ಶರಣ ಸಂಸ್ಕೃತಿಯ ಚಿಂತಕ ಆರ್‌.ಸಿ. ಹಿರೇಮಠ

KannadaprabhaNewsNetwork |  
Published : Jan 19, 2025, 02:18 AM IST
18ಡಿಡಬ್ಲೂಡಿ2ಕರ್ನಾಟಕ ವಿದ್ಯಾವರ್ಧಕ ಸಂಘವು ದಿ.ಡಾ. ಆರ್.ಸಿ. ಹಿರೇಮಠ ದತ್ತಿ ಅಂಗವಾಗಿ ಆಯೋಜಿಸಿದ್ದ ಉಪನ್ಯಾಸದಲ್ಲಿ ‘ಡಾ. ಆರ್.ಸಿ. ಹಿರೇಮಠರ ಭಾವಚಿತ್ರಕ್ಕೆ ಗೌರವ ಸಲ್ಲಿಸಲಾಯಿತು.  | Kannada Prabha

ಸಾರಾಂಶ

ಡಾ. ಆರ್.ಸಿ. ಹಿರೇಮಠ ತಮ್ಮ ಸ್ವಪ್ರತಿಭೆಯಿಂದಲೇ ಕುಲಪತಿಯಾದವರು. ಬಾಲ್ಯದಲ್ಲಿಯೇ ಪ್ರತಿಭಾನ್ವಿತರಾದ ಅವರು, ಬಡತನದಿಂದ ಬೆಂದು ಕಂತಿ ಭಿಕ್ಷೆ ಬೇಡಿ ವಿದ್ಯೆ ಪಡೆಯಬೇಕಾಯಿತು. ಡಾ. ಡಿ.ಸಿ. ಪಾವಟೆ ಅವರ ಮಾರ್ಗದರ್ಶನದಲ್ಲಿ ಕವಿವಿಯಲ್ಲಿ ಕನ್ನಡ ಅಧ್ಯಯನ ಪೀಠ ಸ್ಥಾಪನೆಗೆ ಅಹರ್ನಿಶಿ ಶ್ರಮಪಟ್ಟರು.

ಧಾರವಾಡ:

ಡಾ. ಆರ್.ಸಿ. ಹಿರೇಮಠ ಕನ್ನಡ ಸಾಹಿತ್ಯ ಲೋಕದ ಯುಗ ಪ್ರವರ್ತಕರು. ಅವರೊಬ್ಬ ಭಾಷಾ ವಿಜ್ಞಾನಿಗಳು. ಶರಣ ಸಂಸ್ಕೃತಿಯ ಚಿಂತಕರೂ ಆಗಿದ್ದರು ಎಂದು ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಬಿ.ಎಸ್. ಕೋಟಿಗೌಡರ ಹೇಳಿದರು.

ಕರ್ನಾಟಕ ವಿದ್ಯಾವರ್ಧಕ ಸಂಘವು ಡಾ. ಆರ್.ಸಿ. ಹಿರೇಮಠ ದತ್ತಿ ಅಂಗವಾಗಿ ಆಯೋಜಿಸಿದ್ದ ಉಪನ್ಯಾಸದಲ್ಲಿ ‘ಡಾ. ಆರ್.ಸಿ. ಹಿರೇಮಠರ ಬದುಕು-ಬರಹ’ ವಿಷಯ ಕುರಿತು ಮಾತನಾಡಿದರು.

ಹಿರೇಮಠ ತಮ್ಮ ಸ್ವಪ್ರತಿಭೆಯಿಂದಲೇ ಕುಲಪತಿಯಾದವರು. ಬಾಲ್ಯದಲ್ಲಿಯೇ ಪ್ರತಿಭಾನ್ವಿತರಾದ ಅವರು, ಬಡತನದಿಂದ ಬೆಂದು ಕಂತಿ ಭಿಕ್ಷೆ ಬೇಡಿ ವಿದ್ಯೆ ಪಡೆಯಬೇಕಾಯಿತು. ಡಾ. ಡಿ. ಸಿ. ಪಾವಟೆ ಅವರ ಮಾರ್ಗದರ್ಶನದಲ್ಲಿ ಕವಿವಿಯಲ್ಲಿ ಕನ್ನಡ ಅಧ್ಯಯನ ಪೀಠ ಸ್ಥಾಪನೆಗೆ ಅಹರ್ನಿಶಿ ಶ್ರಮಪಟ್ಟರು. ವಚನ ಸಾಹಿತ್ಯ ಹಾಗೂ ವೀರಶೈವ ಸಾಹಿತ್ಯದ ಬಗ್ಗೆ ಉತ್ಕೃಷ್ಟ ಗ್ರಂಥ ಸಂಪಾದನೆ ಮಾಡಿದರು. ಕವಿವಿಯ ಕನ್ನಡ ಅಧ್ಯಯನ ಪೀಠದಲ್ಲಿ ಕನ್ನಡ ಸಾಹಿತ್ಯದ ಜೊತೆ ಭಾಷಾ ಶಾಸ್ತ್ರದಂತಹ ಅಧ್ಯಯನಗಳಿಗೆ ಅವಕಾಶ ಕಲ್ಪಿಸಿದರು. ನಾಡಿನ ವಿವಿಧೆಡೆ ಸಂಚರಿಸಿ ವಚನ ಸಾಹಿತ್ಯದ 10 ಸಾವಿರ ಹಸ್ತಪ್ರತಿ ಸಂಗ್ರಹಿಸಿ ಅಧ್ಯಯನಕ್ಕೆ ಅನುಕೂಲಿಸಿದ್ದಾರೆ ಎಂದು ಹೇಳಿದರು.

ಕಾರ್ಯಕಾರಿ ಸಮಿತಿ ಸದಸ್ಯ ವೀರಣ್ಣ ಒಡ್ಡೀನ ಹಾಗೂ ಶಂಕರ ಹಲಗತ್ತಿ ಮಾತನಾಡಿದರು. ಸತೀಶ ತುರಮರಿ ಸ್ವಾಗತಿಸಿದರು. ವಿಶ್ವೇಶ್ವರಿ ಹಿರೇಮಠ ನಿರ್ವಹಿಸಿ ವಂದಿಸಿದರು. ದತ್ತಿ ದಾನಿ ಡಾ. ಶಶಿಕಲಾ ಹಿರೇಮಠ, ಬಿ.ಎಸ್. ಶಿರೋಳ, ಶಿವಾನಂದ ಹೂಗಾರ, ಡಾ. ಶ್ರೀಧರ ಗಸ್ತಿ, ಕೆ.ಎಂ. ಅಂಗಡಿ, ಮಹಾಂತೇಶ ನರೇಗಲ್, ಅಂಬರೀಶ ರಾಠೋಡ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೇ.11ರಷ್ಟು ಟೊಯೋಟಾ ಕಾರುಗಳು ರಾಜ್ಯದಲ್ಲೇ ಸೇಲ್‌
ರಾಜ್ಯದಲ್ಲಿ 2 ದಿನ ಮೋಡಕವಿದ ವಾತಾವರಣ, ಮಳೆ