ಶರಣರ ವಚನಗಳು ಸಮಾಜ ಪರಿವರ್ತನೆಗೆ ಕಾರಣ: ಡಾ. ನಿಂಗು ಸೊಲಗಿ

KannadaprabhaNewsNetwork |  
Published : Oct 09, 2025, 02:01 AM IST
ಕಾರ್ಯಕ್ರಮವನ್ನು ಡಾ. ನಿಂಗು ಸೊಲಗಿ ಉದ್ಘಾಟಿಸಿದರು. | Kannada Prabha

ಸಾರಾಂಶ

ವಚನಗಳು ಎಂದರೆ ಮಾತು, ಅವುಗಳ ಆಚರಣೆ ಮೂಲಕ ಎಲ್ಲರನ್ನು ಅಪ್ಪಿಕೊಳ್ಳುವ ಮತ್ತು ಒಪ್ಪಿಕೊಳ್ಳುವ ವ್ಯವಸ್ಥೆ ಅನುಭವ ಮಂಟಪದಲಿಯೇ ನಿರ್ಧರಿಸುವ ಅನೇಕ ಶರಣರು ತಮ್ಮ ಅನುಭಾವದಿಂದ ವಚನಗಳನ್ನು ಕಟ್ಟಿಕೊಟ್ಟರು.

ಮುಂಡರಗಿ: 12ನೇ ಶತಮಾನದಲ್ಲಿ ಬಸವಣ್ಣ ಆದಿಯಾಗಿ ಇತರೆ ಶಿವಶರಣರು ತಮ್ಮ ಉತ್ಕೃಷ್ಟ ವಚನಗಳನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡುವುದರ ಜತೆಗೆ ಪರಿವರ್ತನೆಗೆ ಕಾರಣವಾದವು ಎಂದು ರಾಷ್ಟ್ರಪ್ರಶಸ್ತಿ ಪುರಸ್ಕೃತ, ಶಿಕ್ಷಕ ಡಾ. ನಿಂಗು ಸೊಲಗಿ ತಿಳಿಸಿದರು.ಪಟ್ಟಣದ ಚೈತನ್ಯ ಶಿಕ್ಷಣ ಸಂಸ್ಥೆ ಸೌರಭದಲ್ಲಿ ಇತ್ತೀಚೆಗೆ ಕಸಾಪ, ಶಸಾಪ ಆಶ್ರಯದಲ್ಲಿ ಜರುಗಿದ ಶರಣ ಚಿಂತನ ಮಾಲೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ವಚನಗಳು ಎಂದರೆ ಮಾತು, ಅವುಗಳ ಆಚರಣೆ ಮೂಲಕ ಎಲ್ಲರನ್ನು ಅಪ್ಪಿಕೊಳ್ಳುವ ಮತ್ತು ಒಪ್ಪಿಕೊಳ್ಳುವ ವ್ಯವಸ್ಥೆ ಅನುಭವ ಮಂಟಪದಲಿಯೇ ನಿರ್ಧರಿಸುವ ಅನೇಕ ಶರಣರು ತಮ್ಮ ಅನುಭಾವದಿಂದ ವಚನಗಳನ್ನು ಕಟ್ಟಿಕೊಟ್ಟರು. ಅವರು ಇಂದಿಗೂ ನಮಗೆ ಮಾರ್ಗದರ್ಶನ ಮತ್ತು ಅದರ ಹಾದಿಯಲ್ಲಿ ನಡೆಯಲು ಪ್ರೇರಣೆ ನೀಡುತ್ತವೆ. ಈಗಲೂ‌ ಬಸವ ಸಂಸ್ಕೃತಿ ಎಲ್ಲೆಡೆ ಪಸರಿಸುತ್ತಿದ್ದು, ಅಂದಿನಿಂದ ಶರಣರ ವಚನಗಳು, ಶರಣರ ವಿಚಾರಧಾರೆಗಳು ಜೀವಂತವಾಗಿ ತಮ್ಮ ಅಸ್ತಿತ್ವ ಉಳಿಸಿಕೊಂಡು ಬಂದಿದೆ ಎಂದರು.12ನೇ ಶತಮಾನದ ಶರಣ ರಾಯಸದ ಮಂಚಣ್ಣ ಕುರಿತು ಹಿರಿಯ ಪತ್ರಕರ್ತ ಸಿ.ಕೆ. ಗಣಪ್ಪನವರ ಉಪನ್ಯಾಸ ನೀಡಿ, ಅನೇಕ ಶರಣರು ವಿಭಿನ್ನವಾಗಿ ವಚನಗಳನ್ನು ರಚಿಸಿದರೂ ಅದರಲ್ಲಿನ ಸಾರ ಮತ್ತು ತತ್ವ ಸಮ ಸಮಸಮಾಜ ನಿರ್ಮಾಣ, ಜಾತಿ ಮೌಢ್ಯಗಳನ್ನು ಹೋಗಲಾಡಿಸುವ ಉದ್ದೇಶ ಹೊಂದಿವೆ ಎಂದರು.ಚೈತನ್ಯ ಶಿಕ್ಷಣ ಸಂಸ್ಥೆಯ ನಿರ್ದೇಶಕಿ ವೀಣಾ ಎಚ್. ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ಅನೇಕ ಶರಣರು ತಮ್ಮ ವಚನಗಳ ಮೂಲಕ ಸಮಾನತೆ ದೊರಕಿಸಿಕೊಡುವ ಕಾರ್ಯ ಮಾಡಿದ್ದಾರೆ. ವೈಚಾರಿಕತೆಯ ಹಿನ್ನೆಲೆಯಲ್ಲಿ ಶರಣರ ವಚನಗಳು ಸಮಾಜಕ್ಕೆ ಮಾರ್ಗದರ್ಶನ ನೀಡಿವೆ. ಶರಣರ ಚಿಂತನ ಮಾಲೆಯಲ್ಲಿ ಅನೇಕ ಉಪೇಕ್ಷಿತ ಶರಣರನ್ನು ಹುಡುಕಿ ಅವರ ಬಗ್ಗೆ ಮತ್ತಷ್ಟು ತಿಳಿಸುವ ಪ್ರಯತ್ನವೇ ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ ಎಂದರು.ಈ ವೇಳೆ ಕಸಾಪ ಅಧ್ಯಕ್ಷ ಎಂ.ಜಿ. ಗಚ್ಚಣ್ಣವರ, ಪ್ರೊ. ಕಾವೇರಿ ಬೋಲಾ, ಆರ್.ಕೆ. ರಾಯನಗೌಡರ, ರಮೇಶ ಪಾಟೀಲ, ಹನುಮರೆಡ್ಡಿ ಇಟಗಿ, ಐ.ಎಸ್. ಮುಲ್ಲಾ ಉಪಸ್ಥಿತರಿದ್ದರು. ಕಸಾಪ ಗೌ. ಕಾರ್ಯದರ್ಶಿ ಮಂಜುನಾಥ ಮುಧೋಳ ಸ್ವಾಗತಿಸಿದರು. ಜಯಶ್ರೀ ಅಳವಂಡಿ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು