ಶಾಂತಳ್ಳಿಯ ಕೃಷಿ ಪತ್ತಿನ ಸಹಕಾರ ಸಂಘ ಚುನಾವಣೆ: ಕಾಂಗ್ರೆಸ್ ಬೆಂಬಲಿತರಿಗೆ ಏಳು ಸ್ಥಾನ

KannadaprabhaNewsNetwork | Published : Dec 29, 2024 1:15 AM

ಸಾರಾಂಶ

ಶಾಂತಳ್ಳಿ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಬೆಂಬಲಿತ ಜಯೇಂದ್ರ ನೇತೃತ್ವದ ತಂಡ 7 ಸ್ಥಾನಗಳನ್ನು ಗಳಿಸಿದೆ.

ಕನ್ನಡಪ್ರಭ ವಾರ್ತೆ ಸೋಮವಾರಪೇಟೆ

ಶಾಂತಳ್ಳಿಯ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಜಯೇಂದ್ರ ನೇತೃತ್ವದ ತಂಡ 7 ಸ್ಥಾನಗಳನ್ನು ಗಳಿಸಿದೆ.

ಬಿಜೆಪಿ ಬೆಂಬಲಿತರು 5 ಸ್ಥಾನಗಳನ್ನು ಹಾಗೂ ಒಬ್ಬರು ಪಕ್ಷೇತರ ಅಭ್ಯರ್ಥಿ ಗೆಲುವು ದಾಖಲಿಸಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ಇಲ್ಲಿ ಬಿಜೆಪಿ ಬೆಂಬಲಿತರು ಅಧಿಕಾರ ನಡೆಸುತ್ತಿದ್ದರು.

ಸಾಲಗಾರರ ಸಾಮಾನ್ಯ ಕ್ಷೇತ್ರದಲ್ಲಿ ಜಿ.ಎಚ್. ರಾಜೇಶ್, ಯು.ಎಂ. ಬಸವರಾಜು, ಡಿ.ಎಸ್. ಲಿಂಗರಾಜು, ಬಿ.ಎ. ಧರ್ಮಪ್ಪ, ಎಚ್.ಕೆ. ತ್ರಿಶೂಲ್, ಕೆ.ಆರ್. ಶಿವಕುಮಾರ್ ಹಾಗೂ ಕೆ.ಜೆ. ತಮ್ಮಯ್ಯ ಆಯ್ಕೆಯಾದರು. ಮಹಿಳಾ ಕ್ಷೇತ್ರದಲ್ಲಿ ಬಿ.ಎನ್. ಅನಿತಾ, ಹಿಂದುಳಿದ ವರ್ಗ ಎ ಕ್ಷೇತ್ರದಲ್ಲಿ ಬಿ.ಪಿ. ಪರಮೇಶ್, ಪ್ರವರ್ಗ ಎ ಕ್ಷೇತ್ರದಲ್ಲಿ ಎಸ್.ಎಂ. ನಿಶಾಂತ್, ಪರಿಶಿಷ್ಟ ಜಾತಿ ಕ್ಷೇತ್ರದಲ್ಲಿ ಬಿ.ಈ. ಜಯೇಂದ್ರ, ಪರಿಶಿಷ್ಟ ಜಾತಿ ಪಂಗಡದ ಕ್ಷೇತ್ರದಲ್ಲಿ ಪಿ.ಎಸ್. ಅರುಣ್ ಹಾಗೂ ಸಾಲಗಾರರಲ್ಲದ ಕ್ಷೇತ್ರದಲ್ಲಿ ಕೆ.ಪಿ. ಕುಮಾರ್ ಆಯ್ಕೆಯಾದರು.

-----------------------------

ಕೊಡಗಿನ ಯೋಧನ ಆರೋಗ್ಯದ ಮಾಹಿತಿ ಪಡೆದ ಶಾಸಕ ಮಂತರ್ ಗೌಡ

ಕನ್ನಡಪ್ರಭ ವಾರ್ತೆ ಮಡಿಕೇರಿ

ಜಮ್ಮು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಡಿ.24ರ ಸಂಜೆ ಸೇನಾ ವಾಹನ ಪ್ರಪಾತಕ್ಕೆ ಉರುಳಿದ ದುರಂತದಲ್ಲಿ ಸೋಮವಾರಪೇಟೆ ತಾಲೂಕು ಆಲೂರು ಸಿದ್ದಾಪುರದ ಯೋಧ ದಿವಿನ್ ಗಂಭೀರವಾಗಿ ಗಾಯಗೊಂಡು ಸೇನಾ ಆಸ್ಪತ್ರೆಯಲ್ಲಿ ಕೋಮಾ ಸ್ಥಿತಿಯಲ್ಲಿರುವ ಹಿನ್ನೆಲೆಯಲ್ಲಿ ಅವರ ಆರೋಗ್ಯದ ಬಗ್ಗೆ ಶಾಸಕ ಡಾ ಮಂತರ್ ಗೌಡ ಅವರು ಸೇನಾ ವೈದ್ಯರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ.

ಸೋಮವಾರಪೇಟೆ ತಾಲೂಕಿನ ಆಲೂರು ಸಿದ್ದಾಪುರದ ನಿವಾಸಿ ದಿವಂಗತ ಪ್ರಕಾಶ್ ಹಾಗೂ ಜಯ ದಂಪತಿ ಪುತ್ರ ದಿವಿನ್ (28)

ಅವರು ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಅಪಘಾತಕ್ಕೆ ಸಿಲುಕಿ ಚಿಂತಾಜನಕರಾಗಿ ಶ್ರೀನಗರ ಸೇನಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಈ ಬಗ್ಗೆ ಭಾರತೀಯ ಸೇನೆಯಿಂದ ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದ್ದು, ದಿವಿನ್ ತಾಯಿ ಜಯ ಅವರು ಗುರುವಾರ ಸಂಜೆ ಶ್ರೀನಗರಕ್ಕೆ ತೆರಳಿದ್ದಾರೆ. ಶಾಸಕ ಡಾ ಮಂತರ್ ಗೌಡ ಅವರು ಸೇನಾ ವೈದ್ಯರಿಗೆ ಕರೆ ಮಾಡಿದಾಗ ಯೋಧನಿಗೆ ಚಿಕಿತ್ಸೆ ನೀಡುತ್ತಿರುವ ಶಿವಮೊಗ್ಗ ಮೂಲದ ಸೇನಾ ವೈದ್ಯರು ದಿವಿನ್ ರವರ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ.

ದಿವಿನ್ ತನ್ನ ತಾಯಿಗೆ ಏಕೈಕ ಆಸರೆಯಾಗಿದ್ದು, 10 ವರ್ಷದ ಹಿಂದೆ ಸೇನೆಗೆ ಸೇರಿದ್ದರು. ಇತ್ತೀಚೆಗೆ ನಿಶ್ಚಿತಾರ್ಥ ಕೂಡ ನೆರವೇರಿದ್ದು, 2025ರ ಫೆಬ್ರವರಿಯಲ್ಲಿ ವಿವಾಹ ನಿಶ್ಚಯವಾಗಿತ್ತು. ಆಮಂತ್ರಣ ಪತ್ರ ಕೂಡ ಮುದ್ರಣಗೊಂಡಿದೆ.

Share this article