ಹಿರೇಕಲ್ಮಠದಲ್ಲಿ ನಾಳೆಯಿಂದ ಶರನ್ನವರಾತ್ರಿ ಉತ್ಸವ

KannadaprabhaNewsNetwork |  
Published : Sep 21, 2025, 02:00 AM IST
ಹೊನ್ನಾಳಿ ಫೋಟೋ 20ಎಚ್.ಎಲ್.ಐ4. ಹಿರೇಕಲ್ಮಠದ ಸ್ವಾಮಿಜಿ. | Kannada Prabha

ಸಾರಾಂಶ

ನಡು ಕರ್ನಾಟಕದಲ್ಲಿ ಅನ್ನ,ಅಕ್ಷರ ಮತ್ತು ನ್ಯಾಯದಾನ ತ್ರಿವಿಧ ದಾಸೋಹಕ್ಕೆ ಪ್ರಸಿದ್ದಿಯಾಗಿರುವ ಹಿರೇಕಲ್ಮಠದ ಶ್ರೀ ಚನ್ನಪ್ಪ ಸ್ವಾಮಿ ಮಠದಲ್ಲಿ ಪ್ರಸ್ತುತ ಪೀಠಾಧ್ಯಕ್ಷ ಡಾ.ಒಡೆಯರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಜಿಗಳ ನೇತೃತ್ವದಲ್ಲಿ ಸೆ.22 ರಿಂದ ಅ.2ರವರೆಗೆ ಶರನ್ನವರಾತ್ರಿ ಮತ್ತು ದಸರಾ ಮಹೋತ್ಸವ ಕಾರ್ಯಕ್ರಮಗಳು ಶ್ರೀಮಠದ ಜಗದ್ಗುರು ಪಂಚಾಚಾರ್ಯ ಸಮುದಾಯ ಭವನದಲ್ಲಿ ಜರುಗಲಿದೆ ಎಂದು ಶ್ರೀಮಠ ತಿಳಿಸಿದೆ.

ಕನ್ನಡ ಪ್ರಭ ವಾರ್ತೆ ಹೊನ್ನಾಳಿ

ನಡು ಕರ್ನಾಟಕದಲ್ಲಿ ಅನ್ನ,ಅಕ್ಷರ ಮತ್ತು ನ್ಯಾಯದಾನ ತ್ರಿವಿಧ ದಾಸೋಹಕ್ಕೆ ಪ್ರಸಿದ್ದಿಯಾಗಿರುವ ಹಿರೇಕಲ್ಮಠದ ಶ್ರೀ ಚನ್ನಪ್ಪ ಸ್ವಾಮಿ ಮಠದಲ್ಲಿ ಪ್ರಸ್ತುತ ಪೀಠಾಧ್ಯಕ್ಷ ಡಾ.ಒಡೆಯರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಜಿಗಳ ನೇತೃತ್ವದಲ್ಲಿ ಸೆ.22 ರಿಂದ ಅ.2ರವರೆಗೆ ಶರನ್ನವರಾತ್ರಿ ಮತ್ತು ದಸರಾ ಮಹೋತ್ಸವ ಕಾರ್ಯಕ್ರಮಗಳು ಶ್ರೀಮಠದ ಜಗದ್ಗುರು ಪಂಚಾಚಾರ್ಯ ಸಮುದಾಯ ಭವನದಲ್ಲಿ ಜರುಗಲಿದೆ ಎಂದು ಶ್ರೀಮಠ ತಿಳಿಸಿದೆ.

ಪ್ರತಿ ದಿನ ಬೆಳಿಗ್ಗೆ 8 ಗಂಟೆಯಿಂದ ಶ್ರೀಮಠದ ಕರ್ತೃಗದ್ದುಗಳಿಗೆ ಮಹಾರುದ್ರಾಭಿಷೇಕ ಹಾಗೂ ಶ್ರೀಗಳವರ ಇಷ್ಟಲಿಂಗ ಮಹಾಪೂಜೆ, ಮಹಾ ಮಂಗಳಾರತಿ, ಮುಂತಾದ ಧಾರ್ಮಿಕ ವಿಧಿ ವಿಧಾನಗಳು ಲೋಕ ಕಲ್ಯಾಣಾರ್ಥವಾಗಿ ನೆರವೇರಲಿವೆ.

ಸೆ.22ರ ಸೋಮವಾರ ಬೆಳಿಗ್ಗೆ 7 ಗಂಟೆಗೆ ತುಂಗಭದ್ರಾ ನದಿಯಿಂದ ಗಂಗೆ ಪೂಜೆಗೈದು, ಉತ್ಸವದೊಂದಿಗೆ ಪೂರ್ಣಕುಂಭಗಳನ್ನು ಶ್ರಿಮಠಕ್ಕೆ ತರಲಾಗುತ್ತದೆ , ಮುತ್ತೈದೆಯರು ಹಾಗೂ ಸದ್ಬಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇವಾಭಾಗಿಗಳಾಗಬೇಕೆಂದು ಮಠದವತಿಯಿಂದ ಕೋರಲಾಗಿದೆ.

