. ಹಾಗಾಗಿ ಜನತೆ ಇದಕ್ಕೆ ಸಹಕಾರ ನೀಡಿ ಆಳ್ವಸ್ ಕಾರ್ಯಕ್ರಮಗಳು ಕರೆಸಿ ಮಾಡುತ್ತಿರುವುದು ಸಂತೋಷದ ವಿಚಾರ. ಈ ವೇದಿಕೆ ಸ್ಥಳಿಯ ಕಾರ್ಯಕ್ರಮ ಅದ್ಭುತವಾಗಿ ಮೂಡಿಬಂದಿದೆ ಎಂದು ತಿಳಿಸಿದರು.ಶಾಂತಲಾ ಮಹೋತ್ಸವದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ, ಶಾಂತಲಾ ಮಹೋತ್ಸವ ಸಮಿತಿಯ ಅಧ್ಯಕ್ಷ ಕೆ. ಎಸ್. ಲಿಂಗೇಶ್ ಮಾತನಾಡುತ್ತ, ಹಳೇಬೀಡಿನಲ್ಲಿ ಸರ್ಕಾರ ಹೊಯ್ಸಳ ಮಹೋತ್ಸವ ಮಾಡದಿದ್ದರೂ ಸ್ಥಳೀಯ ಜನತೆ ಸಹಕಾರದಿಂದ ಶಾಂತಲಾ ಮಹೋತ್ಸವ ಮಾಡೇ ಮಾಡುತ್ತವೆ. ನನ್ನ ಐದು ವರ್ಷ ಶಾಸಕ ಅವಧಿಯಲ್ಲಿ ಸರ್ಕಾರದಲ್ಲಿ ಹಲವಾರು ತೊಂದರೆಗಳು ಬಂದಿತ್ತು. ಹಲವು ತೊಂದರೆ ಆಗಿದ್ದ ಮಹೋತ್ಸವಕ್ಕೆ ಮನ್ನಣೆ ಸಿಗಲಿಲ್ಲ. ಸ್ಥಳೀಯ ಶಾಸಕ ಎಚ್.ಕೆ.ಸುರೇಶ್ ಕೂಡ ಈ ಬಗ್ಗೆ ಪ್ರಯತ್ನ ಮಾಡಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಮಧು, ಉಪಾಧ್ಯಕ್ಷೆ ಸುಮವೆಂಕಟೇಶ್, ಹಾಗೂ ಗ್ರಾಮ ಪಂಚಾಯಿತಿ ಎಲ್ಲಾ ಸದಸ್ಯರು, ರೈತ ಮುಖಂಡರಾದ ಕೆ ಪಿ ಕುಮಾರ್, ಗಡಿ ಕುಮಾರ್, ಸೋಮಣ್ಣ, ಸಹಕಾರ ಸಂಘದ ಅಧ್ಯಕ್ಷ ಹುಲಿಗೌಡ, ಕೆಪಿಎಸ್ ಶಾಲೆ ಉಪಪ್ರಾಂಶುಪಾಲರಾದ ಮೋಹನ ರಾಜ, ವೀರಶೈವ ಸಂಘದ ಅಧ್ಯಕ ಎ. ಎಸ್ ಬಸವರಾಜು, ಶಾಂತಲಾ ಮಹೋತ್ಸವ ಸಮಿತಿಯ ಕಾರ್ಯದರ್ಶಿ ಡಾ. ಎಂ.ಸಿ. ಕುಮಾರ್, ಗಂಗೂರು ಶಿವಕುಮಾರ್, ನಿ.ಇ. ತಿಮ್ಮೆಗೌಡ, ಎಲ್.ಐ.ಸಿ ಚಂದ್ರಶೇಖರ್ ಹಾಗೂ ಸಮಿತಿಯ ಸದಸ್ಯರು ಹಾಜರಿದ್ದರು.