ಕನ್ನಡಪ್ರಭ ವಾರ್ತೆ ಖಾನಾಪುರ
ಶಾಂತಿನಿಕೇತನ ಶಾಲೆಯಲ್ಲಿ ಕಲಿತ ಅಸಂಖ್ಯಾತ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದು ಪ್ರತಿಭಾವಂತರಾಗಿ ಬೆಳೆದಿದ್ದಾರೆ. ದೇಶದ ವಿವಿಧೆಡೆ ಮತ್ತು ವಿದೇಶಗಳಲ್ಲಿ ಸೇವೆ ಸಲ್ಲಿಸುತ್ತ ಬದುಕು ರೂಪಿಸಿಕೊಂಡಿದ್ದಾರೆ ಎಂದು ತೋಪಿನಕಟ್ಟಿ ಶ್ರೀ ಮಹಾಲಕ್ಷ್ಮೀ ಗ್ರೂಪ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಹಾಗೂ ಶಾಸಕ ವಿಠ್ಠಲ ಹಲಗೇಕರ ಹೇಳಿದರು.ಪಟ್ಟಣದ ಪಾರಿಶ್ವಾಡ ರಸ್ತೆಯ ಶಾಂತಿನಿಕೇತನ ಪಬ್ಲಿಕ್ ಶಾಲೆಯ ಸಭಾಗೃಹದಲ್ಲಿ ಮಂಗಳವಾರ ಸ್ಥಳೀಯ ತೋಪಿನಕಟ್ಟಿ ಶ್ರೀ ಮಹಾಲಕ್ಷ್ಮೀ ಗ್ರೂಪ್ ಶಿಕ್ಷಣ ಸಂಸ್ಥೆಯ 15ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಚಾಲನೆ ನೀಡಿ ಮಾತನಾಡಿದ ಅವರು, 2011ರಲ್ಲಿ ತಾವು ತಮ್ಮ ಸಮಾನಮನಸ್ಕ ಸ್ನೇಹಿತರ ನೆರವಿನೊಂದಿಗೆ ನೆಟ್ಟ ಪುಟ್ಟ ಸಸಿ ಈಗ ಪೋಷಕರ, ಪಾಲಕರ ಸಹಕಾರದಿಂದ ಹೆಮ್ಮರವಾಗಿ ಬೆಳೆದಿದೆ. ಈ ವರ್ಷ ನಮ್ಮ ಶಾಲೆ ಮತ್ತು ಕಾಲೇಜುಗಳಿಗೆ ಐಎಸ್‌ಒ 9001: 2015 ಮಾನ್ಯತೆ ಲಭಿಸಿದೆ. ತೋಪಿನಕಟ್ಟಿ ಶ್ರೀ ಮಹಾಲಕ್ಷ್ಮೀ ಗ್ರೂಪ್ ಶಿಕ್ಷಣ ಸಂಸ್ಥೆಯ ವತಿಯಿಂದ ಮುಂದಿನ ದಿನಗಳಲ್ಲಿ ವೃತ್ತಿಪರ ಶಿಕ್ಷಣ ಕೇಂದ್ರಗಳನ್ನು ಆರಂಭಿಸುವ ಉದ್ದೇಶವಿದೆ ಎಂದರು.ಬೆಳಗಾವಿ ಶಿಕ್ಷಕರ ಶಿಕ್ಷಣ ಸಂಸ್ಥೆಯ ನಿವೃತ್ತ ಪ್ರಾಧ್ಯಾಪಕ ಎನ್.ಕೆ.