ಸೆ.22ರ ಸಂಜೆ ಶರನ್ನವರಾತ್ರಿ ಮತ್ತು ದಸರಾ ಮಹೋತ್ಸವದ ಪ್ರಾರಂಭ ಕಾರ್ಯಕ್ರಮ ನಡೆಯಲಿದ್ದು, ಡಾ.ಒಡೆಯರು ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಮಹಾ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಮುಸ್ಟೂರು ಓಂಕಾರೇಶ್ವರ ಮಠದ ರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಜಿ ಅದ್ಯಕ್ಷತೆ ವಹಿಸಲಿದ್ದು, ರಾಂಪುರ ಬೃಹನ್ಮಠ ಶಿವಕುಮಾರ ಹಾಲಸ್ವಾಮಿಜಿಯವರ ದಿವ್ಯ ಉಪಸ್ಥಿತಿ ಇರಲಿದೆ,

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರು ಮೊದಲ ದಿನದ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ ಮುಖ್ಯ ಅತಿಥಿಗಳಾಗಿ ಸಂಸದೆ ಪ್ರಭಾ ಮಲ್ಲಿಕಾರ್ಜುನ್, ಶಾಸಕ ಡಿ.ಜಿ.ಶಾಂತನಗೌಡ, ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್, ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ, ತಾಲೂಕು ಅಧ್ಯಕ್ಷ ಸಣ್ಣಕ್ಕಿ ಬಸವನಗೌಡ, ಎಚ್.ಬಿ. ಶಿವಯೋಗಿ, ರಾಜ್ಯ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಉಮಾಪತಿ ಎಚ್.ಎ,, ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷ ರಮೇಶ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಪ್ಪ ರೇವಣಸಿದ್ದಪ್ಪ, ಕೆ.ಎಂ.ಎಫ್, ನಿರ್ದೇಶಕ ಬಿ.ಜಿ.ಬಸವರಾಜಪ್ಪ, ಕಾಂಗ್ರೆಸ್ ಮುಖಂಡ ಬಿ. ಸಿದ್ದಪ್ಪ, ನಿವೃತ್ತ ಎಂಜಿನಿಯರ್ ಅನಂದಪ್ಪ ಭಾಗವಹಿಸಲಿದ್ದಾರೆ.

ಎಸ್.ಎಂ.ಎಫ್,ಸಿ. ಕಾಲೇಜಿನ ಪ್ರಾಂಶುಪಾಲ ಡಾ.ಪ್ರವೀಣ್ ಗೌಡ್ರು ಉಪನ್ಯಾಸ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿ ಕಾರ್ಯಕ್ರಮಗಳು ಜರುಗಲಿದ್ದು ಪ್ರತಿ ದಿನ ಸಂಜೆ ಹಿರೇಕಲ್ಮಠದ ಮಂಜುನಾಥ ದೇವರು ಅವರಿಂದ ಶ್ರೀದೇವಿ ಪುರಾಣ ಪ್ರವಚನ ಕಾರ್ಯಕ್ರಮ ಹಾಗೂ ಶರನ್ನನರಾತ್ರಿ ಕಲಾಬಳಗದಿಂದ ಗೀತ ಗಾಯನ ಕಾರ್ಯಕ್ರಮವಿರುತ್ತದೆ.

ಸೆ.22ರಿಂದ ಆರಂಭಗೊಂಡ ಈ ಕಾರ್ಯಕ್ರಮದಲ್ಲಿ ಆ.2ರವರೆಗೆ ನಿರಂತರವಾಗಿ ನಡೆಯುತ್ತವೆ. ಅ ದಿನ ಸಂಜೆ ದಸರಾ ಮಹೋತ್ಸವದ ನಿಮಿತ್ತ ಸ್ವಾಮೀಜಿಯ ಪಲ್ಲಕ್ಕಿ ಮಹೋತ್ಸವ, ಮೆರವಣಿಗೆ ನಂತರ ಪಟ್ಟಣದ ಹೊರವಲಯದಲ್ಲಿರುವ ಶಮೀವೃಕ್ಷಕ್ಕ ಸೀಮೋಲಂಘನ ಕಾರ್ಯ ನಡೆದು ನಂತರ ಪರಸ್ಪರ ಬನ್ನಿ ವಿತರಣೆ ನಡೆದು, ನಂತರ ಶ್ರೀಗಳ ಪಲ್ಲಕ್ಕಿ ಮೆರ‍ವಣಿಗೆ ಪಟ್ಟಣದ ಪ್ರಮುಖ ಬೀದಿಗಳ ಮೂಲಕ ನಡೆದು ಶ್ರೀಮಠಕ್ಕೆ ಬಂದು ನಂತರ ಧರ್ಮ ಸಭೆ ನಡೆಯಲ್ಲಿ ಸ್ವಾಮಿಜಿಯವರು ಭಕ್ತ ಸಮುದಾಯಕ್ಕೆ ವಿಜಯದಶಮಿ ಸಂದೇಶ ನೀಡಲಿದ್ದಾರೆ.

PREV

Recommended Stories

ಕುಕ್ಕೆ ಸುಬ್ರಹ್ಮಣ್ಯದಲ್ಲಿ 40 ಸೇವೆಗಳ ದರ ಪರಿಷ್ಕರಣೆ
ಟಾಕ್ಸಿಕ್‌ ಮುಂಬೈ ಶೂಟ್‌ ಮುಗಿಸಿ ಲಂಡನ್‌ಗೆ ಹಾರಿದ ಯಶ್‌