- ಮಲೇಬೆನ್ನೂರು ಪುರಸಭೆಯಲ್ಲಿ ಮಡಿವಾಳ ಮಾಚಿದೇವ ಜಯಂತಿ - - - ಮಲೇಬೆನ್ನೂರು: ಶ್ರೇಷ್ಠ ಶರಣ ಮಡಿವಾಳ ಮಾಚಿದೇವ ವೀರಸೇನಾನಿಯಾಗಿ ಸಮಾಜದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ಮುಖಂಡ ಪುರಸಭಾ ಸದಸ್ಯ ವೀರಯ್ಯ ಅಭಿಪ್ರಾಯಪಟ್ಟರು.
ಸದಸ್ಯ ಸಾಬಿರ್ ಅಲಿ ಮಾತನಾಡಿ, ಕಾಯಕ ನಿಷ್ಠರಿಗೆ ಮಾತ್ರ ತನ್ನ ಸೇವೆ ಮಾಡುತ್ತಿದ್ದ ಮಾಚಿದೇವ ಕಲ್ಯಾಣ ಕ್ರಾಂತಿಯಲ್ಲಿ ಶರಣರ ದಾರಿಯಲ್ಲಿ ನಡೆದು ಮಾದರಿಯಾದ ವ್ಯಕ್ತಿಯಾದರು ಎಂದರು.
ಪುರಸಭಾ ಅಧ್ಯಕ್ಷ ಹನುಮಂತಪ್ಪ ಅಧ್ಯಕ್ಷತೆ ವಹಿಸಿದ್ದರು. ಸದಸ್ಯ ಗೌಡರ ಮಂಜಣ್ಣ,ಮುಖಂಡ ಗಂಗಾಧರ್ ಮಾತನಾಡಿದರು. ಮುಖ್ಯಾಧಿಕಾರಿ ಭಜಕ್ಕನವರ್ ಅಧಿಕಾರಿಗಳಾದ ದಿನಕರ್, ಉಮೇಶ್, ಶಿವರಾಜ್ ಕೂಸಗಟ್ಟಿ ಮಡಿವಾಳ ಸಮಾಜದ ಮಹದೇವಣ್ಣ, ಬಸವರಾಜ್, ರಾಜೇಶ್, ಆಂಜನೇಯ, ಕೆಂಚಪ್ಪ ಹಾಗೂ ಪುರಸಭಾ ಸದಸ್ಯರು ಇದ್ದರು. ಕಾರ್ಯಕ್ರಮದಲ್ಲಿ ಸಿಹಿ ವಿತರಿಸಲಾಯಿತು.ನಾಡ ಕಚೇರಿಯಲ್ಲಿ ಕಾರ್ಯಕ್ರಮ:
ಪಟ್ಟಣದ ನಾಡ ಕಚೇರಿಯಲ್ಲಿ ಉಪ ತಹಸೀಲ್ದಾರ್ ಆರ್.ರವಿ ಸಮ್ಮುಖ ಮಡಿವಾಳ ಮಾಚಿದೇವರ ಜಯಂತಿ ಸರಳವಾಗಿ ಆಚರಿಸಲಾಯಿತು. ರಾಜಸ್ವ ನಿರೀಕ್ಷಕ ಆನಂದ್, ಗ್ರಾಮ ಆಡಳಿತಾಧಿಕಾರಿಗಳು ಇದ್ದರು.- - - -೧ಎಂಬಿಆರ್೧:
ನಾಡ ಕಚೇರಿಯಲ್ಲಿ ಮಡಿವಾಳ ಮಾಚಿದೇವ ಜಯಂತಿ ಆಚರಿಸಲಾಯಿತು.