ಶರಣರ ಶುದ್ಧ ಕಾಯಕ ನಮ್ಮೆಲ್ಲರಿಗೂ ದಾರಿದೀಪ

KannadaprabhaNewsNetwork |  
Published : Jul 10, 2024, 12:39 AM IST
ಚಿಂಚೋಳಿ ತಾಲೂಕಿನ ರಟಕಲ್ ಗ್ರಾಮದಲ್ಲಿ ಜರುಗಿದ ಬಸವಾದಿ ಶರಣರ ವಚನ ಸಂಗಮ ಕಾರ್ಯಕ್ರಮವನ್ನು ವೈದ್ಯಕೀಯ ಶೀಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಉದ್ಘಾಟಿಸಿದರು. | Kannada Prabha

ಸಾರಾಂಶ

ಬಸವಾದಿ ಶರಣರು ತಮ್ಮ ನಡೆ ನುಡಿಗಳನ್ನು ವಚನ ಸಾಹಿತ್ಯದ ಮೂಲಕ ಸಂದೇಶ ಸಾರಿದ್ದಾರೆ. ಮನುಷ್ಯ ಬಾಳಿ ಬದುಕುವುದಕ್ಕೆ ಅವರ ತತ್ವ ವಿಚಾರಗಳು, ಮಾರ್ಗದರ್ಶನಗಳು ನಮಗೆ ದಾರಿದೀಪವಾಗಿವೆ ಎಂದು ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ದಿ ಸಚಿವ ಡಾ. ಶರಣಪ್ರಕಾಶ ಪಾಟೀಲರು ಹೇಳಿದರು.

ಕನ್ನಡಪ್ರಭ ವಾರ್ತೆ ಚಿಂಚೋಳಿ

೧೨ನೇ ಶತಮಾನದ ಕಲ್ಯಾಣ ನಾಡಿನ ಬಸವಾದಿ ಶರಣರು ತಮ್ಮ ನಡೆ ನುಡಿಗಳನ್ನು ವಚನ ಸಾಹಿತ್ಯದ ಮೂಲಕ ಸಂದೇಶ ಸಾರಿದ್ದಾರೆ. ಮನುಷ್ಯ ಬಾಳಿ ಬದುಕುವುದಕ್ಕೆ ಅವರ ತತ್ವ ವಿಚಾರಗಳು, ಮಾರ್ಗದರ್ಶನಗಳು ನಮಗೆ ದಾರಿದೀಪವಾಗಿವೆ ಎಂದು ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ದಿ ಸಚಿವ ಡಾ. ಶರಣಪ್ರಕಾಶ ಪಾಟೀಲರು ಹೇಳಿದರು.

ತಾಲೂಕಿನ ರಟಕಲ್ ಗ್ರಾಮದಲ್ಲಿ ಭಾನುವಾರ ನಡೆದ ಬಸವಾದಿ ಶರಣರ ವಚನ ಸಂಗಮ ಧಾರ್ಮಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕಲ್ಯಾಣ ನಾಡಿನಲ್ಲಿ ಕ್ರಾಂತಿಯೇ ಒಂದು ವಿಷೇಶತೆಗಾಗಿ ಅನುಭವ ಮಂಟಪ ಸೃಷ್ಟಿಯಾಗಿದೆ. ಶರಣರ ಅನುಭವದ ಮಾತುಗಳು ವಚನಗಳು ಚರ್ಚೆ ಮತ್ತು ವಿಮರ್ಶೆಯನ್ನು ಪ್ರಭುದೇವರ ಅಧ್ಯಕ್ಷತೆಯಲ್ಲಿ ನಡೆಯುತ್ತಿದ್ದವು. ವಚನಗಳಿಂದ ಸಮಾಜದಲ್ಲಿ ಶಾಂತಿ ಮತ್ತು ಸಮಾನತೆ ತಂದಿರುವುದರಿಂದ ಮಾದಾರ ಚೆನ್ನಯ್ಯ ಶರಣರು ಶ್ರೇಷ್ಠರಾಗಿದ್ದರು ಬಸವಣ್ಣನವರು ಎಲ್ಲ ಸಮಾಜದ ಹೆಣ್ಣು ಮಕ್ಕಳಿಗೆ ನ್ಯಾಯ ಕೊಟ್ಟಿದ್ದಾರೆ. ಅಕ್ಕಮಹಾದೇವಿ, ಆಯ್ದಕ್ಕಿ ಲಕ್ಕಮ್ಮ, ಸತ್ಯಕ್ಕ ಶರಣೆಯರಿಗೆ ಬಾಳಿ ಬದುಕಲು ದಾರಿದೀಪವಾಗಿದ್ದಾರೆ ಎಂದರು.ಮುಖ್ಯಮಂತ್ರಿಗಳ ಸಲಹೆಗಾರ ಬಿ.ಆರ್. ಪಾಟೀಲ ಮಾತನಾಡಿ, ಬಸವಣ್ಣ ನಾಡಿನಲ್ಲಿ ಹುಟ್ಟಿ ಬೆಳದಂತಹ ನಾವೆಲ್ಲರೂ ಪುಣ್ಯವಂತರು. ಶರಣರ ಆದರ್ಶವಾದ ಬದುಕನ್ನು ನಮ್ಮಲ್ಲರಿಗೆ ತೋರಿಸಿಕೊಟ್ಟಿದ್ದಾರೆ. ಆದರೆ, ವೈಜ್ಞಾನಿಕ ಯುಗದಲ್ಲಿ ಮೂಢನಂಬಿಕೆಗಳು ಇನ್ನು ಹೋಗಿಲ್ಲ ಎಂದರು.

ಕೆಪಿಸಿಸಿ ಉಪಾಧ್ಯಕ್ಷ ಸುಭಾಷ ರಾಠೋಡ ಮಾತನಾಡಿದರು. ವೇದಿಕೆಯಲ್ಲಿ ರಟಕಲ ರೇವಣಸಿದ್ದ ಶಿವಾಚಾರ್ಯರು, ರಟಕಲ್ ಸಿದರಾಮ ಸ್ವಾಮೀಜಿ, ಕೋಡ್ಲಿ ಬಸವಲಿಂಗ ಶಿವಾಚಾರ್ಯರು, ಗೌರಿಗುಡ್ಡದ ಸಿದ್ದ ಶಿವಯೋಗಿಗಳು, ಐನಾಪೂರ ಪಂಚಾಕ್ಷರಿ ದೇವರು, ಹೊಸಳ್ಳಿ ಶಿವಲಿಂಗ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜೇಶ ಗುತ್ತೆದಾರ ಸೇರಿ ಜನಪ್ರತಿನಿಧಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುರ್ಚಿ ಕಿತ್ತಾಟ ರಾಜ್ಯದವರೇ ಬಗೆಹರಿಸಿಕೊಳ್ಳಬೇಕು: ಖರ್ಗೆ
ಸದೃಢ ಆರೋಗ್ಯಕ್ಕೆ ಹಲ್ಲು ಸದೃಢವಾಗಿರಲಿ