ಮೇಲುಕೋಟೆಯಲ್ಲಿ ಇಂದಿನಿಂದ ಅ.20ರವರೆಗೆ ಶರನ್ನವರಾತ್ರಿ ಉತ್ಸವ

KannadaprabhaNewsNetwork |  
Published : Oct 11, 2026, 02:45 AM IST
10ಕೆಎಂಎನ್ ಡಿ22 | Kannada Prabha

ಸಾರಾಂಶ

ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ಶರನ್ನವರಾತ್ರಿ ಮಹೋತ್ಸವ ಅ.11 ರಿಂದ 20ರವರೆಗೆ ವೈಭವದಿಂದ ನಡೆಯಲಿದೆ. ಪ್ರತಿದಿನ ಬೆಳಗ್ಗೆ 10 ಗಂಟೆಗೆ ಮಹಾಲಕ್ಷ್ಮಿ ಕಲ್ಯಾಣ ನಾಯಕಿ ಅಮ್ಮನವರಿಗೆ ಬಂಗಾರದ ಶೇಷವಾಹನೋತ್ಸವ ಸಡಗರ ಸಂಭದ್ರದಿಂದ ನೆರವೇರಲಿದೆ.

ಮೇಲುಕೋಟೆ:

ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ಶರನ್ನವರಾತ್ರಿ ಮಹೋತ್ಸವ ಅ.11 ರಿಂದ 20ರವರೆಗೆ ವೈಭವದಿಂದ ನಡೆಯಲಿದೆ. ಪ್ರತಿದಿನ ಬೆಳಗ್ಗೆ 10 ಗಂಟೆಗೆ ಮಹಾಲಕ್ಷ್ಮಿ ಕಲ್ಯಾಣ ನಾಯಕಿ ಅಮ್ಮನವರಿಗೆ ಬಂಗಾರದ ಶೇಷವಾಹನೋತ್ಸವ ಸಡಗರ ಸಂಭದ್ರದಿಂದ ನೆರವೇರಲಿದೆ.

ಈ ವರ್ಷ ಅಷ್ಟಮಿ ತಿಥಿ ಎರಡು ದಿನಗಳು ಬಂದಿರುವ ಕಾರಣ ದೇವಾಲಯದಲ್ಲಿ 10 ದಿನಗಳ ಕಾಲ ನವರಾತ್ರಿ ನಡಯೆಲಿದೆ. ಮಹಾನವಮಿ ಅ.20ರ ಮಂಗಳವಾರ ಮತ್ತು ವಿಜಯದಶಮಿ ಆಚರಣೆ ಅ.21ರ ಬುಧವಾರ ನಡೆಯಲಿದೆ

ನವರಾತ್ರಿ ಮಹೋತ್ಸವದ ಅಂಗವಾಗಿ ಮಹಾಲಕ್ಷ್ಮಿ ಕಲ್ಯಾಣನಾಯಕಿ ಅಮ್ಮನವರಿಗೆ ವಿಶೇಷ ತೋಮಾಲೆ, ಮಂಗಳವಾದ್ಯ ದಿವ್ಯಪ್ರಬಂಧ ಪಾರಾಯಣದೊಂದಿಗೆ ಪ್ರತಿದಿನವೂ ಬೆಳಿಗ್ಗೆ ಬಂಗಾರದ ಶೇಷವಾಹನೋತ್ಸವ ನಾಲ್ಕೂ ಉತ್ಸವ ಬೀದಿಗಳಲ್ಲಿ ನೆರವೇರಲಿದೆ. ಇದಕ್ಕೂ ಮುನ್ನ ವೇಣುವಾದನದೊಂದಿಗೆ ಮಹಾಲಕ್ಷ್ಮಿ ಕಲ್ಯಾಣನಾಯಕಿ ಅಮ್ಮನವರಿಗೆ ಪಲ್ಲಕ್ಕಿ ಉತ್ಸವ ನಡೆಯಲಿದೆ. ನವರಾತ್ರಿ ಮಂಟಪದಲ್ಲಿ ಪ್ರತಿದಿನ ವಿಶೇಷಪೂಜಾ ಕೈಂಕರ್ಯಗಳು ನಡೆಯಲಿದೆ.

ಚೆಲುವನಾರಾಯಣಸ್ವಾಮಿ ನವರಾತ್ರಿ-ವಿಜಯದಶಮಿ ಮಹೋತ್ಸವವನ್ನು ವೈಭವದಿಂದ ನಡೆಸಲು ಹಾಗೂ ಉತ್ಸವಕ್ಕೆ ಆಕರ್ಷಣೆ ತಂದುಕೊಡಲು ಜಿಲ್ಲಾಡಳಿತ ಸಹಕಾರ ನೀಡಲಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ್ ಮತ್ತು ಅಪರ ಜಿಲ್ಲಾಧಿಕಾರಿ ಶಿವಾನಂದಮೂರ್ತಿ ತಿಳಿಸಿದ್ದಾರೆ.

