ಕೇಂದ್ರ ಸರ್ಕಾರ ಕನ್ನಡಿಗರಿಗೆ ಅಕ್ಷರಶಃ ನಾಮ ಇಡುತ್ತಿದೆ. ಇದರಲ್ಲಿ ಅನುಮಾನವೇ ಇಲ್ಲ. ರಾಜ್ಯಕ್ಕೆ ವಿಶೇಷ ಯೋಜನೆಗಳನ್ನು ಘೋಷಿಸಿಲ್ಲ ಎಂಬುದು ಒಂದೆಡೆಯಾದರೆ, ಕೇಂದ್ರ ಸರ್ಕಾರದ ಯೋಜನೆಗಳಲ್ಲೂ ಸರಿಯಾಗಿ ಅನುದಾನ ನೀಡುತ್ತಿಲ್ಲ ಎಂದು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಪ್ರತಿಕ್ರಿಯಿಸಿದ್ದಾರೆ.
ದಾವಣಗೆರೆ: ಕೇಂದ್ರ ಸರ್ಕಾರ ಕನ್ನಡಿಗರಿಗೆ ಅಕ್ಷರಶಃ ನಾಮ ಇಡುತ್ತಿದೆ. ಇದರಲ್ಲಿ ಅನುಮಾನವೇ ಇಲ್ಲ. ರಾಜ್ಯಕ್ಕೆ ವಿಶೇಷ ಯೋಜನೆಗಳನ್ನು ಘೋಷಿಸಿಲ್ಲ ಎಂಬುದು ಒಂದೆಡೆಯಾದರೆ, ಕೇಂದ್ರ ಸರ್ಕಾರದ ಯೋಜನೆಗಳಲ್ಲೂ ಸರಿಯಾಗಿ ಅನುದಾನ ನೀಡುತ್ತಿಲ್ಲ ಎಂದು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಪ್ರತಿಕ್ರಿಯಿಸಿದ್ದಾರೆ.
ಕೇಂದ್ರ ಸಚಿವೆ ನಿರ್ಮಲಾ ಸೀತರಾಮನ್ ಅವರು 5 ವರ್ಷಗಳಿಂದ ಕರ್ನಾಟಕಕ್ಕೆ ದ್ರೋಹ ಬಗೆದಿದ್ದಾರೆ. ಕೇಂದ್ರ ಸರ್ಕಾರ ಕರ್ನಾಟಕದ ವಿರುದ್ಧ ವಿಷಕಾರುತ್ತಿದೆ. ಕೇಂದ್ರ ಸರ್ಕಾರದ ಯೋಜನೆಗಳಲ್ಲೂ ರಾಜ್ಯ ಸರ್ಕಾರ 50% ಗಿಂತ ಹೆಚ್ಚು ಅನುದಾನ ಭರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿಸಿದ್ದಾರೆ.
15ನೇ ಹಣಕಾಸು ಆಯೋಗದಲ್ಲಿ ಇದನ್ನು 3.64%ಗೆ ಇಳಿಸಲಾಗಿತ್ತು. ಇದರ ಪರಿಣಾಮ ಕರ್ನಾಟಕಕ್ಕೆ ತೆರಿಗೆ ಪಾಲಿನಲ್ಲಿ ₹80 ಸಾವಿರ ಕೋಟಿ ನಷ್ಟವಾಗಿದೆ. ಕೇಂದ್ರ ಸರ್ಕಾರದ ಯೋಜನೆಗಳಲ್ಲಿ ಕರ್ನಾಟಕದ ಪಾಲು 50% ಗಿಂತ ಹೆಚ್ಚಾಗಿದೆ. ಕೇಂದ್ರದ ಯೋಜನೆಗಳಿಗೆ ಕೇಂದ್ರ ಸರ್ಕಾರ ಅನುದಾನ ನೀಡದ ಕಾರಣ ಕರ್ನಾಟಕಕ್ಕೆ ₹23,402 ಕೋಟಿ ಹೆಚ್ಚಿನ ಹೊರೆಬಿದ್ದಿದೆ ಎಂದು ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ಸರ್ಕಾರದ ಬಜೆಟ್‌ನಲ್ಲಿ ಕೇಂದ್ರದ ಪಾಲು ಕೇವಲ 16% ಮಾತ್ರ. ಆದರೆ, ಬಿಜೆಪಿ ಆಡಳಿತ ರಾಜ್ಯಗಳಾದ ಬಿಹಾರಕ್ಕೆ 74%, ಉತ್ತರ ಪ್ರದೇಶಕ್ಕೆ 52%, ಮಹಾರಾಷ್ಟ್ರಕ್ಕೆ 29% ಕೇಂದ್ರ ಸರ್ಕಾರಕೊಡುಗೆ ನೀಡಿದೆ. ಇದು ಕರ್ನಾಟಕದ ಮೇಲೆ ಕೇಂದ್ರ ಸರ್ಕಾರದತೆರಿಗೆ ದಬ್ಬಾಳಿಕೆಯಲ್ಲವೇ ಎಂದು ಸಚಿವರು ಕಿಡಿಕಾರಿದ್ದಾರೆ. -1ಕೆಡಿವಿಜಿ48: ಎಸ್.ಎಸ್.ಮಲ್ಲಿಕಾರ್ಜುನ
- - -
(ಬಾಕ್ಸ್)
* ರಾಜಯೋಗ, ಶ್ರೇಷ್ಠ ದಿನದ ಬಜೆಟ್‌ಗೆ ಸ್ವಾಗತ: ಹರೀಶ್
ದಾವಣಗೆರೆ: ಇಂದು ರಾಜಯೋಗದ ದಿನ, ಧಾರ್ಮಿಕವಾಗಿಯೂ ಶ್ರೇಷ್ಠ ದಿನ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಬಜೆಟ್ ಅನ್ನು ಇಡೀ ವಿಶ್ವವೇ ಕುತೂಹಲದಿಂದ ಗಮನಿಸುತ್ತಿದೆ. ದೀರ್ಘ ಕಾಲದ ಅಭಿವೃದ್ಧಿ ಗುಣವಿರುವ ಬಜೆಟ್ ಇದಾಗಿದ್ದು, ಕೇಂದ್ರದ ಬಜೆಟ್ ಸ್ವಾಗತಿಸುತ್ತೇನೆ ಎಂದು ಹರಿಹರ ಬಿಜೆಪಿ ಶಾಸಕ ಬಿ.ಪಿ.ಹರೀಶ ಹೇಳಿದರು.