ಕಾಳೆ ಮಾತನಾಡಿ, ಗಡಿಭಾಗದಲ್ಲಿ ಬಡಮಕ್ಕಳಿಗೆ ಶಿಕ್ಷಣ ಸೇವೆಯನ್ನು ನೀಡುತ್ತಿರುವ ಶಾಂತಿನಿಕೇತನ ಶಾಲೆ ಉತ್ತಮ ಬೋಧಕವರ್ಗ, ಬೋಧನೆಗೆ ಪೂರಕ ವಾತಾವರಣ ಮತ್ತು ಅತ್ಯಾಧುನಿಕ ಅವಶ್ಯಕ ಸೌಕರ್ಯಗಳನ್ನು ಹೊಂದಿದೆ. ಶಾಸಕ ಹಲಗೇಕರ ಅವರ ದೂರದೃಷ್ಟಿತ್ವದ ಈ ಶಾಲೆಯಿಂದ ಪ್ರತಿ ವರ್ಷ ಯುವ ಪ್ರತಿಭೆಗಳು ಅನಾವರಣಗೊಳ್ಳುತ್ತಿವೆ ಎಂದು ಶ್ಲಾಘಿಸಿದರು. ಈ ಸಂದರ್ಭದಲ್ಲಿ ತೋಪಿನಕಟ್ಟಿ ಶ್ರೀ ಮಹಾಲಕ್ಷ್ಮೀ ಗ್ರೂಪ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ರಾಜೇಂದ್ರ ಪಾಟೀಲ, ಪಿಯು ಮತ್ತು ಪದವಿ ಕಾಲೇಜುಗಳ ಅಧ್ಯಕ್ಷ ಗುಂಡು ಮಜುಕರ, ನಿರ್ದೇಶಕರಾದ ಚಾಂಗಪ್ಪ ನಿಲಜಕರ, ಯಲ್ಲಪ್ಪ ತಿರವೀರ, ಮಹಾದೇವ ಬಾಂದಿವಾಡಕರ, ರಾಜಾರಾಮ ಹಲಗೇಕರ, ವಿಠ್ಠಲ ಕರಂಬಳಕರ, ಶಂಕರ ಶಹಾಪುರಕರ, ಬಾಳಗೌಡ ಪಾಟೀಲ, ಬಳಿರಾಮ ಪಾಟೀಲ, ಪ್ರಾಚಾರ್ಯೆ ಸುವರ್ಣಾ ನಿಲಜಕರ, ಪಿ.ಆರ್.ಒ ಮನೀಷಾ ಹಲಗೇಕರ ಸೇರಿದಂತೆ ಶಾಂತಿನಿಕೇತನ ಸ್ಕೂಲ್ ಮತ್ತು ಪಿ.ಯು ಕಾಲೇಜ್ ಬೋಧಕರು, ಬೋಧಕೇತರ ಸಿಬ್ಬಂದಿ, ಆಡಳಿತ ಮಂಡಳಿಯ ಪದಾಧಿಕಾರಿಗಳು, ಪಾಲಕರು, ವಿದ್ಯಾರ್ಥಿಗಳು ಇದ್ದರು.2011ರಲ್ಲಿ ತಾವು ತಮ್ಮ ಸಮಾನಮನಸ್ಕ ಸ್ನೇಹಿತರ ನೆರವಿನೊಂದಿಗೆ ನೆಟ್ಟ ಪುಟ್ಟ ಸಸಿ ಈಗ ಪೋಷಕರ, ಪಾಲಕರ ಸಹಕಾರದಿಂದ ಹೆಮ್ಮರವಾಗಿ ಬೆಳೆದಿದೆ. ಈ ವರ್ಷ ನಮ್ಮ ಶಾಲೆ ಮತ್ತು ಕಾಲೇಜುಗಳಿಗೆ ಐಎಸ್‌ಒ 9001: 2015 ಮಾನ್ಯತೆ ಲಭಿಸಿದೆ. ತೋಪಿನಕಟ್ಟಿ ಶ್ರೀ ಮಹಾಲಕ್ಷ್ಮೀ ಗ್ರೂಪ್ ಶಿಕ್ಷಣ ಸಂಸ್ಥೆಯ ವತಿಯಿಂದ ಮುಂದಿನ ದಿನಗಳಲ್ಲಿ ವೃತ್ತಿಪರ ಶಿಕ್ಷಣ ಕೇಂದ್ರಗಳನ್ನು ಆರಂಭಿಸುವ ಉದ್ದೇಶವಿದೆ.
-ವಿಠ್ಠಲ ಹಲಗೇಕರ, ತೋಪಿನಕಟ್ಟಿ ಶ್ರೀ ಮಹಾಲಕ್ಷ್ಮೀ ಗ್ರೂಪ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಹಾಗೂ ಶಾಸಕರು.