ಎಡೀಸಿ ಬಿ.ಸಿ ಶಿವಾನಂದಮೂರ್ತಿ ಅವರು ಈ ವರ್ಷದ ನವರಾತ್ರಿ-ವಿಜಯದಶಮಿಗೆ ಕಲ್ಯಾಣ ನಾಯಕಿ ಮತ್ತು ಚೆಲುವನಾರಾಯಣ ಸ್ವಾಮಿಗೆ ತೋಮಾಲೆ, ಉತ್ಸವಬೀದಿ ಮತ್ತು ರಾಜಗೋಪುರಕ್ಕೆ ವಿದ್ಯುತ್ ದೀಪಾಲಂಕಾರ, ಮಂಗಳವಾದ್ಯ, ತಳಿರು ತೋರಣ ಬಾಳೆಕಂಬಕಟ್ಟಲು ಉತ್ಸವವೇಳೆ ದೇವಾಲಯದಲ್ಲಿ ಭಕ್ತರಿಗೆ ಪ್ರಸಾದ ವಿತರಣೆಗೆ ದೇವಾಲಯದಿಂದಲೇ ವ್ಯವಸ್ಥೆ ಮಾಡಲು ಜಿಲ್ಲಾಡಳಿದಿಂದ ಆದೇಶ ನೀಡಲಾಗುತ್ತಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವ್ಯವಸ್ಥಾಪನಾ ಸಮಿತಿ ವ್ಯವಸ್ಥೆ ಮಾಡಿಕೊಳ್ಳಬೇಕು. ದೇಗುಲದ ಎಲ್ಲಾ ಪ್ರಮುಖ ಉತ್ಸವಗಳ ಆಕರ್ಷಣೆ ಹೆಚ್ಚಿಸಲು ಮನವಿ ಬಂದರೆ ಜಿಲ್ಲಾಡಳಿತದಿಂದ ಅನುಮತಿ ನೀಡಲಾಗುತ್ತದೆ ಎಂದು ಹೇಳಿದ್ದಾರೆ.

ಮೇಲುಕೋಟೆ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಭಕ್ತರು ಹಾಗೂ ಸ್ಥಾನೀಕರ ಮನವಿಗೆ ಸ್ಪಂದಿಸಿ ಸೂಚನೆ ನೀಡಿದ ಪರಿಣಾಮ ವಿಜಯದಶಮಿ, ನವರಾತ್ರಿ ಮಹೋತ್ಸವವನ್ನು ಆಕರ್ಷಕವಾಗಿ ವೈಭವಪೂರ್ಣವಾಗಿ ವ್ಯವಸ್ಥಾಪನಾ ಸಮಿತಿ ಸಹಕಾರದಲ್ಲಿ ನಡೆಯಲಿದೆ. ಸಮಿತಿ ಸದಸ್ಯರಾದ ವಕೀಲಕಾಡೇನಹಳ್ಳಿಸತೀಶ್, ವಿ.ವೆಂಕಟರಾಮೇಗೌಡ, ವೆಂಕಟೇಶ್, ಸ್ಥಾನೀಕಂ ಸಂತಾನರಾಮನ್ ಮತ್ತಿತರರು ಇದ್ದರು.

ಚೆಲುವನಾರಾಯಣನಿಗೆ ರಾಜಾಲಂಕಾರ, ಬನ್ನಿಪೂಜೆ:

ಮೈಸೂರು ಅರಸರ ಕುಲದೈವ ಚೆಲುವನಾರಾಯಣಸ್ವಾಮಿಗೆ ಅ.21ರ ವಿಜಯದಶಮಿಯಂದು ಮಹಾರಾಜರ ಅಲಂಕಾರ ನೆರವೇರಿಸಲಾಗುತ್ತದೆ. ಸಂಜೆ ಶ್ರೀಸ್ವಾಮಿಗೆ ಕುದುರೆವಾಹನೋತ್ಸವದ ಜಂಬೂಸವಾರಿ, ಬನ್ನಿಪೂಜೆ, ವಿಜಯೋತ್ಸವ ಮೆರವಣಿಗೆ ಅದ್ಧೂರಿಯಾಗಿ ನಡೆಯಲಿದೆ. ಬನ್ನಿಪೂಜೆ ಮುಗಿಸಿ ವಿಜಯೋತ್ಸವದೊಂದಿಗೆ ಅಶ್ವವಾಹನದಲ್ಲಿ ಬರುವ ಚೆಲುವನಾರಾಯಣಸ್ವಾಮಿಯನ್ನು ದೊಡ್ಡ ಶೇಷವಾಹನದಲ್ಲಿ ಮಹಾಲಕ್ಷ್ಮಿ ಆಗಮಿಸಿ ಅಂಗಡಿಬೀದಿ ವೃತ್ತದಲ್ಲಿ ಎದುರುಗೊಂಡು ಸಾಂಪ್ರದಾಯಿಕವಾಗಿ ಸ್ವಾಗತಿಸಿದ ನಂತರ ನಾಲ್ಕೂ ಬೀದಿಗಳಲ್ಲಿ ವಿಜೃಂಭಣೆಯಿಂದ ಉತ್ಸವ ನಡೆಯಲಿದೆ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಉತ್ತರ’ ಗೊಂದಲ ಕೆಪಿಎಸ್ಸಿ ಅಕ್ರಮ ಬೆಳಕಿಗೆ ಮೂಲ!
ಬ್ಯಾಂಕಾಕ್‌ ಪ್ರವಾಸಿಗರಿಂದ ₹1.73 ಕೋಟಿ ಡ್ರಗ್ಸ್‌ ಜಪ್ತಿ