ಮೋದಿ ನಾಯಕತ್ವದ ಭಾರತದ ಬಜೆಟ್ ವಿಶ್ವದ ಗಮನ ಸೆಳೆದಿದೆ. 140 ಕೋಟಿ ಜನಸಂಖ್ಯೆಯ ದೇಶದಲ್ಲಿ ಆದಾಯ ತೆರಿಗೆ ಸ್ಲ್ಯಾಬ್ ಪುನಾರಚನೆ ಆಗುತ್ತಿದೆ. ಸ್ಟ್ಯಾಂಡರ್ಡ್ ಡಿಡಕ್ಷನ್ ಹೆಚ್ಚಳವಾಗಿದೆ. ಸಂಬಳ, ಪಿಂಚಣಿದಾರರಿಗೆ ಅನುಕೂಲವಾಗಿದೆ ಎಂದರು.
ರಸ್ತೆ, ಹೆದ್ದಾರಿ, ಮೂಲ ಸೌಕರ್ಯ ಅಭಿವೃದ್ಧಿ, ರೈಲ್ವೆ, ಮೆಟ್ರೋಗೆ ಹೆಚ್ಚು ಒತ್ತು ನೀಡಲಾಗಿದೆ. ಇದೆಲ್ಲವೂ ಬೆಳವಣಿಗೆಯ ಜೊತೆಗೆ ವಿದೇಶಿ ವಿನಿಮಯ ಹೆಚ್ಚಳಕ್ಕೂ ಕಾರಣವಾಗುತ್ತಿದೆ. ದೇಶಿ ಉತ್ಪಾದನೆಗೆ ಉತ್ತೇಜನ ನೀಡಲಾಗಿದೆ. ವಿಶ್ವದ ಹಿರಿಯಣ್ಣ ಅಂತಲೇ ಬೀಗುತ್ತಿದ್ದ ಅಮೆರಿಕಾ, ಅಲ್ಲಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹ ಭಾರತದ ನಾಯಕತ್ವದ ಮುಂದೆ ಏನು ಮಾಡಲಾಗದೇ ಚಿಂತಿತನಾಗುವಂತಾಗಿದೆ ಎಂದು ಹೇಳಿದರು. ರಕ್ಷಣಾ ವಿಭಾಗ, ಎಲೆಕ್ಟ್ರಾನಿಕ್ಸ್ ವಿಭಾಗಕ್ಕೆ ಒತ್ತು ನೀಡಲಾಗಿದೆ. ಕಿಸಾನ್ ಕ್ರೆಡಿಟ್ ಕಾರ್ಡ್ ಸೌಲಭ್ಯ ವಿಸ್ತರಿಸಲಾಗಿದೆ. ದೇಶೀಯ ಔಷಧಿ, ಬಯೋ ಫಾರ್ಮಾಗೆ ಉತ್ತೇಜನ ನೀಡಲಾಗಿದೆ. ನಮ್ಮ ಔಷಧಿ ನಾವೇ ಉತ್ಪಾದನೆ ಮಾಡುವ ಆಲೋಚನೆ ಮೋದಿ ಸರ್ಕಾರದ್ದು. ಇದೊಂದು ಮಧ್ಯಮ ವರ್ಗದ ಸ್ನೇಹಿ ಬಜೆಟ್ ಆಗಿದೆ ಎಂದು ಬಿ.ಪಿ.ಹರೀಶ ತಿಳಿಸಿದರು. -ಬಿ.ಪಿ.ಹರೀಶ್, ಹರಿಹರ ಶಾಸಕ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.