ಹಾವೇರಿ: ಶರಣರ ಸಾಹಿತ್ಯದ ಕೊಡುಗೆಯಷ್ಟೇ ಅವರ ಸಾತ್ವಿಕ ನಡಿಗೆ ಮುಖ್ಯ. ಅವರ ನಡೆ-ನುಡಿ ಇಂದಿಗೂ ನಮಗೆಲ್ಲ ದಾರಿ ದೀಪವಾಗಿದೆ. ಸದಾಕಾಲ ಜೀವನ ದರ್ಶನವನ್ನು ತಮ್ಮ ಆದರ್ಶಗಳ ಮೂಲಕ ಪ್ರತಿಪಾದಿಸಿದ ಬಸವಾದಿ ಶರಣರು ಸದಾಕಾಲ ಪೂಜ್ಯನೀಯರು ಎಂದು ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ಹೇಳಿದರು.ನಗರದ ಹೊಸಮಠದಲ್ಲಿ ಶರಣ ಸಾಹಿತ್ಯ ಪರಿಷತ್ತು, ಜಿಲ್ಲಾ ಮತ್ತು ತಾಲೂಕು ಕದಳಿ ವೇದಿಕೆ ಹಾಗೂ ಸಾಹಿತಿ ಕಲಾವಿದರ ಬಳಗದ ಆಶ್ರಯದಲ್ಲಿ ಏರ್ಪಡಿಸಿದ್ದ ವಚನ ಚಿಂತನ ಮಂಥನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಾರುತಿ ಶಿಡ್ಲಾಪೂರ ಮಾತನಾಡಿ, ಕೌಟುಂಬಿಕ ಸಾಮರಸ್ಯ ಇಂದು ಪ್ರಧಾನ ಮೌಲ್ಯವಾಗಿದೆ. ಸಂಸ್ಕಾರ ಭಾರತ ನಿರ್ಮಾಣವಾಗಲು ಚಿಂತನೆಗಳು ಬಹು ಮುಖ್ಯ ಎಂದು ಹೇಳಿ ಮಕ್ಕಳಿಗೆ ವಚನ ಪಾಠ, ವಚನಾರ್ಥಗಳನ್ನು ತಿಳಿಸಿ ಜವಾಬ್ದಾರಿಯುತ ನಾಗರಿಕರನ್ನಾಗಿ ರೂಪಿಸಬೇಕಾಗಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಅಮೃತಮ್ಮ ಶೀಲವಂತರ ಮಾತನಾಡಿ, ಮನೆ ಮಕ್ಕಳಿಗೆ ಶರಣರ ವಿಚಾರಧಾರೆಗಳನ್ನು ತಿಳಿಸಿ ಮನೆಯಿಂದಲೇ ಆದರ್ಶ ಸಮಾಜದ ದೀಕ್ಷೆ ನೀಡಬೇಕು ಮಕ್ಕಳು ನಾವು ಹೇಳಿದಂತೆ ಕೇಳುತ್ತಾರೆ. ಬೆಳೆದ ನಂತರ ನಾವು ಕೊಟ್ಟ ಆದರ್ಶಗಳೇ ಅವರ ಪಾಲಿನ ಜೀವನ ಬುಟ್ಟಿ ಆಗಿರುತ್ತವೆ ಎಂದರು. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಎಂ.ಎಸ್. ಕೋರಿಶೆಟ್ಟರ, ಅಮೃತಮ್ಮ ಶೀಲವಂತರ, ಚಂಪಾ ಹುಣಸಿಕಟ್ಟಿ, ಅಜ್ಜಪ್ಪಗೌಡರ, ಲಲಿತಾ ಹೊರಡಿ, ಎಂ.ಬಿ. ಸತೀಶ, ಎಸ್. ಆರ್. ಹಿರೇಮಠ, ಶಿವಬಸವ ಬೆಳಗಾಂಕರ ಸೇರಿದಂತೆ 12 ಗಣ್ಯರನ್ನು ಸನ್ಮಾನಿಸಲಾಯಿತು. ಮುಖ್ಯ ಉಪನ್ಯಾಸವನ್ನು ಹಿರಿಯ ಸಾಹಿತಿ ಸತೀಶ ಕುಲಕಲರ್ಣಿ ನೀಡಿದರು. ಕಾರ್ಯಕ್ರಮದಲ್ಲಿ ಭಗತ್ ಕಾಲೇಜಿನ ಅಧ್ಯಕ್ಷ ಸತೀಶ ಬಾಗಣ್ಣನವರ, ಶರಣಯ್ಯ ಹಿರೇಮಠ ಮಾತನಾಡಿದರು. ಸಮಾರಂಭದಲ್ಲಿ ನ್ಯಾಯವಾದಿ ಎಸ್.ಜಿ. ಹೊನ್ನಪ್ಪನವರ, ಪಾರ್ವತಮ್ಮ ಹಲಗಣ್ಣನವರ, ಲೇಖಕಿ ಲೀಲಾವತಿ ಪಾಟೀಲ, ಶೈಲಾ ಕೋರಿಶೆಟ್ಟರ, ಶಂಕರಯ್ಯ ಹೆಬ್ಬಳ್ಳಿಮಠ, ಕಮಲಾ ಬುಕ್‌ಶೆಟ್ಟಿ, ನಿರ್ಮಲಾ ವಡ್ನಾಳಮಠ, ಜ್ಯೋತಿ ಬಶೆಟ್ಟಿಯವರ, ರುದ್ರಾಕ್ಷಿ ಬೆಂಬಳಗಿ, ರತ್ನಾ ಹಿರೇಮಠ, ಕಾತ್ಯಾಯಿನಿ ಮೇವುಂಡಿಮಠ, ಲಲಿತಾ ಹೆಬ್ಬಳ್ಳಿಮಠ ಇತರರು ಪಾಲ್ಗೊಂಡಿದರು. ಅಕ್ಕಮ್ಮ ಭರತನೂರಮಠ ವಚನ ಪ್ರಾರ್ಥಿಸಿದರು. ಜಿ.ಎಂ. ಓಂಕಾರಣ್ಣನವರ ನಿರೂಪಿಸಿದರು. ಶೋಭಾ ಮೇವುಂಡಿಮಠ ವಂದಿಸಿದರು.