- ಸುರಪುರ : ಪಿಎಲ್ಡಿ ಬ್ಯಾಂಕಿನ 63ನೇ ವಾರ್ಷಿಕ ಮಹಾಸಭೆ
-----ಕನ್ನಡಪ್ರಭ ವಾರ್ತೆ ಸುರಪುರ
ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ನ ಅಭಿವೃದ್ಧಿಯಲ್ಲಿ ಷೇರುದಾರರ ಸಹಕಾರ ಮುಖ್ಯವಾಗಿದೆ ಎಂದು ಶಾಸಕ ರಾಜಾ ವೇಣುಗೋಪಾಲ ನಾಯಕ ತಿಳಿಸಿದರು.ನಗರದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪಿಎಲ್ಡಿ ಬ್ಯಾಂಕಿನ 63ನೇ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, ರೈತರ ಏಳಿಗೆಗಾಗಿ ಈ ಬ್ಯಾಂಕ್‌ನ್ನು ಮಾಜಿ ಶಾಸಕ ರಾಜಾ ಕುಮಾರ ನಾಯಕ ಅವರು ಸ್ಥಾಪಿಸಿದ್ದರು ಎಂದರು.
ಪ್ರಸ್ತುತ ಬ್ಯಾಂಕಿನ ಬಂಡವಾಳ 92.19 ಲಕ್ಷ ರು.ಗಳಾಗಿದೆ. ರೈತರು ಬ್ಯಾಂಕಿನಿಂದ ಸಾಲ ಪಡೆದು ಆರ್ಥಿಕವಾಗಿ ಸದೃಢರಾಗಬೇಕು. ಸಾಲ ವಸೂಲಾತಿಯಲ್ಲಿ ಬ್ಯಾಂಕ್ ಸಾಕಷ್ಟು ಪ್ರಗತಿ ಸಾಧಿಸಿದೆ. ರೈತರು ತಾವು ಪಡೆದುಕೊಂಡಿರುವ ಸಾಲವನ್ನು ಸರಿಯಾದ ಸಮಯಕ್ಕೆ ಮರು ಪಾವತಿಸಿದರೆ ಮತ್ತೆ ಸಾಲ ಮಂಜೂರುಗೊಳಿಸಲು ಅನುಕೂಲವಾಗುತ್ತದೆ. ಹುಣಸಗಿಯಲ್ಲಿ ಬ್ಯಾಂಕಿನ ಶಾಖೆಯನ್ನು ಪ್ರಾರಂಭಿಸಲು ಹಾಗೂ ಸುರಪುರ ಬ್ಯಾಂಕಿನ ಕಟ್ಟಡವನ್ನು ನಿರ್ಮಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಬಸನಗೌಡ ಪಾಟೀಲ್ ದೇವಾಪುರ ಮಾತನಾಡಿ, ಬ್ಯಾಂಕ್ ಸದಸ್ಯರ ಸಂಖ್ಯೆ 9926 ಇದ್ದು, ಇದರಲ್ಲಿ 92.19 ಲಕ್ಷ ಷೇರು ಬಂಡವಾಳ ಇರುತ್ತದೆ. ಈ ವರ್ಷ ಮಾರ್ಚ್ ರವರೆಗೆ ಶೇ.86.60 ವಸೂಲಾತಿ ಸಾಧಿಸಲಾಗಿದೆ ಎಂದು ತಿಳಿಸಲು ಸಂತೋಷವೆನ್ನಿಸುತ್ತದೆ. 2023-24ರ ಸಾಲಿಗೆ ನಮ್ಮ ಬ್ಯಾಂಕ್ ಟ್ರ್ಯಾಕ್ಟರ್ ಹಾಗೂ ವಿವಿಧ ಯೋಜನೆಗಳಲ್ಲಿ 162.86 ಲಕ್ಷ ಆರ್ಥಿಕ ಹಂಚಿಕೆ ಮಾಡಲಾಗಿದೆ ಎಂದರು.
