ಶರನ್ನವರಾತ್ರಿ ಶ್ರೀ ದೇವಿ ಪುರಾಣ ಪ್ರವಚನ ಸಂಪನ್ನ

KannadaprabhaNewsNetwork |  
Published : Oct 23, 2026, 01:45 AM IST
ಶಿಗ್ಗಾಂವಿ ಪಟ್ಟಣದ ಶ್ರೀ ದ್ಯಾಮವ್ವದೇವಿ ಜಾತ್ರಾ ಮಹೋತ್ಸವ ಸಮಿತಿಯ ಆಶ್ರಯದಲ್ಲಿ ನಡೆದ ಶ್ರೀ ದೇವಿ ಪುರಾಣದ ಸಮಾರೋಪ ಸಮಾರಂಭದಲ್ಲಿ ಗಣ್ಯರನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಶಿಗ್ಗಾಂವಿ ಪಟ್ಟಣದ ಶ್ರೀ ದ್ಯಾಮವ್ವದೇವಿ ಜಾತ್ರಾ ಮಹೋತ್ಸವ ಸಮಿತಿಯ ಆಶ್ರಯದಲ್ಲಿ ನಡೆದ ಶ್ರೀ ದೇವಿ ಪುರಾಣದ ಸಮಾರೋಪ ಸಮಾರಂಭದಲ್ಲಿ ಗಣ್ಯರನ್ನು ಸನ್ಮಾನಿಸಲಾಯಿತು.

ಶಿಗ್ಗಾಂವಿ: ಪಟ್ಟಣದ ಶ್ರೀ ದ್ಯಾಮವ್ವದೇವಿ ಜಾತ್ರಾ ಮಹೋತ್ಸವ ಸಮಿತಿಯ ಆಶ್ರಯದಲ್ಲಿ ಅ. 11ರಿಂದ 21ರ ವರೆಗೆ ಹನ್ನೊಂದು ದಿನಗಳ ಕಾಲ ನಡೆದ ಶರನ್ನವರಾತ್ರಿ ಶ್ರೀ ದೇವಿ ಪುರಾಣ ಪ್ರವಚನ ಕಾರ್ಯಕ್ರಮವು ಭಕ್ತಿಭಾವ, ಧಾರ್ಮಿಕ ಚಿಂತನೆ ಹಾಗೂ ವೈಭವದೊಂದಿಗೆ ಸಂಪನ್ನಗೊಂಡಿತು.

ವಿವಿಧ ಮಠಾಧೀಶರ ಸಮ್ಮುಖದಲ್ಲಿ ಪುಟ್ಟರಾಜ ಕವಿ ಗವಾಯಿಗಳ ಶಿಷ್ಯರಾದ ಹಾನಗಲ್ಲ ತಾಲೂಕಿನ ಮಹಾರಾಜಪೇಟೆಯ ವೇ.ಮೂ. ಪ್ರಭಯ್ಯಶಾಸ್ತ್ರಿಗಳು ಒಂಬತ್ತು ದಿನಗಳ ಕಾಲ ಶ್ರೀ ದೇವಿ ಪುರಾಣ ಪ್ರವಚನವನ್ನು ಅತ್ಯಂತ ಭಕ್ತಿಪೂರ್ಣವಾಗಿ ನಡೆಸಿಕೊಟ್ಟರು. ಗದಗದ ಶಿವಾನಂದ ಮಂದೇವಾಲ ಅವರ ಸಂಗೀತ ಸೇವೆ ಹಾಗೂ ಬಸವರಾಜ ಚಳಗೇರಿ ಅವರ ತಬಲಾ ಸಾಥ್ ಪ್ರತಿದಿನದ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದವು.

