ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದ ಶರಣ ಮಾಚಿದೇವ: ಎಡಿಸಿ ಶೀಲವಂತ

KannadaprabhaNewsNetwork |  
Published : Feb 02, 2026, 02:00 AM IST
ಕ್ಯಾಪ್ಷನ1ಕೆಡಿವಿಜಿ32 ದಾವಣಗೆರೆಯಲ್ಲಿ ಜಿಲ್ಲಾಡಳಿತದಿಂದ ನಡೆದ ಶ್ರೀ ಮಡಿವಾಳ ಮಾಚಿದೇವರ ಜಯಂತಿಯನ್ನು ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ ಮಾಚಿದೇವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು. | Kannada Prabha

ಸಾರಾಂಶ

ಕಾಯಕ ನಿಷ್ಠೆ ಮೂಲಕ ಭಕ್ತಿಯೊಂದಿಗೆ ಸಮಾನತೆ, ಸಮಸಮಾಜ, ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಮಾಡಿದ ಶ್ರೀ ಮಡಿವಾಳ ಮಾಚಿದೇವ ಅವರು ಮಹಾನ್ ಶಿವಶರಣ ಎಂದು ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ ಹೇಳಿದ್ದಾರೆ.

- ಜಿಲ್ಲಾಡಳಿತದಿಂದ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮ

- - -

ದಾವಣಗೆರೆ: ಕಾಯಕ ನಿಷ್ಠೆ ಮೂಲಕ ಭಕ್ತಿಯೊಂದಿಗೆ ಸಮಾನತೆ, ಸಮಸಮಾಜ, ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಮಾಡಿದ ಶ್ರೀ ಮಡಿವಾಳ ಮಾಚಿದೇವ ಅವರು ಮಹಾನ್ ಶಿವಶರಣ ಎಂದು ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ ಹೇಳಿದರು.

ನಗರದ ಜಿಲ್ಲಾಡಳಿತ ಭವನದಲ್ಲಿ ಭಾನುವಾರ ಜಿಲ್ಲಾಡಳಿತದಿಂದ ಆಯೋಜಿಲಾಗಿದ್ದ ವೀರ ಗಣಾಚಾರಿ, ವಚನಕಾರ ಶ್ರೀ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮದಲ್ಲಿ ಮಾಚಿದೇವ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು.

ಶ್ರೀ ಮಡಿವಾಳ ಮಾಚಿದೇವರು 12ನೇ ಶತಮಾನದ ಶರಣರಲ್ಲಿ ಪ್ರಮುಖ ಶರಣರು, ವೀರ ಗಣಾಚಾರಿ ಅಂದರೆ ಯೋಧ, ವಚನಕಾರರು ಹಾಗೂ ಬಸವಣ್ಣನವರ ಸಮಕಾಲೀನರಾಗಿದ್ದರು. ಸಾಮಾಜಿಕ, ಧಾರ್ಮಿಕ ಚಳವಳಿಯಲ್ಲಿ ಅಮರ ಸ್ಥಾನ ಪಡೆದಿದ್ದಾರೆ. ಅವರ ಜೀವನ ಕಾಯಕ, ದಾಸೋಹ, ಭಕ್ತಿಯ ಸಂದೇಶವನ್ನು ನೀಡುತ್ತದೆ ಎಂದು ಹೇಳಿದರು.

ದಾವಣಗೆರೆ ಜಿಲ್ಲಾ ಶ್ರೀ ಮಡಿವಾಳ ಮಾಚಿದೇವ ಸಂಘ ಪ್ರಧಾನ ಕಾರ್ಯದರ್ಶಿ ಓಂಕಾರಪ್ಪ ಶ್ರೀ ಮಡಿವಾಳ ಮಾಚಿದೇವರ ಜೀವನ ಚರಿತ್ರೆ ವಿವರಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಚಂದ್ರ, ದಾವಣಗೆರೆ ಜಿಲ್ಲಾ ವರದಿಗಾರರ ಕೂಟದ ಪ್ರದಾನ ಕಾರ್ಯದರ್ಶಿ ಎಂ.ವೈ. ಸತೀಶ್, ಜಿಲ್ಲಾ ಶ್ರೀ ಮಡಿವಾಳ ಮಾಚಿದೇವ ಸಂಘದ ಪದಾಧಿಕಾರಿಗಳಾದ ಎಚ್.ಜಿ. ಉಮೇಶ್ ಆವರಗೆರೆ, ಆರ್.ಎನ್.ಧನಂಜಯ, ಸುರೇಶ ಕೋಗುಂಡೆ, ಸುಭಾಷ್ ಮಡಿವಾಳ, ಪಿ.ಮಂಜುನಾಥ್, ರವಿ ಚಿಕ್ಕಣ್ಣ, ಬೊಮ್ಮಣ್ಣ, ಅಜಯ್, ಗೋಪಾಲ್, ಅಡಿವೆಪ್ಪ, ಎಂ.ರವಿ, ಎಚ್.ಬಿ.ಬಸವರಾಜ, ಅಂಜಿನಪ್ಪ ಪೂಜಾರ್, ಶ್ರೀನಿವಾಸ ಪೂಜಾರ್, ಲೋಕೇಶ್, ಫಕ್ಕೀರಪ್ಪ, ಹನುಮಂತಪ್ಪ, ನಾಗಮ್ಮ, ಮಂಗಳಮ್ಮ, ಪಿ.ಪುಷ್ಪಾ, ರಾಧಾ ಮಾರುತಿ, ರಾಧಾ ಭರತ್, ಚಂದ್ರಮ್ಮ, ಅನಿತಾ, ಶಕುಂತಲಮ್ಮ ಇತರರು ಇದ್ದರು.

- - -

-1ಕೆಡಿವಿಜಿ32:

ಜಿಲ್ಲಾಡಳಿತದಿಂದ ನಡೆದ ಶ್ರೀ ಮಡಿವಾಳ ಮಾಚಿದೇವ ಜಯಂತಿಯನ್ನು ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ ಮಾಚಿದೇವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾಂಗ್ರೆಸ್‌ನವರಿಗೆ ಬಜೆಟ್ ಅರ್ಥವಾಗಲ್ಲ: ಜೋಶಿ ಚಾಟಿ
ರಾಜಕ್ಕೆ ಕೇಂದ್ರ ಬಜೆಟ್ಟಲ್ಲಿ ಚೊಂಬು : ಸಿಎಂ ಸಿಡಿಮಿಡಿ