ವ್ಯವಸ್ಥಾಪಕ ರಾಜಶೇಖರ ದಾಯಗೋಡೆ ಬ್ಯಾಂಕಿನ ಲೆಕ್ಕಪತ್ರ ಮಂಡಿಸಿದರು. ಬ್ಯಾಂಕಿನ ರಾಜ್ಯ ನಿರ್ದೇಶಕ ರಾಯಪ್ಪಗೌಡ ದರ್ಶನಾಪುರ, ಬ್ಯಾಂಕಿನ ಉಪಾಧ್ಯಕ್ಷ ನಿಂಗಣ್ಣ ಕೆಂಗೂರಿ ಕವಡಿಮಟ್ಟಿ, ನಿರ್ದೇಶಕರಾದ ವಾಮನರಾವ್ ದೇಶಪಾಂಡೆ, ರಾಮಚಂದ್ರ ಪೂಜಾರಿ, ಧರೆಪ್ಪ ಮೇಟಿ, ಪ್ರಕಾಶ್ ಸಜ್ಜನ್, ಬಸನಗೌಡ ಪಾಟೀಲ್ ಕೋಳಿಹಾಳ, ರಾಜಾ ಸುಭಾಶ್ಚಂದ್ರ ನಾಯಕ, ಬಸಣ್ಣ ಎನ್. ಕಮತಗಿ, ಶೆಟ್ಟಿ ನಾಯಕಿ, ಸುರಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಂಗರಾಜ್ ಬಾಚಿಮಟ್ಟಿ, ಕೆಪಿಸಿಸಿ ಸದಸ್ಯ ಗುಂಡಪ್ಪ ಸೊಲ್ಲಾಪುರ, ರೈತರಾದ ನಂದನಗೌಡ ಪಾಟೀಲ್, ಬಸವರಾಜ ಬಾಗಲಿ, ಶರಣಗೌಡ ಪಾಟೀಲ್, ಶರಣಗೌಡ ಬಿರಾದಾರ್, ಎಂ.ಡಿ. ಯೂಸೂಫ್, ವಿಜಯಕುಮಾರ, ಶಿವಪ್ಪ ಬಳಗೊಂಡ, ಬಸಯ್ಯ ಗಣಾಚಾರಿ, ಮಲ್ಲಣ್ಣ ಬಳಗೊಂಡ, ರಾಚನಗೌಡ ಮುಷ್ಠಳ್ಳಿ, ಮೊಹ್ಮದ್ ಹುಸೇನ್, ಕಿರಿಯ ಕ್ಷೇತ್ರಾಧಿಕಾರಿ ಸಂಜೀವಕುಮಾರ, ತೋಟೇಂದ್ರ ಪಾಟೀಲ್, ಶರಣಯ್ಯಸ್ವಾಮಿ ಸೇರಿ ಇದ್ದರು. ಬಸವರಾಜ ಪಾರಾಪುರ ದೇವಾಪುರ ನಿರೂಪಿಸಿದರು. ಕ್ಷೇತ್ರಾಧಿಕಾರಿ ನಿಂಗಪ್ಪ ಎಚ್. ವಂದಿಸಿದರು.----
13ವೈಡಿಆರ್7: ಸುರಪುರ ನಗರದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ನಡೆದ ಪಿಎಲ್ಡಿ ಬ್ಯಾಂಕಿನ 63ನೇ ವಾರ್ಷಿಕ ಮಹಾಸಭೆಯಲ್ಲಿ ಶಾಸಕ ರಾಜಾ ವೇಣುಗೋಪಾಲ ನಾಯಕ, ಬ್ಯಾಂಕ್ ಅಧ್ಯಕ್ಷ ಬಸವನಗೌಡ ಪಾಟೀಲ್ ದೇವಾಪುರ ಸೇರಿದಂತೆ ಬ್ಯಾಂಕಿನ ನಿರ್ದೇಶಕರು ಇದ್ದರು.