ಈ ಬಾರಿಯ ಶ್ರೀ ದೇವಿ ಪುರಾಣ ಪ್ರವಚನದಲ್ಲಿ ಶಿಗ್ಗಾವಿಯ ಭಕ್ತರು ತೋರಿದ ಆತಿಥ್ಯ ವಿಶೇಷವಾಗಿ ಗಮನ ಸೆಳೆಯಿತು. ಪ್ರತಿದಿನ ರಾಜಕೀಯ ಧುರೀಣರು, ಸಾಹಿತಿಗಳು ಹಾಗೂ ಕಲಾವಿದರು ಪಾಲ್ಗೊಂಡು ಭಾಷಣ, ಉಪನ್ಯಾಸ ಮತ್ತು ಧರ್ಮಚಿಂತನೆಯ ಮೂಲಕ ಕಾರ್ಯಕ್ರಮದ ಸಾರ್ಥಕತೆಯನ್ನು ಹೆಚ್ಚಿಸಿದ್ದು ಕಂಡು ಬಂತು,

ಸಮಾರೋಪ ಸಮಾರಂಭದಲ್ಲಿ ಶಾಸಕ ಯಾಸೀರ್ ಅಹ್ಮದ್ ಖಾನ್ ಪಠಾಣ, ಜಾತ್ರಾ ಮಹೋತ್ಸವ ಸಮಿತಿಯ ಅಧ್ಯಕ್ಷ ಮಂಜುನಾಥ ಕುನ್ನೂರ, ಗೌರವಾಧ್ಯಕ್ಷ ಸಿದ್ಧಾರ್ಥಗೌಡ ಪಾಟೀಲ, ಭರತ್ ಬೊಮ್ಮಾಯಿ, ಶ್ರೀಕಾಂತ ದುಂಡೀಗೌಡ್ರ, ರಾಜು ಕುನ್ನೂರ, ಕೆ ಎಸ್ ಆರ್ ಪಿ ಕಮಾಂಡೆಂಟ್ ನಾಗರಾಜ ಮೆಳ್ಳಾಗಟ್ಟಿ, ಟಿ.ವಿ. ಸುರಗೀಮಠ, ಜಯಣ್ಣ ಹೆಸರೂರ, ಶಿವಾನಂದ ಮ್ಯಾಗೇರಿ, ನರಹರಿ ಕಟ್ಟಿ ಹಾಗೂ ಪ್ರಾಚಾರ್ಯ ನಾಗರಾಜ ದ್ಯಾಮನಕೊಪ್ಪ, ಸಂಗೀತ ಸೇವೆ ಸಲ್ಲಿಸಿದ ಶಿವಾನಂದ ಮಂದೇವಾಲ ಹಾಗೂ ತಬಲಾ ಸಾಥ್ ನೀಡಿದ ಬಸವರಾಜ ಚಳಗೇರಿ ಅವರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.

ಮುಖಂಡರಾದ ಸಿದ್ದಣ್ಣ ಮೊರಬದ, ದತ್ತಣ್ಣ ವೇರ್ಣೇಕರ, ಭರಮಜ್ಜ ನವಲಗುಂದ, ವೀರಣ್ಣ ಬಡ್ಡಿ, ಸುಶೀಲಕ್ಕ ಪಾಟೀಲ, ಸ್ನೇಹಲತಾ ಕುನ್ನೂರ, ಯಲ್ಲಪ್ಪ ಹರಿಗೊಂಡ, ಶಿವಪುತ್ರಪ್ಪ ಜಕ್ಕಣ್ಣವರ, ಫಕ್ಕೀರಪ್ಪ ಕುಂದೂರ, ಅಶೋಕ ಕಾಳೆ, ಅಶೋಕ ಖುರ್ಷಾಪುರ, ಶ್ರೀಕಾಂತ ಬುಳ್ಳಕ್ಕನವರ, ಶಿವಪ್ರಕಾಶ ಹಿರೇಮಠ, ಮಹಾಂತೇಶ ಯಲಿಗಾರ, ಅಶೋಕ ಬಂಕಾಪುರ, ಶಂಕರಗೌಡ ಆರ್. ಪಾಟೀಲ, ನೀಲಮ್ಮ ವನಹಳ್ಳಿ ಮುಂತಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ: ಮತಗಟ್ಟೆಗೆ ತೆರಳಿದ ಸಿಬ್ಬಂದಿ
ಕಿಮ್ಸ್ ಆಸ್ಪತ್ರೆಗೆ ರೈಲ್ವೆ ಸೇತುವೆ ನಿರ್ಮಾಣಕ್ಕೆ ವರದಿ ಕೇಳಿದ ರೈಲ್ವೆ ಇಲಾಖೆ