ಹೊಸಕೋಟೆ: ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ವೈಜ್ಞಾನಿಕ ಮನೋಭಾವದ ಜೊತೆಗೆ ವಿಜ್ಞಾನ ವಿಷಯದ ಬಗ್ಗೆ ಆಸಕ್ತಿ ಹೆಚ್ಚಿಸಲು ವಿಜ್ಞಾನ ವಸ್ತು ಪ್ರದರ್ಶನ ಪೂರಕವಾಗಲಿದೆ ಎಂದು ನರ್ಚರ್ ಇಂಟರ್ ನ್ಯಾಷನಲ್ ಶಾಲೆ ಪ್ರಾಂಶುಪಾಲೆ ಹೇಮಮಾಲಿನಿ ಕೃಷ್ಣಸ್ವಾಮಿ ತಿಳಿಸಿದರು.
ಶಾಲೆಯ ಅಧ್ಯಕ್ಷ ಇಶ್ರಕ್ ಅಹಮದ್ ಮಾತನಾಡಿ, ಪ್ರಸ್ತುತ ಕಾಲಘಟ್ಟದಲ್ಲಿ ವಿಜ್ಞಾನಕ್ಕೆ ಸಾಕಷ್ಟು ಮಹತ್ವವಿದ್ದು ಸಹಸ್ರಾರು ವಿಜ್ಞಾನಿಗಳು ಆವಿಷ್ಕಾರಗಳನ್ನು ಮಾಡುತ್ತಿದ್ದಾರೆ. ಮಕ್ಕಳಲ್ಲಿ ಸಹ ಆವಿಷ್ಕಾರ ಮನೋಭಾವ ಉಂಟು ಮಾಡುವ ಸಲುವಾಗಿ ವಿಜ್ಞಾನ ವಸ್ತುಪ್ರದರ್ಶನ ಆಯೋಜಿಸಲಾಗಿದೆ. ಮಕ್ಕಳು ಪೋಷಕರ, ಶಾಲಾ ಶಿಕ್ಷಕರ ಸಹಕಾರ ಪಡೆದು ಹಲವಾರು ವೈಜ್ಞಾನಿಕ ಆವಿಷ್ಕಾರ ಮಾಡಿದ್ದಾರೆ. ಈ ಆವಿಷ್ಕಾರ ಮಕ್ಕಳು ಮುಂದಿನ ಶೈಕ್ಷಣಿಕ ಪ್ರಗತಿಗೆ ಪೂರಕವಾಗಲಿದೆ ಎಂದರು.
ನರ್ಚರ್ ಇಂಟರ್ ನ್ಯಾಷನಲ್ ಶಾಲೆ ಸಂಸ್ಥಾಪಕ ಸಂಜೀವ್ ಕರ್, ಶಾಲೆಯ ಅಧ್ಯಕ್ಷ ಇಶ್ರಕ್ ಅಹಮದ್ ಸೇರಿದಂತೆ ಹಲವಾರು ಮುಖಂಡರು ಹಾಜರಿದ್ದರು.ಫೋಟೋ: 23 ಹೆಚ್‌ಎಸ್‌ಕೆ 1
ಹೊಸಕೋಟೆ ತಾಲೂಕಿನ ಸಮೇತನಹಳ್ಳಿಯಲ್ಲಿರುವ ನರ್ಚರ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಅರಿಸ್ಟಾಟಲ್ ವಿಜ್ಞಾನ ವಸ್ತು ಪ್ರದರ್ಶನವನ್ನು ಪ್ರಾಂಶುಪಾಲೆ ಹೇಮಮಾಲಿನಿ ಕೃಷ್ಣಸ್ವಾಮಿ ಉದ್ಘಾಟಿಸಿದರು.